ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 62 ವರ್ಷದ ರೋಗಿಗೆ 2 ತಿಂಗಳ ಹಿಂದೆಯಷ್ಟೇ 4 ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿಸಲಾಗಿತ್ತು. ವೈದ್ಯಕೀಯ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆ ಎಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ಫೋಷಿಸಿದ್ದರು. ಇದೀಗ ಶಸ್ತ್ರಚಿಕಿತ್ಸೆ ಆದ ಎರಡು ತಿಂಗಳ ಬಳಿಕ ರೋಗಿ ಸಾವನ್ನಪ್ಪಿರುವುದು ವರದಿಯಾಗಿದೆ.
ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಡಯಲಿಸೀಸ್‌ನಲ್ಲಿಯೂ ತೊಂದರೆ ಕಾಣಿಸಿಕೊಂಡಿದ್ದ ಕಿಡ್ನಿ ಕಸಿ ಮಾಡಲು ವೈದ್ಯರು ಮುಂದಾಗಿದ್ದರು. ಈ ವೇಳೆ ಈ ವ್ಯಕ್ತಿಗರ ಹಂದಿಯ ಕಿಡ್ನಿ ಕಸಿ ಮಾಡಿಸಲು ಬೋಸ್ಟನ್‌ನ ಮ್ಯಾಸಚುಸೆಟ್ಸ್‌ನ ಆಸ್ಪತ್ರೆಯ ವೈದ್ಯರು ಆಲೋಚಿಸಿದ್ದರು. ಅವರ ನಿರ್ಧಾರದಂತೆ ಮಾರ್ಚ್ನಲ್ಲಿ ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ 4 ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಹಂದಿಯ ಕಿಡ್ನಿಯನ್ನು ಕಸಿ ಮಾಡಿಸಲಾಗಿತ್ತು.
ಇದನ್ನೂ ಓದಿ: ಮನುಷ್ಯನಿಗೆ ಹಂದಿಯ ಕಿಡ್ನಿ ಕಸಿ ಮಾಡಿದ ವೈದ್ಯರು; ವೈದ್ಯಕೀಯ ಇತಿಹಾಸದಲ್ಲೇ ಪ್ರಥಮ ಪ್ರಯತ್ನ
ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ 2 ವಾರಗಳ ನಂತರ ಅವರು ಮನೆಗೆ ಮರಳಿದ್ದರು. ಈ ಮೂಲಕ ಹಂದಿಯ ಕಿಡ್ನಿಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆದರೆ ಇದಾದ ಎರಡು ತಿಂಗಳ ನಂತರ ಅಂದರೆ ಮೇ 11ರಂದು ಅವರು ಸಾವಿಗೀಡಾಗಿರುವುದಾಗಿ ಕುಟುಂಬಸ್ಥರು ಫೋಷಿಸಿರುವುದು ವರದಿಯಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ