ಸಾಮಾಜಿಕ ಜಾಲತಾಣದಲ್ಲಿ ಫುಡ್ ಬ್ಲಾಗರ್ (Food Blogger) ಗಳು ಹಂಚಿಕೊಳ್ಳುವ ಚಿತ್ರ ವಿಚಿತ್ರ ಆಹಾರ ಪದಾರ್ಥಗಳು ಆಗಾಗ ನೆಟ್ಟಿಗರಲ್ಲಿ ಅಚ್ಚರಿಯನ್ನು ಉಂಟು ಮಾಡುತ್ತವೆ. ಈ ಹಿಂದೆ ಕುರ್ಕುರೆ ಮಿಲ್ಕ್ಶೇಕ್, ದೋಸೆಯ ಐಸ್ಕ್ರೀಮ್ ಹೀಗೆ ಹಲವು ವಿಧದ ಫುಡ್ಗಳನ್ನು ದೇಶದ ಹಲವೆಡೆ ಟೇಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣ ಬಳಕೆದಾರರೊಂದಿಗೆ ಫುಡ್ ಬ್ಲಾಗರ್ಗಳು ಹಂಚಿಕೊಂಡಿದ್ದಾರೆ. ಅದನ್ನು ಹಲವರು ಮೆಚ್ಚಿಕೊಂಡರೆ ಇನ್ನೂ ಕೆಲವರು ಮೂಗು ಮುರಿದಿದ್ದಾರೆ. ಇದೀಗ ರಸ್ತೆ ಬದಿ ವ್ಯಾಪಾರಿಯೊಬ್ಬರು ಜಾಮೂನ್ ಹಾಕಿ ಪರೋಟ (Jamun Paratha) ಮಾಡಿದ್ದಾರೆ. ಇದರ ವಿಡಿಯೋವನ್ನು ಫುಡ್ ಬ್ಲಾಗರ್ ಒಬ್ಬರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಇದೇನು ತಿಂಡಿ ಎಂದು ಉದ್ಘಾರವೆಳೆದಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಸೋನಿಯಾ ನೇಗಿ ಎನ್ನುವ ಫುಡ್ ಬ್ಲಾಗರ್ ಒಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪರೋಟ ಹಿಟ್ಟಿನೊಳಗೆ ಎರಡು ಜಾಮೂನ್ ಹಾಕಿ ಪರೋಟ ಲಟ್ಟಿಸಲಾಗಿದೆ. ನಂತರ ಅದನ್ನು ಬೇಯಿಸಿ ಅದಕ್ಕೆ ಜಾಮೂನಿನ ಸಿಹಿ ರಸವನ್ನು ಹಾಕಲಾಗಿದೆ. ವಿಡಿಯೋ ಹಂಚಿಕೊಂಡ ಫುಡ್ ಬ್ಲಾಗರ್, ನಿಜಕ್ಕೂ ಇದು ರುಚಿಯಾಗಿದೆ ಎಂದಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.,ಕೆಲವರು ಇದನ್ನು ಒಮ್ಮೆಯ ಟೇಸ್ಟ್ ಮಾಡಬೇಕು ಎಂದರೆ ಇನ್ನೂ ಕೆಲವರು ಪಾಲ್ತೂ ಎಕ್ಸ್ಪೆರಿಮೆಂಟ್ ಎಂದಿದ್ದಾರೆ. ಒಟ್ಟಿನಲ್ಲಿ ಮತ್ತೊಂದು ಹೊಸ ತರಹದ ಫುಡ್ ನೊಡಿ ನೆಟ್ಟಗರು ಖುಷಿಗೊಂಡಿದ್ದಾರೆ. ಸದ್ಯ ವಿಡಿಯೋ 44 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 300 ಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಅಳುತ್ತಿದ್ದ ಪ್ರಯಾಣಿಕರ ಮಗುವನ್ನು ಎತ್ತಿಕೊಂಡು ಸಮಾಧಾನಿಸಿದ ಗಗನಸಖಿ: ವಿಡಿಯೋ ವೈರಲ್