ಪ್ರೀತಿಯೇ ಹಾಗೆ. ಅದೊಂದು ರೀತಿಯ ಹೊಸ ಅನುಭವ. ಬದುಕಿನ ಹೊಸ ಪಯಣಕ್ಕೆ ಸಿಗುವ ಮುನ್ನುಡಿ. ಇಲ್ಲೊಂದು ಜೋಡಿಗಳ ಪ್ರೀತಿಯ ಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾರಿಸ್ನ ಐಫೆಲ್ ಟವರ್ (Eiffel Tower) ಎದುರು ಯುವಕನೊಬ್ಬ ಡೇಟಿಂಗ್ ಆ್ಯಪ್ (dating app )ನಲ್ಲಿ ಪರಿಚಯವಾದ ಯುವತಿಗೆ ಪ್ರಪೋಸ್ ಮಾಡಿದ ವಿಡಿಯೋ ಈಗ ನೆಟ್ಟಿಗರ ಮನಗೆದ್ದಿದೆ. ಲಾಮರ್ ಮತ್ತು ವೇಲೆನ್ಸಿಯಾ ಎನ್ನುವ ಜೋಡಿಯ ವಿಡಿಯೋ ಇದಾಗಿದೆ. ಇನ್ಸ್ಟಾಗ್ರಾಮ್ (Instagram)ನಲ್ಲಿ ಹಂಚಿಕೊಂಡ ಈ ವಿಡಿಯೋ 3.1 ಮಿಲಿಯನ್ ವೀಕ್ಷಣೆ ಪಡೆದಿದ್ದು, ಬಳಕೆದಾರರು ನಿಜವಾದ ಪ್ರೀತಿಗೆ ಯಾವುದೇ ಹಂಗಿಲ್ಲ ಎಂದಿದ್ದಾರೆ.
ಲಾಮರ್ 2019ರಲ್ಲಿ ವೇಲೆನ್ಸಿಯಾರನ್ನು ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು. ಅದಾದ ಬಳಿಕ ಕಳೆದ ಎರಡು ದಿನಗಳ ಹಿಂದೆ ಪ್ಯಾರಿಸ್ನಲ್ಲಿ ಇಬ್ಬರ ಸ್ನೇಹಿತನ ಮದುವೆಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಈ ವೇಳೆ ಲಾಮರ್ ಮತ್ತು ವೇಲೆನ್ಸಿಯಾ ಪ್ಯಾರಿಸ್ನಲ್ಲಿ ಭೇಟಿಯಾದ ದಿನವನ್ನು ನೆನಪಿಟ್ಟುಕೊಳ್ಳುವ ಸಲುವಾಗಿ ಫೋಟೋಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದರು. ಹೀಗಾಗಿ ಪ್ಯಾರಿಸ್ನ ಐಫೆಲ್ ಟವರ್ ಎದುರು ಒಬ್ಬರ ಹಿಂದೆ ಒಬ್ಬರು ನಿಂತು ಫೊಟೋ ತೆಗೆಸಿಕೊಳ್ಳಲು ನಿಂತಿದ್ದರು. ಈ ವೇಳೆ ಲಾಮರ್ ಮಂಡಿಯೂರಿ ಕುಳಿತು ಪ್ರೇಮ ನಿವೇದನೆ ಮಾಡಿದ್ದಾರೆ. ಇದರ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಲಾಮರ್ ಹಾಗೂ ವೇಲೆನ್ಸಿಯಾ ಚೆಂದದ ಉಡುಗೆ ತೊಟ್ಟು ನಿಂತಿರುವುದನ್ನು ಕಾಣಬಹುದು. ನಂತರ ಫೋಟೋಗ್ರಾಫರ್ ಇಬ್ಬರನ್ನೂ ಪೋಸ್ ನೀಡುವ ರೀತಿಯಲ್ಲಿ ನಿಲ್ಲಿಸಿ ಪೋಟೋ ತೆಗೆಯಬೇಕು ಎನ್ನುವಷ್ಟರಲ್ಲಿ ಲಾಮರ್ ಮಂಡಿಯೂರಿ ಕುಳಿತು ಪ್ರಪೋಸ್ ಮಾಡಿದ್ದಾನೆ. ಇದನ್ನು ಕಂಡು ವೇಲೆನ್ಸಿಯಾ ಖುಷಿಯಿಂದ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಸಂತೋಷದ ಎಮೋಜಿಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಪರಿಸರದ ಪ್ರಾಮುಖ್ಯತೆಯನ್ನು ಸಾರುವ ಅತಿದೊಡ್ಡ ಚಿತ್ರ ಬಿಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಯುವಕ
Published On - 2:04 pm, Sun, 16 January 22