Trending News: ಅಪರೂಪದ ಮರಿಗೆ ಜನ್ಮ ನೀಡಿದ ಆಮೆ, ಎಲ್ಲಿ ಗೊತ್ತಾ?

ಚೆಲೋನಾಯಿಡಿಸ್ ನಿಗ್ರಾ ಜಾತಿಯ ಎರಡು ಆಮೆಗಳು ಕಳೆದ ತಿಂಗಳು ಸರ್ವಿಯಾನ್ ಗ್ರಾಮದ ಟ್ರೋಪಿಕ್ವೇರಿಯಂ ಮೃಗಾಲಯದಲ್ಲಿ ಜನಿಸಿವೆ. ಈ ಪೈಕಿ ಬಿಳಿ ಬಣ್ಣವನ್ನು ಹೊಂದಿದ್ದು, ಇಂಥ ಜನನ ಆಮೆಗಳ ಸಂತತಿಯಲ್ಲಿ ತೀರ ಅಪರೂಪವಾಗಿದೆ.

Trending News: ಅಪರೂಪದ ಮರಿಗೆ ಜನ್ಮ ನೀಡಿದ ಆಮೆ, ಎಲ್ಲಿ ಗೊತ್ತಾ?
ಆಮೆ
Follow us
TV9 Web
| Updated By: Rakesh Nayak Manchi

Updated on:Jun 06, 2022 | 2:51 PM

ಆಮೆಯೊಂದು ಅಪರೂಪದ ಮರಿಗೆ ಜನ್ಮ ನೀಡಿದ ಘಟನೆ ಸ್ವಿಸ್ ಮೃಗಾಲಯದಲ್ಲಿ ನಡೆದಿದೆ. ರಾಯಿಟರ್ಸ್ ವರದಿಯ ಪ್ರಕಾರ, ಚೆಲೋನಾಯಿಡಿಸ್ ನಿಗ್ರಾ ಜಾತಿಯ ಎರಡು ಆಮೆಗಳು ಕಳೆದ ತಿಂಗಳು ಸರ್ವಿಯಾನ್ ಗ್ರಾಮದ ಟ್ರೋಪಿಕ್ವೇರಿಯಂ ಮೃಗಾಲಯದಲ್ಲಿ ಜನಿಸಿವೆ. ಮೃಗಾಲಯದ ಹೇಳಿಕೆಯ ಪ್ರಕಾರ, ಒಂದು ಮರಿ ತನ್ನ ಅಮ್ಮನಂತೆ ಕಪ್ಪು ಬಣ್ಣವನ್ನು ಹೊಂದಿದೆ. ಆದರೆ ಮತ್ತೊಂದು ಮರಿ ಬಿಳಿ ಬಣ್ಣ (Albino Galapagos) ಹೊಂದಿದೆ.

ಇದನ್ನೂ ಓದಿ: Viral Video: ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದು ವೈರಲ್

ಮಾನವರಲ್ಲಿ 20,000 ವ್ಯಕ್ತಿಗಳಲ್ಲಿ ಒಬ್ಬರಲ್ಲಿ ಒಂದು ಇಂಥ ಪ್ರಕರಣ ಕಂಡುಬರುತ್ತದೆ. ಆಮೆಗಳಲ್ಲಾದರೆ ತೀರಾ ಅಪರೂಪವಾಗಿದ್ದು, ಸುಮಾರು 1 ಲಕ್ಷ ಆಮೆಗಳ  ಪೈಕಿ ಒಂದರಲ್ಲಿ ಕಂಡುಬರುತ್ತದೆ. ಯೂಟ್ಯೂಬ್‌ನಲ್ಲಿ ರಾಯಿಟರ್ಸ್ ಹಂಚಿಕೊಂಡ ಕ್ಲಿಪ್‌ನಲ್ಲಿ ಪೊದೆಗಳ ನಡುವೆ ತೆವಳುತ್ತಿರುವ ಎರಡು ಆಮೆಗಳನ್ನು ಕಾಣಬಹುದು. ಅಪರೂಪದ ಬಿಳಿ ಆಮೆ ಮರಿ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಪೊಲೀಸ್​ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್​

ಅಳಿವಿನಂಚಿನಲ್ಲಿರುವ ಆಮೆಗಳು ಜಾತಿ ಸಂರಕ್ಷಣಾ ಕಾರ್ಯಕ್ರಮದ ಭಾಗವಾಗಿ ಜನಿಸಿದವು. ಅಲ್ಬಿನೋ ಅಪರೂಪದ ಮತ್ತು ಅಸಾಧಾರಣ ಜನನವಾಗಿದೆ. ಅಲ್ಬಿನೋ ಆಮೆ ಮರಿಯ ಜನನದ ಬಗ್ಗೆ ಫೇಸ್ ಬುಕ್​ನಲ್ಲಿ ಪ್ರಕಟಿಸಿದ ಮೃಗಾಯಲದ ಅಧಿಕಾರಿಗಳು, ತಮ್ಮ ಪೋಷಕರಿಂದ ದೂರದಲ್ಲಿರುವ ಹೊಸ ಮನೆಯಲ್ಲಿ ಆಶ್ರಯ ನೀಡಲಾಗಿದೆ. ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಆರೋಗ್ಯವಾಗಿವೆ. ಅವುಗಳನ್ನು ನೋಡಲು ಮತ್ತು ಪ್ರಕೃತಿಯ ಈ ಹೊಸ ವಿದ್ಯಮಾನವನ್ನು ವೀಕ್ಷಿಸಲು ಟ್ರೋಪಿಕ್ವೇರಿಯಂಗೆ ಬರಬಹುದು ಎಂದಿದ್ದಾರೆ.

ವೀಡಿಯೋ ವೀಕ್ಷಿಸಿ:

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Mon, 6 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ