AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಣ್ಣಿನೊಳಗೆ ಸಿಲುಕಿದ ಬೆಕ್ಕಿನ ಮರಿಯ ಪ್ರಾಣ ರಕ್ಷಿಸಿದ ಬೀದಿ ನಾಯಿ; ಹೃದಯಸ್ಪರ್ಶಿ ವಿಡಿಯೋ ವೈರಲ್‌

ನಾಯಿ ಮತ್ತು ಬೆಕ್ಕುಗಳು ಬದ್ಧ ವೈರಿಗಳು ಅಂತಾನೇ ಹೇಳಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ಎರಡೂ ಪ್ರಾಣಿಗಳು ಕಚ್ಚಾಡುತ್ತಾರೆ. ಆದರೆ ಇಲ್ಲೊಂದು ಹೃದಯಸ್ಪರ್ಶಿ ಘಟನೆ ನಡೆದಿದ್ದು, ಬೀದಿ ನಾಯಿಯೊಂದು ಮಣ್ಣಿನಡಿ ಸಿಲುಕಿದಂತಹ ಬೆಕ್ಕಿನ ಮರಿಯ ಪ್ರಾಣ ರಕ್ಷಿಸಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ಗಳಿಸಿದೆ. 

Viral Video: ಮಣ್ಣಿನೊಳಗೆ ಸಿಲುಕಿದ ಬೆಕ್ಕಿನ ಮರಿಯ ಪ್ರಾಣ ರಕ್ಷಿಸಿದ ಬೀದಿ ನಾಯಿ; ಹೃದಯಸ್ಪರ್ಶಿ ವಿಡಿಯೋ ವೈರಲ್‌
ವೈರಲ್​​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Jun 11, 2024 | 4:45 PM

Share

ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲಿ ಮೇಲು ಎಂದು ಹೇಳುವ ಮಾತೊಂದಿದೆ. ಈ ಮಾತು ಸತ್ಯವೂ ಹೌದು. ಪ್ರಾಣಿಗಳಿಗಿರುವ ಮುಗ್ಧತೆ, ಬುದ್ಧಿವಂತಿಕೆ, ಮಾನವೀಯ ಗುಣ ಮನುಷ್ಯರಲ್ಲಿ ತುಸು ಕಡಿಮೆಯೇ ಇದೆ. ಮನುಷ್ಯರಾದ ನಾವುಗಳು ದ್ವೇಷ ಅಸೂಯೆಯನ್ನು ಬೆಳೆಸಿಕೊಂಡರೆ,  ಪ್ರಾಣಿಗಳು ಮಾತ್ರ ಕಷ್ಟದಲ್ಲಿರುವ ಇತರೆ ಪ್ರಾಣಿಗಳಿಗೆ ತನ್ನಿಂದಾಗುವ ಸಹಾಯವನ್ನು ಮಾಡುತ್ತದೆ. ಪ್ರಾಣಿಗಳ ಈ ಮಾನವೀಯ ಗುಣಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದೇ ವಿಡಿಯೋವೊಂದು ವೈರಲ್‌ ಆಗಿದ್ದು, ಬೀದಿ ನಾಯಿಯೊಂದು ಮಣ್ಣಿನಡಿ ಸಿಲುಕಿದಂತಹ ಬೆಕ್ಕಿನ ಮರಿಯನ್ನು ರಕ್ಷಿಸಿದೆ.

ಈ ಘಟನೆ ಚೀನಾದಲ್ಲಿ ನಡೆದಿದ್ದು, ಇಲ್ಲಿನ ಫುಜಿಯಾನ್‌ ಪ್ರಾಂತ್ಯದ ಫುಝೌ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ಬಳಿ ಹುಯಿಹುಯಿ ಹೆಸರಿನ ಬೀದಿನಾಯಿಯು ಮಣ್ಣಿನಡಿ ಸಿಲುಕಿದಂತಹ ಬೆಕ್ಕಿನ ಮರಿಯನ್ನು ರಕ್ಷಿಸುವ ಮೂಲಕ ಮಾನವೀಯತೆಯನ್ನು ಮೆರೆದಿದೆ. ಮೊನ್ನೆ ಭಾನುವಾರದಂದು ವಿಶ್ವವಿದ್ಯಾನಿಯದ ವಿದ್ಯಾರ್ಥಿಗಳು ಹುಯಿಹುಯಿ ಶ್ವಾನ ಆತಂಕದಿಂದ ವರ್ತಿಸುವುದನ್ನು, ಬೊಗಳುವುದನ್ನು ಹಾಗೂ ನೆಲವನ್ನು ಅಗೆಯುವುದನ್ನು ಗಮನಿಸುತ್ತಾರೆ. ಆ ತಕ್ಷಣದ ಶ್ವಾನದ ಬಳಿ ಧಾವಿಸಿದಂತಹ ವಿದ್ಯಾರ್ಥಿಗಳು ಮಣ್ಣಿನಡಿಯಲ್ಲಿ ಬೆಕ್ಕಿನ ಮರಿಯೊಂದು ಸಿಕ್ಕಿಹಾಕಿಕೊಂಡಿರುವುದನ್ನು ಗಮನಿಸುತ್ತಾರೆ. ಹೀಗೆ ಶ್ವಾನದ ಸಹಾಯದಿಂದ ವಿದ್ಯಾರ್ಥಿಗಳು ಪುಟಾಣಿ ಬೆಕ್ಕಿನ ಮರಿಯ ಪ್ರಾಣವನ್ನು ರಕ್ಷಿಸಿದ್ದಾರೆ. ಜೊತೆಗೆ ಸಣ್ಣಪುಟ್ಟ ಗಾಯಗಳಾದ ಬೆಕ್ಕನ್ನು ಆಸ್ಪತ್ರೆಗೂ ಸೇರಿಸಲಾಗಿದೆ.

ಈ ಕುರಿತ ವಿಡಿಯೋವನ್ನು Catshealdeprsn ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಬೀದಿನಾಯಿಯೊಂದು ಬೆಕ್ಕಿನ ಮರಿಯನ್ನು ರಕ್ಷಿಸಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಶ್ವಾನವೊಂದು ಮಣ್ಣಿನಡಿ ಸಿಲುಕಿದಂತಹ ಬೆಕ್ಕಿನ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತಹ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು. ವಿಶ್ವವಿದ್ಯಾನಿಲಯದ ಬಳಿ ನಾಯಿಯು ವಿಚಿತ್ರವಾಗಿ ಬೊಗಳುತ್ತಿರುವಂತಹ ಹಾಗೂ ಮಣ್ಣನ್ನು ಅಗೆಯುತ್ತಿರುವ ದೃಶ್ಯವನ್ನು ಕಂಡು ಅಲ್ಲಿಗೆ ಬಂದಂತಹ ಒಂದಷ್ಟು ವಿದ್ಯಾರ್ಥಿಗಳು ಮಣ್ಣಿನಡಿಯಲ್ಲಿ ಬೆಕ್ಕಿನ ಮರಿಯೊಂದು ಸಿಕ್ಕಿಹಾಕಿಕೊಂಡಿರುವುದನ್ನು ಗಮನಿಸುತ್ತಾರೆ. ನಂತರ ಆ ಬೆಕ್ಕಿನ ಮರಿಯನ್ನು ವಿದ್ಯಾರ್ಥಿಗಳು ರಕ್ಷಿಸಿದ್ದಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕೆರೆಯಲ್ಲಿ ಹಾಯಾಗಿ ಮಲಗಿದ ವ್ಯಕ್ತಿ, ಸಾವನ್ನಪ್ಪಿದ್ದಾನೆ ಎಂದು ಪೊಲೀಸರನ್ನು ಕರೆಸಿದ ಸ್ಥಳೀಯರು

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಶ್ವಾನದ ಈ ಮಾನವೀಯ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: