AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್​​ನಲ್ಲಿ ಜನನ ಪ್ರಮಾಣ ಕಡಿಮೆ ಹಾಗಾಗಿ ಬೇಬಿ ಡೈಪರ್‌​ ಬೇಡಿಕೆ ಕಡಿಮೆ, ಡೈಪರ್‌​ ಕಂಪನಿಯಿಂದ ಹೊಸ ಪ್ಲಾನ್

ಮಗುವಿನ ಡೈಪರ್‌ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಏಕೆಂದರೆ ಜನನ ಪ್ರಮಾಣ ಕುಸಿಯುತ್ತಿದೆ ಎಂದು ಕಂಪನಿಯ ವಕ್ತಾರರು AFP ಗೆ ತಿಳಿಸಿದರು. ಸ್ಟಾಕ್‌ಗಳು ಖಾಲಿಯಾಗುವವರೆಗೆ ಅವುಗಳನ್ನು ಜಪಾನ್‌ನಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ. ಜಪಾನ್‌ನಲ್ಲಿ ಜನನಗಳ ಸಂಖ್ಯೆಯು 2023ರಲ್ಲಿ ಇಳಿದಿದೆ. ಶಿಶು ಸಾವುಗಳು ಕೂಡ ಜಪಾನ್​​​ನಲ್ಲಿ ಹೆಚ್ಚಾಗಿದೆ.

ಜಪಾನ್​​ನಲ್ಲಿ ಜನನ ಪ್ರಮಾಣ ಕಡಿಮೆ ಹಾಗಾಗಿ ಬೇಬಿ ಡೈಪರ್‌​ ಬೇಡಿಕೆ ಕಡಿಮೆ, ಡೈಪರ್‌​ ಕಂಪನಿಯಿಂದ ಹೊಸ ಪ್ಲಾನ್
Follow us
ಅಕ್ಷಯ್​ ಪಲ್ಲಮಜಲು​​
|

Updated on: Mar 26, 2024 | 4:09 PM

ಜಪಾನ್​​ನಲ್ಲಿ ಜನನ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಿ ಬೇಬಿ ಡೈಪರ್‌​ಗಳ ಬೇಡಿಕೆ ಕೂಡ ಕಡಿಮೆಯಾಗಿದೆ. ಇದರಿಂದ ಇದರ ಉತ್ಪಾದನೆ ಕೂಡ ಕಡಿಮೆಯಾಗಿದೆ. ಅನೇಕ ಯುವಕರು ಕೆಲಸ ಕೂಡ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಜಪಾನ್​​​ನಲ್ಲಿ ವಯಸ್ಕರ ಡೈಪರ್‌ ತಯಾರಿಸಲು ಮುಂದಾಗಿದೆ. ವಯಸ್ಕರ ಡೈಪರ್‌ ಉತ್ಪಾದನೆಗೆ ಓಜಿ ಹೋಲ್ಡಿಂಗ್ಸ್ ಕಂಪನಿ ಪೋತ್ಸಾಹ ನೀಡುತ್ತಿದೆ. 2001ರಲ್ಲಿ ಬೇಬಿ ಡೈಪರ್‌​​ನಿಂದ 700 ಮಿಲಿಯನ್‌ ಲಾಭ ಇತ್ತು. ಆದರೆ ಇದೀಗ 400 ಮಿಲಿಯನ್‌ಗೆ ಇಳಿದಿದೆ ಎಂದು ಕಂಪನಿ ಹೇಳಿದೆ.

ಮಗುವಿನ ಡೈಪರ್‌ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಏಕೆಂದರೆ ಜನನ ಪ್ರಮಾಣ ಕುಸಿಯುತ್ತಿದೆ ಎಂದು ಕಂಪನಿಯ ವಕ್ತಾರರು AFP ಗೆ ತಿಳಿಸಿದರು. ಸ್ಟಾಕ್‌ಗಳು ಖಾಲಿಯಾಗುವವರೆಗೆ ಅವುಗಳನ್ನು ಜಪಾನ್‌ನಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ. ಜಪಾನ್‌ನಲ್ಲಿ ಜನನಗಳ ಸಂಖ್ಯೆಯು 2023ರಲ್ಲಿ ಇಳಿದಿದೆ. ಶಿಶು ಸಾವುಗಳು ಕೂಡ ಜಪಾನ್​​​ನಲ್ಲಿ ಹೆಚ್ಚಾಗಿದೆ. ಈ ಕಾರಣಕ್ಕೆ ಜನನ ಪ್ರಮಾಣ ಕಡಿಮೆಯಾಗಿದೆ.

ಇನ್ನು ಇದಕ್ಕೆ ಪರ್ಯಾಯವಾಗಿ ಓಜಿ ಹೋಲ್ಡಿಂಗ್ಸ್ ವಯಸ್ಕರಿಗೆ ನೈರ್ಮಲ್ಯ ವಸ್ತುಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ನರ್ಸಿಂಗ್ ಹೋಮ್‌ಗಳಂತಹ ಸೌಲಭ್ಯಗಳಲ್ಲಿ ಅವುಗಳ ಬಳಕೆಯನ್ನು ಮಾಡಲಾಗುವುದು ಎಂದು ಹೇಳಿದ್ದಾರೆ. ಮೊನಾಕೊ ನಂತರ ಜಪಾನ್ ವಿಶ್ವದ ಅತ್ಯಂತ ಕಡಿಮೆ ಜನಸಂಖ್ಯಾಯನ್ನು ಹೊಂದಿದೆ. ವಯಸ್ಕ ಡೈಪರ್‌ಗಳ ಮಾರುಕಟ್ಟೆಯು ದೇಶೀಯವಾಗಿ ಬೆಳೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಇನ್ನು ಬೇಬಿ ಡೈಪರ್‌ಗಳನ್ನು ಇಂಡೋನೇಷ್ಯಾ ಮತ್ತು ಮಲೇಷ್ಯಾ ಸೇರಿದಂತೆ ಜಪಾನ್​​​​ ಗಡಿ ಭಾಗದ ದೇಶಗಳಿಗೆ ಮಾರಾಟ ಮಾಡಲಿದೆ. ಈ ಬಗ್ಗೆ ಆ ದೇಶಗಳ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಓಜಿ ಹೋಲ್ಡಿಂಗ್ಸ್ ಹೇಳಿದೆ. ಜಪಾನ್‌ನಲ್ಲಿ, 2023ರಲ್ಲಿ ಜನನಗಳು ಸತತ ಎಂಟನೇ ವರ್ಷಕ್ಕೆ 758,631ಕ್ಕೆ ಇಳಿದೆ. 5.1 ಪ್ರತಿಶತದಷ್ಟು ಕುಸಿತವಾಗಿದೆ ಎಂದು ಪ್ರಾಥಮಿಕ ಮಾಹಿತಿ ನೀಡಲಾಗಿದೆ. ಇದರಲ್ಲಿ ಸಾವಿನ ಸಂಖ್ಯೆ 1,590,503 ಆಗಿದೆ.

ಇದನ್ನೂ ಓದಿ: ‘ಉಡುಗೊರೆ ಬೇಡ, ಮೋದಿಗೆ ಮತ ಹಾಕಿ’ ಆಮಂತ್ರಣ ಪತ್ರಿಕೆಯಲ್ಲಿ ವರನ ತಂದೆಯಿಂದ ವಿಶೇಷ ಮನವಿ

ಜಪಾನ್​​​ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ. ಅಧ್ಯಕ್ಷ ಫ್ಯೂಮಿಯೊ ಕಿಶಿಡಾ ಅವರು ಕುಟುಂಬಗಳಿಗೆ ಹಣಕಾಸಿನ ನೆರವು, ಸುಲಭವಾದ ಶಿಶುಪಾಲನಾ ಪ್ರವೇಶ ಮತ್ತು ಜನನ ಪ್ರಮಾಣವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ