Diabetic Kidney: ಮಧುಮೇಹದ ಮೂತ್ರಪಿಂಡ ಕಾಯಿಲೆಯ ಎಚ್ಚರಿಕೆ ಹಂತಗಳು

ಮಧುಮೇಹದ ಮೂತ್ರಪಿಂಡ (ಡಯಾಬಿಟಿಕ್ ಕಿಡ್ನಿ) ಇದು ಹೆಚ್ಚಾಗಿ ಮಧುಮೇಹವನ್ನು ಹೊಂದಿರುವ ಜನರ ಮೇಲೆ ಪರಿಣಾವ ಬೀರುತ್ತದೆ. ಇದು ಅಪಾಯಕಾರಿ ಹಾಗೂ ದೀರ್ಘಕಾಲದ ರೋಗಸ್ಥಿತಿಯಾಗಿರುವುದರಿಂದ ಮಧುಮೇಹದ ಮೂತ್ರಪಿಂಡಗಳ ಈ 7 ಎಚ್ಚರಿಕೆಯ ಚಿಹ್ನೆಗಳ ಬಗ್ಗೆ ನೀವು ಗಮನಹರಿಸಬೇಕು.

Diabetic Kidney: ಮಧುಮೇಹದ ಮೂತ್ರಪಿಂಡ ಕಾಯಿಲೆಯ ಎಚ್ಚರಿಕೆ ಹಂತಗಳು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 07, 2023 | 4:35 PM

ಮಧುಮೇಹದ ಮೂತ್ರಪಿಂಡವನ್ನು (Diabetic Kidney) ‘ಡಯಾಬಿಟಿಕ್ ನೆಫ್ರೋಪತಿ’ ಎಂದು ಕರೆಯುತ್ತಾರೆ. ಇದು ಮಧುಮೇಹ ಹೊಂದಿರುವ ವ್ಯಕ್ತಿಗಳ ಮೇಲೆ ಪರಿಣಾಮ ಬೀರುವ ಅಪಾಯಕಾರಿ ಹಾಗೂ ದೀರ್ಘಕಾಲದ ರೋಗ ಸ್ಥಿತಿಯಾಗಿದೆ. ಇದು ಸಾಮಾನ್ಯವಾಗಿ ರಕ್ತದಲ್ಲಿನ ಅನಿಯಂತ್ರಿತ ಅಧಿಕ ಸಕ್ಕರೆ ಮಟ್ಟ ಮತ್ತು ಮಧುಮೇಹ ಔಷಧಿಗಳ ದೀರ್ಘಕಾಲದ ಬಳಕೆಯ ಪರಿಣಾಮವಾಗಿ ಸಂಭವಿಸುತ್ತದೆ. ದೇಹದಿಂದ ತ್ಯಾಜ್ಯಗಳನ್ನು ಮತ್ತು ಹೆಚ್ಚುವರಿ ದ್ರವವನ್ನು ತೆಗೆದು ಹಾಕುವ ತಮ್ಮ ನಿಯಮಿತ ಕಾರ್ಯವನ್ನು ನಿರ್ವಹಿಸುವ ಮೂತ್ರಪಿಂಡದ ಸಾಮರ್ಥ್ಯದ ಮೇಲೆ ಈ ಡಯಾಬಿಟಿಕ್ ನೆಫ್ರೋಪತಿಯು ಪರಿಣಾಮ ಬೀರುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸುವ ಮೂಲಕ ಮತ್ತು ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಮೂಲಕ ಈ ಡಯಾಬಿಟಿಕ್ ನೆಫ್ರೋಪತಿಯನ್ನು ತಡೆಗಟ್ಟಬಹುದು.

ಇದಕ್ಕೆ ಚಿಕಿತ್ಸೆ ನೀಡದೆ ಇದ್ದರೆ, ಇದು ಶಾಶ್ವತ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಇದಕ್ಕೆ ಡಯಾಲಿಸಿಸ್ ಅಥವಾ ಮೂತ್ರಪಿಂಡದ ಕಸಿ ಅಗತ್ಯವಿರುತ್ತದೆ. ಮಧುಮೇಹದ ಮೂತ್ರಪಿಂಡದ ಕಾಯಿಲೆಗೆ ಸಂಬಂಧಿಸಿದ ಹಲವಾರು ಎಚ್ಚರಿಕೆ ಚಿಹ್ನೆಗಳಿವೆ. ಮಧುಮೇಹವನ್ನು ಹೊಂದಿರುವ ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದಿರಬೇಕು.

ನೀವು ಗಮನಹರಿಸಬೇಕಾದ 7 ಮಧುಮೇಹದ ಮೂತ್ರಪಿಂಡದ ಎಚ್ಚರಿಕೆಯ ಚಿಹ್ನೆಗಳು

ಮೂತ್ರದಲ್ಲಿ ಪ್ರೋಟೀನ್ (ಪ್ರೋಟೀನುರಿಯಾ): ಮಧುಮೇಹದ ಮೂತ್ರಪಿಂಡ ಕಾಯಿಲೆಯ ಆರಂಭಿಕ ಚಿಹ್ನೆಗಳು ಸಾಮಾನ್ಯವಾಗಿ ಮೂತ್ರದಲ್ಲಿ ಅಲ್ಬುಮಿನ್ ಎಂಬ ಪ್ರೋಟೀನ್ ಉಪಸ್ಥಿತಿಯಿಂದ ನಿರೂಪಿಸಲ್ಪಡುತ್ತವೆ. ಮೂತ್ರ ಪರೀಕ್ಷೆಯಿಂದ ಈ ಸ್ಥಿತಿಯನ್ನು ಕಂಡುಹಿಡಿಯಬಹದು. ಮೂತ್ರಪಿಂಡಗಳು ಸಾಮಾನ್ಯ ಸಂದರ್ಭಗಳಲ್ಲಿ ಪ್ರೋಟೀನ್‌ನನ್ನು ಹಾದುಹೋಗಲು ಅನುಮತಿಸುವುದಿಲ್ಲ ಮತ್ತು ಮೂತ್ರದಲ್ಲಿನ ಯಾವುದೇ ಪ್ರೋಟೀನ್ ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ.

ಪಾದಗಳು, ಕಾಲುಗಳು ಅಥವಾ ಕೈಗಳಲ್ಲಿ ಊತ (ಎಡಿಮಾ): ದೇಹದಿಂದ ಹೆಚ್ಚುವರಿ ದ್ರವವನ್ನು ತೆಗೆದುಹಾಕಲು ಮೂತ್ರಪಿಂಡ ಅಸಮರ್ಥವಾದಾಗ ಈ ಊತವು ಸಾಮಾನ್ಯವಾಗಿ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಪಾದಗಳು, ಕಾಲುಗಳು ಅಥವಾ ಕೈಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮತ್ತು ಇದು ಕೈಕಾಲುಗಳು ಊದಿಕೊಳ್ಳಲು ಕಾರಣವಾಗುತ್ತದೆ. ದೇಹವು ಅಗತ್ಯಕ್ಕಿಂತ ಹೆಚ್ಚು ದ್ರವವನ್ನು ಹೊರಹಾಕದಿದ್ದಾಗ ಇದು ತೂಕ ಹೆಚ್ಚಾಗಲೂ ಕಾರಣವಾಗಬಹುದು.

ಆಯಾಸ ಅಥವಾ ದೌರ್ಬಲ್ಯ: ಮಧುಮೇಹದ ಮೂತ್ರಪಿಂಡದ ಕಾಯಿಲೆಯನ್ನು ಹೊಂದಿರುವ ರೋಗಿಗಳಲ್ಲಿ ತೀವ್ರ ಆಯಾಸವು ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ರಕ್ತಹೀನತೆತಿಂದ ಉಂಟಾಗುತ್ತದೆ. ಮತ್ತು ಇದರಿಂದ ಮೂಳೆ ಮಜ್ಜೆಯಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುವ ಹಾರ್ಮೋನ್ ಎರಿಥ್ರೋಪೊಯೆಟಿನ್‌ನ್ನು ಮೂತ್ರಪಿಂಡಗಳು ಉತ್ಪಾದಿಸುವುದನ್ನು ನಿಲ್ಲಿಸುತ್ತದೆ.

ಇದನ್ನೂ ಓದಿ:Diabetic Kidney Disease: ಮಧುಮೇಹ ಕಿಡ್ನಿ ಕಾಯಿಲೆಯ ಲಕ್ಷಣ ಮತ್ತು ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲಿದೆ

ಅಧಿಕ ರಕ್ತದೊತ್ತಡ: ಅಧಿಕ ರಕ್ತದೊತ್ತಡ ಅಥವಾ ಹೈಪರ್ ಟೆನ್ಷನ್ ಮಧುಮೇಹ ಮೂತ್ರಪಿಂಡ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಮೂತ್ರಪಿಂಡಗಳು ಹಾನಿಗೊಳಗಾದಾಗ, ಅವು ದೇಹದ ರಕ್ತದೊತ್ತಡ ನಿಯಂತ್ರಣ ವ್ಯವಸ್ಥೆಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ಹಸಿವಿನಲ್ಲಿ ಹಠಾತ್ ಬದಲಾವಣೆ: ಹಸಿವು ಕಡಿಮೆಯಾಗುವುದು ಮಧುಮೇಹ ಮೂತ್ರಪಿಂಡ ಕಾಯಿಲೆಯ ಎಚ್ಚರಿಕೆಯ ಸಂಕೇತವಾಗಿದೆ. ಇದು ರಕ್ತದಲ್ಲಿ ತ್ಯಾಜ್ಯ ಉತ್ಪನ್ನಗಳ ಸಂಗ್ರಹದಿಂದಾಗಿ ವಾಕರಿಕೆ, ವಾಂತಿ, ಹಸಿವಿನ ಕೊರತೆ ಮತ್ತು ತೂಕನಷ್ಟಕ್ಕೆ ಕಾರಣವಾಗುತ್ತದೆ.

ನಿದ್ರಾಹೀನತೆ: ನಿದ್ರಾಹೀನತೆಯು ಕೂಡಾ ಮಧುಮೇಹ ಮೂತ್ರಪಿಂಡ ಕಾಯಿಲೆಯ ಲಕ್ಷಣವಾಗಿದೆ. ಇದು ಸಾಮಾನ್ಯವಾಗಿ ರೆಸ್ಟೆಸ್ ಲೆಗ್ಸ್ ಸಿಂಡ್ರೋಮ್ ಜೊತೆಗೆ ಇರುತ್ತದೆ. ಮತ್ತು ಇದು ಆಯಾಸ, ಕಿರಿಕಿರಿ ಹಾಗೂ ಮಾನಸಿಕ ಕಿರಿಕಿರಿಯನ್ನು ಉಂಟುಮಾಡಬಹುದು.

ತುರಿಕೆ ಮತ್ತು ಒಣ ಚರ್ಮ: ಮೂತ್ರಪಿಂಡದ ಕಾಯಿಲೆಯು ತುರಿಕೆ ಮತ್ತು ಒಣಚರ್ಮವನ್ನು ಉಂಟುಮಾಡಬಹುದು. ಇದು ಇದು ರಕ್ತದ ಹರಿವಿನಲ್ಲಿ ತ್ಯಾಜ್ಯ ಉತ್ಪನ್ನಗಳು ಮತ್ತು ಜೀವಾಣುಗಳ ಸಂಗ್ರಹದ ಸಂಕೇತವಾಗಿದೆ. ಇದು ಚರ್ಮದ ಮೇಲೆ ದದ್ದು ಹಾಗೂ ಕೆಂಪುಗೆ ಕಾರಣವಾಗಬಹುದು. ಮತ್ತು ಒಣಚರ್ಮವನ್ನು ಉಂಟುಮಾಡಬಹುದು.

Published On - 4:35 pm, Fri, 7 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ