Viral Video: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮುಸ್ಲಿಂ ವ್ಯಕ್ತಿ, ಕೈಕಾಲು ಮುರಿದು ಹಾಕಿದ ಯುಪಿ ಪೊಲೀಸರು 

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 11, 2024 | 5:57 PM

ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ಹಾಲು ತರಲು ಹೋದ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಆ ಮಹಿಳೆಯನ್ನು ಹಿಂಬಾಲಿಸಿದ್ದು ಮಾತ್ರವಲ್ಲದೆ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ  ಯುಪಿ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದು  ಸರಿಯಾಗಿ ಬೆಂಡೆತ್ತಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗಿದೆ. 

Viral Video: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮುಸ್ಲಿಂ ವ್ಯಕ್ತಿ, ಕೈಕಾಲು ಮುರಿದು ಹಾಕಿದ ಯುಪಿ ಪೊಲೀಸರು 
ವೈರಲ್​​ ವಿಡಿಯೋ
Follow us on

ಮಹಿಳೆಯರು ಅಥವಾ ಯುವತಿಯರು ದಾರಿಯಲ್ಲಿ ಒಬ್ಬಂಟಿಯಾಗಿ ಹೋಗುವಂತಹ ಸಂದರ್ಭದಲ್ಲಿ ಪುಂಡ ಪೋಕರಿಗಳು ಅವರನ್ನು ಚುಡಾಯಿಸುತ್ತಾರೆ. ಹೀಗೆ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸುವ, ಮಹಿಳೆಯರನ್ನು ಚುಡಾಯಿಸುವ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದೇ ಮತ್ತೊಂದು ಘಟನೆಯೊಂದು  ನಡೆದಿದ್ದು, ಮಹಿಳೆಯೊಬ್ಬರು ಬೆಳ್ಳಂಬೆಳಗ್ಗ ಹಾಲು ತರಲು ಅಂಗಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪುಂಡನೊಬ್ಬ ಆಕೆಯನ್ನು ಹಿಂಬಾಲಿಸುತ್ತಾ ಹೋಗಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಮಹಿಳೆ ದೂರಿನ ಮೇರೆಗೆ  ಯುಪಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಸರಿಯಾಗಿ ಬೆಂಡೆತ್ತಿದ್ದಾರೆ.  ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಅವ್ರೋಹಾ ಎಂಬಲ್ಲಿ ನಡೆದಿದ್ದು, ಮಹಿಳೆಯೊಬ್ಬರು ಬೆಳ್ಳಂಬೆಳಗ್ಗೆ ಹಾಲು ತರಲೆಂದು ಅಂಗಡಿಗೆ ಹೋದಂತಹ  ಸಂದರ್ಭದಲ್ಲಿ ಅತಾವುರ್‌ ರೆಹಮಾನ್‌ ಎಂಬವನು ಆ ಮಹಿಳೆಯನ್ನು ಹಿಂಬಾಲಿಸುತ್ತಾ ಹೋಗಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಭಯಗೊಂಡ ಮಹಿಳೆ ಸಹಾಯಕ್ಕಾಗಿ ಜೋರಾಗಿ ಕಿರುಚಿದ್ದಾರೆ. ಜನರ ಕೈಗೆ ಸಿಕ್ರೆ ಧರ್ಮದೇಟು ಗ್ಯಾರಂಟಿ ಎಂದು ಮಹಿಳೆ ಕಿರುಚುತ್ತಿದ್ದಂತೆ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಮಹಿಳೆಯ ದೂರಿನ ಮೇರೆಗೆ ಆತನನ್ನು ಯುಪಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  ಈ ಆಘಾತಕಾರಿ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 


ಈ ವಿಡಿಯೋವನ್ನು ಪ್ರಶಾಂತ್‌ (Prashant Umrao) ಎಂಬವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿ ರೆಹಮಾನ್‌ ಮಹಿಳೆಯೊಬ್ಬರನ್ನು ಹಿಂಬಾಲಿಸುತ್ತಾ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಇನ್ನೊಂದು ಬದಿಯ ವಿಡಿಯೋ ಫುಟೇಜ್‌ ಅಲ್ಲಿ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ರೆಹೆಮಾನ್‌ನನ್ನು ಬೆಂಡೆತ್ತಿ ಪೊಲೀಸರು ಎತ್ತಾಕಿಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹದು.

ಇದನ್ನೂ ಓದಿ: ಮಣ್ಣಿನೊಳಗೆ ಸಿಲುಕಿದ ಬೆಕ್ಕಿನ ಮರಿಯ ಪ್ರಾಣ ರಕ್ಷಿಸಿದ ಬೀದಿ ನಾಯಿ; ಹೃದಯಸ್ಪರ್ಶಿ ವಿಡಿಯೋ ವೈರಲ್‌

ಜೂನ್‌ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯುಪಿ ಪೊಲೀಸರ ನಡೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

 

Published On - 5:55 pm, Tue, 11 June 24