ಮೊಬೈಲ್​​ ತೆಗೆಯಲು ಹೋಗಿ 36 ಗಂಟೆಗಳ ಕಾಲ ಚರಂಡಿಯೊಳಗೆ ಸಿಲುಕಿಕೊಂಡ ವ್ಯಕ್ತಿ

|

Updated on: Mar 26, 2024 | 3:35 PM

ವ್ಯಕ್ತಿಯೊಬ್ಬ ಕಿರುಚುತ್ತಿರುವುದು ಕೇಳಿ ಸ್ಥಳೀಯ ನಿವಾಸಿಗಳು ಅಗ್ನಿಶಾಮಕಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೋಲ್ಟೆಡ್ ಡ್ರೈನ್ ಮುಚ್ಚಳವನ್ನು ತೆಗೆದು ಸಿಕ್ಕಿಬಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಈವೇಳೆ 36 ಗಂಟೆಗಳ ಕಾಲ ಚರಂಡಿಯೊಳಗೆ ಸಿಕ್ಕಿಬಿದ್ದಿರುವುದು ತಿಳಿದುಬಂದಿದೆ.

ಮೊಬೈಲ್​​ ತೆಗೆಯಲು ಹೋಗಿ 36 ಗಂಟೆಗಳ ಕಾಲ ಚರಂಡಿಯೊಳಗೆ ಸಿಲುಕಿಕೊಂಡ ವ್ಯಕ್ತಿ
36 ಗಂಟೆಗಳ ಕಾಲ ಚರಂಡಿಯೊಳಗೆ ಸಿಲುಕಿಕೊಂಡ ವ್ಯಕ್ತಿ
Follow us on

ಕೈಯಿಂದ ಜಾರಿ ಚರಂಡಿಯೊಳಗೆ ಬಿದ್ದ ಫೋನ್​​​ ತೆಗೆಯಲು ಹೋಗಿ ಆಕಸ್ಮಿಕವಾಗಿ ಚರಂಡಿಯೊಳಗೆ ಬಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸುಮಾರು  36 ಗಂಟೆಗಳ ನಂತರ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಈ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್​​​ನ ಬ್ರಿಸ್ಬೇನ್​​​​ನಲ್ಲಿ ನಡೆದಿದೆ. ಕೂಡಲೇ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಅಪಾಯವಿಲ್ಲ, ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ಹೇಳಿರುವುದು ವರದಿಯಾಗಿದೆ.

ಸ್ಕೈ ನ್ಯೂಸ್ ವರದಿ ಪ್ರಕಾರ ಬ್ರಿಸ್ಬೇನ್ ನದಿಯ ಕಾಂಗರೂ ಪಾಯಿಂಟ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕಿರುಚುತ್ತಿರುವುದು ಕೇಳಿ ಸ್ಥಳೀಯ ನಿವಾಸಿಗಳು ಅಗ್ನಿಶಾಮಕಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೋಲ್ಟೆಡ್ ಡ್ರೈನ್ ಮುಚ್ಚಳವನ್ನು ತೆಗೆದು ಸಿಕ್ಕಿಬಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಈವೇಳೆ 36 ಗಂಟೆಗಳ ಕಾಲ ಚರಂಡಿಯೊಳಗೆ ಸಿಕ್ಕಿಬಿದ್ದಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಮದುವೆ ಹೊಸ್ತಿಲಲ್ಲಿ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ ಭಾರತ-ಪಾಕ್​​​​​ ಸಲಿಂಗ ಜೋಡಿ

ನಿವಾಸಿಗಳಿಗೆ ಡ್ರೈನ್‌ಗಳು, ಪೈಪ್‌ಗಳು ಮತ್ತು ಮ್ಯಾನ್‌ಹೋಲ್‌ಗಳಿಂದ ಉಂಟಾಗುವ ಅಪಾಯಗಳ ಕಾರಣದಿಂದ ”ಯಾವಾಗಲೂ ದೂರವಿರಿ” ಎಂದು ಎಚ್ಚರಿಸಲಾಗಿದ್ದು, ಇದಲ್ಲದೇ ಮಳೆಗಾಲದ ಸಮೀಪಿಸುತ್ತಿದ್ದಂತೆ ವಿವಿಧ ಗಾತ್ರದ ಪೈಪ್‌ಗಳು, ಮ್ಯಾನ್‌ಹೋಲ್‌ಗಳಲ್ಲಿ ಯಾವುದೇ ಒಂದು ಪ್ರಾಣಿ ಅಥವಾ ವ್ಯಕ್ತಿ ಸಿಕ್ಕಿಹಾಕಿಕೊಂಡರೆ, ದಯವಿಟ್ಟು ತಕ್ಷಣವೇ ಟ್ರಿಪಲ್ ಝೀರೋ (000) ಫೋನ್ ಮಾಡಿ,” ಕೊರಿಯರ್ ಮೇಲ್ ವರದಿ ಮಾಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Tue, 26 March 24