
ಐಸ್ಕ್ರೀಮ್ ವಡಾಪಾವ್ನಿಂದ ಮ್ಯಾಗಿ ಮಿಲ್ಕ್ ಶೇಕ್, ಗುಲಾಮ್ ಜಾಮೂನ್ ಪಿಜ್ಜಾ, ಚಾಕಲೇಟ್ ಬಿರಿಯಾನಿ ಹೆಸರುಗಳೆಲ್ಲಾ ಇತ್ತೀಚೆಗೆ ಟ್ರೆಂಡ್ ಆಗಿಬಿಟ್ಟಿದೆ. ವಿಶಿಷ್ಟ ಖಾದ್ಯಗಳ ಹೆಸರುಗಳು ಜತೆಗೆ ಮಾಡುವ ವಿಧಾನ ಕೂಡಾ ಆನ್ಲೈನ್ನಲ್ಲಿ ಭಾರೀ ಸುದ್ದಿಯಲ್ಲಿದೆ. ಕೆಲವರು ಹೊಸ ಹೊಸ ರೆಸಿಪಿಯನ್ನು ಸವಿಯಲು ಕಾಯುತ್ತಿದ್ದರೆ, ಇನ್ನು ಕೆಲವರು ಇದೆನಪ್ಪಾ ಹೀಗೆದೆ ಎಂದು ಮೂಗು ಮುರಿಯುತ್ತಿದ್ದಾರೆ. ಇತ್ತೀಚೆಗೆ ಮತ್ತೊಮದು ಹೊಸ ರೆಸಿಪಿ ವೈರಲ್ ಆಗಿದೆ. ಅದೇ ಮ್ಯಾಂಗೋ ಡಾಲಿ ಐಸ್ಕ್ರೀಮ್ ಚಾಟ್.
ಗುಜರಾತ್ನ ಬೀದಿ ಆಹಾರ ಅಂಗಡಿಯಿಂದ ಜನಪ್ರಿಯ ಐಸ್ಕ್ರೀಮ್ಗಳಲ್ಲಿ ಇತ್ತೀಚೆಗೆ ತಯಾರಿಸಲಾದ ಮ್ಯಾಂಗೋ ಡಾಲಿ ಐಸ್ಕ್ರೀಮ್ ಚಾಟ್ಅನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಆದ್ರೆ ನೆಟ್ಟಿಗರು ಈ ಕುರಿತಂತೆ ಅಷ್ಟಾಗಿ ಆಸಕ್ತಿ ತೋರಿಸಿಲ್ಲ. ಕೆಲವರು ಮ್ಯಾಂಗೋ ಐಸ್ಕ್ರೀಮ್ ಜತೆ ಚೀಸ್ ಬೆರೆಸುವಾದಾ? ಎಂದು ಮೂಗು ಮುರಿದಿದ್ದಾರೆ. ಇನ್ನು ಕೆಲವರು ಹೊಸ ವಿಧಾನವನ್ನು ಒಮ್ಮೆ ಪ್ರಯತ್ನಿಸಿ ರುಚಿ ಹೇಗಿರುತ್ತೆ ಅಂತ ನೋಡ್ಬೇಕು ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಸ್ಟ್ರೀಟ್ ಫುಡ್ ಎಂಬ ಖಾತೆಯಿಂದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇತ್ತೀಚಿನ ವಿಡಿಯೋದಲ್ಲಿ ಮಾವಿನ ಮ್ಯಾಂಗೋ ಡಾಲಿ ಐಸ್ಕ್ರೀಮ್ ಚೀಸ್ ಮಾಡುವ ವಿಡಿಯೋ ವೈರಲ್ ಆಗಿದೆ. ಈ ಹೊಸ ರೆಸಿಪಿಯನ್ನು ಅಂಗಡಿಯವನು ಹೇಗೆ ತಯಾರಿಸುತ್ತಿದ್ದಾನೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು 27,500 ಕ್ಕೂ ಹೆಚ್ಚಿನ ವಕ್ಷಣೆಗಳನ್ನು ಗಳಿಸಿಕೊಂಡಿದೆ. ನಂತರ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಂಡಿದ್ದು, ಚೀಸ್ನೊಂದಿಗೆ ಐಸ್ಕ್ರೀಮ್ ಎಂದು ಕೆಲವರು ಮೂಗು ಮುರಿದಿದ್ದಾರೆ. ಇನ್ನು ಕೆಲವರು ಒಂದು ಬಾರಿ ಈ ವಿಧಾನವನ್ನು ತಯಾರಿಸಿ ರುಚಿ ಹೇಗಿರುತ್ತೆ ನೋಡಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ವೈರಲ್ ಆಗಿದ್ದ ಮತ್ತೊಂದು ರೆಸಿಪಿಯಾದ ಮ್ಯಾಗೀ ಮಿಲ್ಕ್ಶೇಕ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿತ್ತು. ಮಿಲ್ಕ್ಶೇಕ್ ಮೇಲೆ ಮ್ಯಾಗಿಯನ್ನು ಮಿಶ್ರಣ ಮಾಡಿದ್ದ ಹೊಸ ರೆಸಿಪಿಯನ್ನು ಕೆಲವರು ನೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಈ ಕಣ್ಣಲ್ಲಿ ಇನ್ನೇನೇನ್ ನೋಡ್ಬೇಕೋ, ಈ ಕಿವಿಯಲ್ಲಿ ಇನ್ನೇನ್ ಕೇಳ್ಬೇಕೋ ಅಂದಿದ್ದರು.
ಇದನ್ನೂ ಓದಿ:
Viral Video: ವೈರಲ್ ಆಗಲು ನಡು ರಸ್ತೆಯಲ್ಲಿ ಮೈ ಬಳುಕಿಸಿದ ಯುವತಿ
Viral Video: ಸಲೂನ್ಗೆ ಬಂದು ಕಿಮ್ ಜಾಂಗ್ ಉನ್ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !
(Mango dolly ice cream chaat with cheese in going viral social media)
Published On - 12:05 pm, Mon, 20 September 21