Viral: ಪ್ರೇಮಿಗಳ ದಿನದಂದು ಗಂಡ ಕೊಟ್ಟ ಪೋಷೆ ಕಾರು ಬೇಡ ಎಂದ ಪತ್ನಿ, ಕಾರಿನ ಗತಿ ಏನಾಯ್ತು ನೋಡಿ

ಪ್ರೇಮಿಗಳ ದಿನ ಹೆಂಡತಿಯನ್ನು ಖುಷಿಪಡಿಸುವ ಸಲುವಾಗಿ ಪೋಷೆ ಕಾರು ಉಡುಗೊರೆ ನೀಡಿದ್ದು, ಆಕೆ ಅದನ್ನು ನಿರಾಕರಿಸಿದ್ದಾಳೆ, ನಂತರ ನಡೆದಿದ್ದೇ ಬೇರೆ. ಅವರಿಬ್ಬರ ಜಗಳ ಅಂತ್ಯಗೊಳ್ಳಬಹುದೆಂಬ ಪತಿ ನಂಬಿದ್ದ, ಹಾಗಾಗಿ 27 ಲಕ್ಷ ರೂ. ಕೊಟ್ಟು ಸೆಕೆಂಡ್ ಹ್ಯಾಂಡ್ ಪೋರ್ಷೆ ಕಾರನ್ನು ಕೊಂಡುಕೊಂಡಿದ್ದ. ಹೆಂತಿಗೆ ಉಡುಗೊರೆಯಾಗಿ ನೀಡಲು ಬಯಸಿದ್ದ, ಮಾರ್ಚ್​ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಕಾರನ್ನು ನೀಡುವುದಾಗಿ ಯೋಜಿಸಿದ್ದ, ಆದರೆ ಪ್ರೇಮಿಗಳ ದಿನದಂದೇ ಕೊಟ್ಟರೆ ಹೆಚ್ಚು ಖುಷಿ ಪಡುತ್ತಾಳೆಂದು ಅಂದೇ ಕೊಟ್ಟಿದ್ದ.

Viral: ಪ್ರೇಮಿಗಳ ದಿನದಂದು ಗಂಡ ಕೊಟ್ಟ ಪೋಷೆ ಕಾರು ಬೇಡ ಎಂದ ಪತ್ನಿ, ಕಾರಿನ ಗತಿ ಏನಾಯ್ತು ನೋಡಿ
ಕಾರು
Image Credit source: India Today

Updated on: Feb 27, 2025 | 2:35 PM

ಮಾಸ್ಕೋ, ಫೆಬ್ರವರಿ 27:   ನಿತ್ಯ ಪತಿ-ಪತ್ನಿ ನಡುವೆ ಕಲಹಗಳು ನಡೆಯುತ್ತಲೇ ಇತ್ತು. ಈ ಸಂಬಂಧದಲ್ಲಿ ಹೊಸತನ ತರಲು ಜಗಳವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಪತ್ನಿಗೆ ಪೋಷೆ ದುಬಾರಿ ಕಾರನ್ನು ಗಿಫ್ಟ್​ ಆಗಿ ನೀಡಿದ್ದಾನೆ, ಆದರೆ ಆಕೆ ಅದನ್ನು ನಿರಾಕರಿಸಿದ ಕಾರಣ ಆತ ಅದನ್ನು ಕಸದ ಕಂಟೈನರ್​ಗೆ ಎಸೆದಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

ಅವರಿಬ್ಬರ ಜಗಳ ಅಂತ್ಯಗೊಳ್ಳಬಹುದೆಂಬ ಪತಿ ನಂಬಿದ್ದ, ಹಾಗಾಗಿ 27 ಲಕ್ಷ ರೂ. ಕೊಟ್ಟು ಸೆಕೆಂಡ್ ಹ್ಯಾಂಡ್ ಪೋರ್ಷೆ ಕಾರನ್ನು ಕೊಂಡುಕೊಂಡಿದ್ದ. ಹೆಂತಿಗೆ ಉಡುಗೊರೆಯಾಗಿ ನೀಡಲು ಬಯಸಿದ್ದ, ಮಾರ್ಚ್​ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಕಾರನ್ನು ನೀಡುವುದಾಗಿ ಯೋಜಿಸಿದ್ದ, ಆದರೆ ಪ್ರೇಮಿಗಳ ದಿನದಂದೇ ಕೊಟ್ಟರೆ ಹೆಚ್ಚು ಖುಷಿ ಪಡುತ್ತಾಳೆಂದು ಅಂದೇ ಕೊಟ್ಟಿದ್ದ.

ಅದು ಸೆಕೆಂಡ್ ಹ್ಯಾಂಡ್ ಕಾರಾಗಿದ್ದ ಕಾರಣ ಅಲ್ಲಲ್ಲಿ ಹಾಳಾಗಿತ್ತು, ಹಳೆಯ ಕಾರಿಗೆ ಕೆಂಪು ರಿಬ್ಬನ್ ಹಾಕಿಕೊಂಡು ಬಂದಿದ್ದಕ್ಕೆ ಕೋಪಗೊಂಡ ಪತ್ನಿ ಮತ್ತಷ್ಟು ಬೈದು ಕಾರನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ. ಅದಕ್ಕೆ ಕೋಪಗೊಂಡ ಪತಿ ಅದನ್ನು ಮನೆಯ ಹೊರಗಿರುವ ಕಸದ ಕಂಟೈನರ್ ಮೇಲೆ ನಿಲ್ಲಿಸಿದ್ದಾನೆ, ಇದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿತು. ಐಷಾರಾಮಿ ಕಾರನ್ನು ಕಸದ ಬುಟ್ಟಿಗೆ ಎಸೆಯುವುದೇ ಎಂದು ಜನರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಮತ್ತಷ್ಟು ಓದಿ: Viral: ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿದ ಯುವಕ; ಒದ್ದು ಬುದ್ಧಿ ಕಲಿಸಿದ ಪೊಲೀಸ್

ಸುಮಾರು ಎರಡು ವಾರಗಳಿಂದ ಆ ಕಾರು ಅಲ್ಲಿಯೇ ಇದೆ. ಸ್ಥಳೀಯ ನಿವಾಸಿಗಳು ಆ ಕಾರಿನ ಫೋಟೊ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಆ ಕಾರಿನ ಮಾಲೀಕ ಮತ್ತೆ ಆ ಕಾರನ್ನು ಮನೆಯಂಗಳದಲ್ಲಿ ಇರಿಸುತ್ತಾನೋ ಅಥವಾ ಮಾರಾ ಮಾಡುತ್ತಾನೋ ಎಂಬುದು ತಿಳಿದುಬಂದಿಲ್ಲ.

ಅವರ ಮದುವೆಯನ್ನು ಕಾಪಾಡಿಕೊಳ್ಳಲು ಇದು ಕೊನೆಯ ಪ್ರಯತ್ನವಾಗಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಗಂಡ ಅಷ್ಟೊಂದು ಪ್ರೀತಿ ಇಂದ ತಂದುಕೊಟ್ಟಾಗ ಅದನ್ನು ಗೌರವಿಸುವುದನ್ನು ಪತ್ನಿ ಕಲಿಯಬೇಕು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ