
ಸಾಮಾಜಿಕ ಜಾಲತಾಣಗಳು ಪ್ರತಿಭೆಗಳಿಗೆ ಒಂದೊಳ್ಳೆ ವೇದಿಕೆಯಾಗಿದೆ. ಆದರೆ ತಮಾಷೆಯಾಗಿ ಮಾಡುವ ಕೆಲವು ವಿಡಿಯೋಗಳಿಂದ ಪಜೀತಿ ಉಂಟಾಗಬಹುದು ಎಂಬುದಕ್ಕೆ ಇಲ್ಲೊಂದು ಸಾಕ್ಷಿ ಇದೆ. ಉತ್ತರ ಪ್ರದೇಶದ ಘಾಸಿಯಾಬಾದ್ನ(Ghaziabad) ವ್ಯಕ್ತಿಯೋರ್ವ ಗನ್(Gun) ತೋರಿಸುತ್ತಾ ನಾನು ಡಾನ್(Don) ಆಗ್ತೇನೆ ಎಂದು ಬಾಲಿವುಡ್(Bollywood) ಸ್ಟೈಲ್ನಲ್ಲಿ ಪೋಸ್ ಕೊಟ್ಟಿದ್ದಾನೆ. ಅಷ್ಟಕ್ಕೇ ಮುಗಿದಿಲ್ಲ ಬಿಲ್ಡ್ಅಪ್ ಕೊಡುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದೀಗ ಪೋಲೀಸರ ಅಥಿತಿಯಾಗಿದ್ದಾನೆ.
ಘಾಜಿಯಾಬಾದ್ನ ರಿತಿಕ್ ಮಲ್ಲಿಕ್, ಗನ್ ಹಿಡಿದು ಪೋಸ್ ಕೊಟ್ಟಿದ್ದಾನೆ. ಅರೆಸ್ಟ್ ಆದ ಬಳಿಕ ರಿತಿಕ್ನಿಂದ ಗನ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತಂತೆ ಪೊಲೀಸ್ ಅಧಿಕಾರಿ ಸಂದೀಪ್ ಕುಮಾರ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ.
ಓರ್ವ ವ್ಯಕ್ತಿ ಬಂದೂಕಿನ ಮೇಲಿನ ಪ್ರೀತಿಯಿಂದ ಜೈಲಿಗೆ ಬಂದಿದ್ದಾನೆ. ಅದಾಗ್ಯೂ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಟ್ವೀಟ್ ಮಾಡಲಾಗಿದೆ. ಮಲ್ಲಿಕ್ ಜನರಲ್ಲಿ ಭಯವನ್ನು ಉಂಟು ಮಾಡಲು ಎರಡು ಪಿಸ್ತೂಲ್ ಹಿಡಿದು ಡಾನ್ ಆಗುತ್ತೇನೆ ಎಂದು ಪೋಸ್ ಕೊಟ್ಟಿದ್ದಾರೆ. ಜತೆಗೆ ಕ್ರಿಮಿನಲ್ ಗ್ಯಾಂಗ್ ಸೇರುತ್ತೇನೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ 11 ಸುವೋ ಮೋಟು ಪ್ರಕರಣಗಳನ್ನು ದಾಖಲಿಸಿಕೊಂಡ ಆಂಧ್ರ ಪ್ರದೇಶ ಹೈಕೋರ್ಟ್!
100 ಕೋಟಿ ಪಡೆಯುವ ಶಾರುಖ್ ಖಾನ್ರನ್ನೂ ಮೀರಿಸಿದ ಅಜಯ್ ದೇವಗನ್; ಹಾಗಾದ್ರೆ ಅವರ ಸಂಭಾವನೆ ಎಷ್ಟು?
(Man build up to want become a don and show gun arrested after video goes viral )