Viral Video: ನೀರು ಚೆಲ್ಲಿದ್ದ ನೆಲದ ಮೇಲೆ ವ್ಯಕ್ತಿಯ ಸ್ಟಂಟ್​; ಆಮೇಲೇನಾಯ್ತು? ವಿಡಿಯೋ ನೋಡಿ

ನಗುತ್ತಾ ನೀರು ಚೆಲ್ಲಿದ್ದ ನೆಲದ ಮೇಲೆ ಜಾರಲು ಹೋಗಿ ಮುಂದಿರುವ  ಕಾರಿಗೆ ಡಿಕ್ಕಿ ಹೊಡೆದ್ದಾನೆ.ಕೆಲವು ಬಾರಿ ಎಷ್ಟು ಎಚ್ಚರಿಕೆಯಿಂದರಬೇಕು ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ ಫುಲ್​ ವೈರಲ್​ ಆಗಿದೆ. ವಿಡಿಯೋ ಇದೆ ನೀವೂ ನೋಡಿ.

Viral Video: ನೀರು ಚೆಲ್ಲಿದ್ದ ನೆಲದ ಮೇಲೆ ವ್ಯಕ್ತಿಯ ಸ್ಟಂಟ್​; ಆಮೇಲೇನಾಯ್ತು? ವಿಡಿಯೋ ನೋಡಿ
ಒದ್ದೆ ನೆಲದಲ್ಲಿ ವ್ಯಕ್ತಿಯ ಸ್ಟಂಟ್​
Edited By:

Updated on: Oct 03, 2021 | 12:18 PM

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವು ವಿಡಿಯೋಗಳು ಹೆಚ್ಚು ನಗು ತರಿಸುವುದಂತೂ ಸತ್ಯ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ನೀರು ಚೆಲ್ಲಿದ್ದ ನೆಲದಲ್ಲಿ ವ್ಯಕ್ತಿ ಜಾರಲು ಹೋಗುತ್ತಾನೆ. ಆತ ಖುಷಿಯಿಂದ ಆಟವಾಡಲು ಹೋಗಿ ಆಗಿದ್ದೇ ಬೇರೆ! ನಗುತ್ತಾ ನೀರು ಚೆಲ್ಲಿದ್ದ ನೆಲದ ಮೇಲೆ ಜಾರಲು ಹೋಗಿ ಮುಂದಿರುವ  ಕಾರಿಗೆ ಡಿಕ್ಕಿ ಹೊಡೆದ್ದಾನೆ.ಕೆಲವು ಬಾರಿ ಎಷ್ಟು ಎಚ್ಚರಿಕೆಯಿಂದರಬೇಕು ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ ಫುಲ್​ ವೈರಲ್​ ಆಗಿದೆ. ವಿಡಿಯೋ ಇದೆ ನೀವೂ ನೋಡಿ.

ಸಾಮಾನ್ಯವಾಗಿ ಜನರು ಈಜು ಕೊಳದಲ್ಲಿ ಸಾಹಸ ಮಾಡುವುದನ್ನು ನೀವು ನೋಡಿರಬಹುದು. ಕೆಲವರು ವಿವಿಧ ಸಾಹಸಗಳ ಮೂಲಕ ಇತರರನ್ನು ರಂಜಿಸಲು ಪ್ರಯತ್ನಿಸುತ್ತಾರೆ. ಆದರೆ ಅವುಗಳಲ್ಲಿ ಕೆಲವು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಅಂಥಹುದೇ ವಿಡಿಯೋ ಇದಾಗಿದೆ.

ಈಜುಕೊಳಕ್ಕೆ ಹೋಗುವ ಮುನ್ನ ವ್ಯಕ್ತಿಯು, ನೆಲದ ಮೇಲೆ ಬಿದ್ದಿದ್ದ ನೀರಿನ ಮೂಲಕ ಜಾರಲು ಪ್ರಯತ್ನಿಸುತ್ತಾನೆ. ಆ ರೀತಿ ಮಾಡಲು ಹೋಗಿ ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ತಮಾಷೆಯ ವಿಡಿಯೋವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಈ ಕಾರಣದಿಂದಾಗಿ ಅನೇಕ ನೆಟ್ಟಿಗರು ತಮಾಷೆಯ ಕಾಮೆಂಟ್ಗಳನ್ನು ಹಾಕಿದ್ದಾರೆ.

ಮುಂದಿನ ಬಾರಿ ನೀರು ಬಿದ್ದ ಜಾಗದಲ್ಲಿ ನಡೆಯಲೂ ಈ ವ್ಯಕ್ತಿ ಒಂದು ಬಾರಿ ಯೋಚಿಸುತ್ತಾನೆ ಎಂದು ಓರ್ವರು ಹೇಳಿದ್ದಾರೆ. ಇವರು ಇದೇ ರೀತಿ ಸಾಹಸಗಳನ್ನು ಮಾಡುವ ಮೂಲಕ ಹಿರೋ ಆಗುತ್ತಾರೆ ಎಂದು ಇನ್ನೋರ್ವರು ತಮಾಷೆ ಮಾಡಿದ್ದಾರೆ. ಈ ತಮಾಷೆಯ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, 77 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

Viral Video: ಮದುವೆ ದಿನವೇ ಕೋಪಗೊಂಡು ಏಣಿ ಸಹಾಯದಿಂದ ಮನೆಯ ಮೇಲ್ಛಾವಣಿ ಹತ್ತಿ ಕುಳಿತ ವಧು; ವಿಡಿಯೋ ಮಜವಾಗಿದೆ ನೀವೂ ನೋಡಿ

Viral Video: ಬಾಲಕಿಯ ತೊಡೆಯ ಮೇಲೆ ನಿದ್ರಿಸುತ್ತಿರುವ 20 ಅಡಿ ಉದ್ದದ ಹೆಬ್ಬಾವು; ವಿಡಿಯೋ ನೋಡಿ ದಂಗಾದ ನೆಟ್ಟಿಗರು