ಕ್ರಿಸ್ಮಸ್ ಎಲ್ಲೆಡೆ ಹೊಸ ಸಂಭ್ರಮವನ್ನು ತುಂಬಿದೆ. ಕ್ರಿಶ್ಚಿಯನ್ ಸಮುದಾಯದ ವಿಶೇಷ ದಿನವಾದ ಕ್ರಿಸ್ಮಸ್ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಆಶೀರ್ವಾದ ಪಡೆದುಕೊಳ್ಳುವ ಸಮಯ. ಈ ಶುಭ ಸಮಯದಲ್ಲಿ ನಾಯಿಯೊಂದನ್ನು ಕ್ರಿಸ್ಮಸ್ ಗಿಫ್ಟ್ ರೀತಿ ವ್ಯಕ್ತಿಯೊಬ್ಬ ಸುತ್ತುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಟಿಕ್ ಟಾಕ್ ವೀಡಿಯೋವನ್ನು ಸ್ಕೂಟಿ ಬಗ್ ಎನ್ನುವ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಮುದ್ದಾದ ನಾಯಿ ಗಿಫ್ಟ್ ಪ್ಯಾಕ್ ಮಾಡುವ ರೀತಿ ಪೇಪರ್ ಅನ್ನು ಅದರ ಮೈಗೆ ಸುತ್ತಿದರೂ ಸುಮ್ಮನೆ ಮಲಗಿಕೊಳ್ಳುವುದನ್ನು ಕಂಡು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ವೀಡಿಯೋ 40 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದಿದ್ದು, 4.7 ಮಿಲಿಯನ್ ಲೈಕ್ಸ್ ಅನ್ನು ಪಡೆದಿದೆ.
ನಾಯಿಯ ಮಾಲೀಕ ಸ್ಕಾಟ್ ಹಬಾರ್ಡ್ ಎನ್ನುವವರು ಈ ವಿಡೀಯೊವನ್ನು ಹಂಚಿಕೊಂಡಿದ್ದಾರೆ. ಗ್ರೇಸಿ ಎಂದು ಹೆಸರಿಟ್ಟಿರುವ ಈ ನಾಯಿಗೆ 8 ವರ್ಷ. ವೀಡಿಯೋದಲ್ಲಿ ಮೊದಲು ಬಣ್ಣದ ಚಿತ್ರವಿರುವ ಪೇಪರ್ ಗಮ್ಟೇಪ್, ಕತ್ತರಿ ಮತ್ತು ಕೆಂಪು ಬಣ್ಣದ ಹೂಗಳನ್ನು ನೆಲಕ್ಕೆ ಹಾಕಲಾಗುತ್ತದೆ. ಅದಕ್ಕೆ ನಾಯಿ ಮುದ್ದಗಿ ನಗುವನ್ನು ಬೀರುತ್ತದೆ. ನಂತರ ನಾಯಿಯನ್ನು ನೆಲಕ್ಕೆ ಮಲಗಿಸಿಕೊಂಡು ಪೇಪರ್ನಲ್ಲಿ ಸುತ್ತುತ್ತಾರೆ. ಬಳಿಕ ಅದಕ್ಕೆ ಗಪ್ಟೇಪ್ ಹಚ್ಚಲಾಗುತ್ತದೆ. ನಂತರ ಕೊನೆಯದಾಗಿ ಕೆಮಪು ಬಣ್ಣದ ಹೂವನ್ನು ನಾಯಿಯ ತಲೆಯ ಮೇಲೆ ಇರಿಸಲಾಗುತ್ತದೆ. ಇಷ್ಟೇಲ್ಲಾ ಮಾಡುವಾಗಲೂ ನಾಯಿ ಮುದ್ದಾಗಿ ಮಲಗಿಕೊಂಡಿರುವುದು ನೋಡುಗರ ಮನಗೆದ್ದಿದೆ. ನಾಯಿಯ ಮಾಲೀಕರು ಪ್ರತೀ ವರ್ಷದಂತೆ ಈ ವರ್ಷವೂ ಗ್ರೇಸಿಯನ್ನು ಗಿಫ್ಟ್ ಪ್ಯಾಕ್ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ.
We know what we want for Christmas ??
? @scottyhubs pic.twitter.com/jeBdJrlQad
— Happywayau (@happywayau) December 15, 2021
ನಾಯಿಯ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಆದರೆ ಕ್ರಿಸ್ಮಸ್ ಸಮಯದಲ್ಲಿ ನಾಯಿಯನ್ನೇ ಗಿಫ್ಟ್ ಮಾಡಿದ ವೀಡಿಯೋ ಈಗ ಎಲ್ಲರ ಮನ ಗದ್ದಿದ್ದೆ.