Viral Video: ಡಾನ್ಸ್ ಮಾಡುತ್ತಾ ಗ್ರಾಹಕರನ್ನು ಸೆಳೆದು ಮಾವು ಮಾರುವ ಪುಟ್ಟ ಬಾಲಕ, ವಿಡಿಯೋ ವೈರಲ್

ಯಾವುದೇ ಅಂಗಡಿ ಮಾಲೀಕರು ಗ್ರಾಹಕರನ್ನು ಸೆಳೆಯಲು ನಾನಾ ರೀತಿಯ ಪ್ಲಾನ್​ಗಳನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಪುಟ್ಟ ಬಾಲಕ, ಡ್ಯಾನ್ಸ್ ಮಾಡುತ್ತಾ ಗ್ರಾಹಕರನ್ನು ಸೆಳೆಯುತ್ತಿದ್ದಾನೆ.

Viral Video: ಡಾನ್ಸ್ ಮಾಡುತ್ತಾ ಗ್ರಾಹಕರನ್ನು ಸೆಳೆದು ಮಾವು ಮಾರುವ ಪುಟ್ಟ ಬಾಲಕ, ವಿಡಿಯೋ ವೈರಲ್
ಡಾನ್ಸ್ ಮಾಡುತ್ತಾ ಗ್ರಾಹಕರನ್ನು ಸೆಳೆದು ಮಾವು ಮಾರುವ ಪುಟ್ಟ ಬಾಲಕನ ವಿಡಿಯೋ ವೈರಲ್
Rakesh Nayak Manchi

Updated on: May 23, 2023 | 9:51 PM

ಯಾವುದೇ ವ್ಯಾಪಾರದಲ್ಲಿ ಯಶಸ್ವಿ ಕಾಣಬೇಕಾದರೆ ವಸ್ತು ಅಥವಾ ಆಹಾರದ ಗುಣಮಟ್ಟ ಚೆನ್ನಾಗಿರಬೇಕು. ಹೈಫೈ ಅಂಗಡಿ ಮಾಲೀಕರು ಬೆಲೆ ಮೇಲೆ ಡಿಸ್ಕೌಂಟ್ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಾರೆ. ಸಣ್ಣಪುಟ್ಟ ಅಂಗಡಿ ಮಾಲೀಕರು ಅಥವಾ ರಸ್ತೆ ಬದಿ ವ್ಯಾಪಾರ ಮಾಡುವ ವ್ಯಾಪಾರಿಗಳು ಏನು ಕಡಿಮೆ ಇಲ್ಲ. ಸಣ್ಣ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಕೆಲವೊಂದು ಕಸರತ್ತುಗಳನ್ನು ನಡೆಸುತ್ತಾರೆ. ಅದೇ ರೀತಿ, ಮಾವಿನ ಹಣ್ಣು ಮಾರುವ ಬಾಲಕನೊಬ್ಬ ಡ್ಯಾನ್ಸ್ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ.

ಈ ವೈರಲ್ ವಿಡಿಯೋ ಯಾವೊದೇ ಹೊರ ದೇಶ ಅಥವಾ ಭಾರತ ದೇಶದ ಹೊರ ರಾಜ್ಯದ್ದಲ್ಲ. ನಮ್ಮದೇ ಕರ್ನಾಟಕದ ವಿಡಿಯೋ ಇದಾಗಿದೆ. ಹೌದು, ಮೈಸೂರಿನಿಂದ ಹುಣಸೂರಿಗೆ ಹೋಗುವ ದಾರಿ ಮಧ್ಯೆ ಸಾಲಾಗಿ ಕಾಣ ಸಿಗುವ ಮಾವು ಹಣ್ಣಿನ ಅಂಗಡಿಗಳಲ್ಲಿ ಈ ಬಾಲಕನ ಅಂಗಡಿಯೂ ಒಂದಾಗಿದೆ. ತನ್ನದೇ ರೀತಿಯಲ್ಲಿ ರಸ್ತೆ ಬದಿ ಡ್ಯಾನ್ಸ್ ಮಾಡಿ ಗ್ರಾಹಕರನ್ನು ಸೆಳೆಯುತ್ತಿರುವುದನ್ನು ನೋಡಿದ ಗ್ರಾಹಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚೇತನ್ ಗೌಡ ಎಂಬವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. “ಮೈಸೂರಿನಿಂದ ಹುಣಸೂರಿಗೆ ಬರುವ ಬರಬೇಕಾದರೆ ಇಲವಾಲ ಮಾರ್ಗದ ಮುಂದೆ ಸಾಲುಘಟ್ಟಲೆ ಮಾವಿನ ಹಣ್ಣನ್ನು ಮಾರಾಟ ಮಾಡುತ್ತಾರೆ ಆ ಒಂದು ಅಂಗಡಿಯಲ್ಲಿ ಒಬ್ಬ ಚಿಕ್ಕ ಹುಡುಗ ಡ್ಯಾನ್ಸ್ ಮಾಡುವ ಮುಖಾಂತರ ಜನರನ್ನು ಹೇಗೆ ಆಕರ್ಷಣೆ ಮಾಡಿ ವ್ಯಾಪಾರ ಮಾಡುತ್ತಾನೆ, (ಜೀವನ ತುಂಬಾ ಕಷ್ಟ ಆ ಕಷ್ಟದಲ್ಲೂ ಖುಷಿ ಪಡುತ್ತಾರೆ)” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Raichur News: ನಾನ್ ರೊಕ್ಕ ಕೊಡಂಗಿಲ್ಲ ಅಂದ್ರೆ ಕೊಡಂಗಿಲ್ಲ; ಸಾರಿಗೆ ಬಸ್ ಕಂಡೆಕ್ಟರ್ ಜೊತೆ ಅಜ್ಜಿ ಕಿರಿಕ್

ಮೇ 22ರಂದು ಹಂಚಿಕೊಂಡ ಈ ವಿಡಿಯೋ ವೈರಲ್ ಪಡೆದು 8 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿದ್ದು, 3ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಕ್ಕೂ ಹೆಚ್ಚು ನೆಟ್ಟಿಗರು ತಮ್ಮ ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು, “ನಿಜವಾಗ್ಲೂ ಈ ಮಾರ್ಗದಲ್ಲಿ ಓಡಾಡವರು ಈ ಹುಡುಗನ ಅಂಗಡಿಯಲ್ಲಿ ವ್ಯಾಪಾರ ಮಾಡಬೇಕು ಅವರಿಗೊಂದು ಜೀವನ ಆಗುತ್ತದೆ ನಿಮ್ಮಿಂದ” ಅಂತ ಹೇಳಿದರೆ, ಮತ್ತೊಬ್ಬರು “ಹೀಗೆ ಈ ಡ್ಯಾನ್ಸ್ ಮಾಡುವುದನ್ನು ಮುಂದುವರೆಸಿದರೆ ಮೈಕಲ್ ಜಾಕ್ಸನ್​ನನ್ನು ಮೀರಿಸುತ್ತಾನೆ” ಎಂದು ಹೇಳಿದ್ದಾರೆ.

ನಾನು ಇದೇ ರೋಡ್​ನಲ್ಲಿ ನಿತ್ಯ ಓಡಾಡುತ್ತೇನೆ, ಎಲ್ಲಾ ಕಳ್ನನ್ ಮಕ್ಳು, ಅವರಿಗೆ ದುಡ್ಡು ಕೊಡುತ್ತಾರೆ, ಶಾಲೆ ಕೂಡ ಇಲ್ಲ, ಅದಕ್ಕೆ ಟೈಮ್ ಪಾಸ್ ಮಾಡಲು ಹೀಗೆ ಮಾಡುತ್ತಾರೆ ಅಂತ ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನು ಕೆಲವರು ಇಲ್ಲಿ ಬೆಲೆ ಭಾರೀ ಹೆಚ್ಚಿದೆ, ಮೋಸ ಕೂಡ ಮಾಡುತ್ತಾರೆ ಅಂತೆಲ್ಲಾ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದೇನೇ ಇರಲಿ, ಗ್ರಾಹಕರನ್ನು ಸೆಳೆಯುವ ಬಾಲಕನ ಟ್ರಿಕ್ ಪ್ರಶಂಸೆಗೆ ಪಾತ್ರವಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us