ಲಸಿಕೆ ಪಡೆಯಲ್ಲ ಅಂತ ಚಿಕ್ಕ ಮಕ್ಕಳಂತೆ ನೆಲಕ್ಕೆಲ್ಲಾ ಉರುಳಾಡಿದ ವ್ಯಕ್ತಿಯ ರಿಯಾಕ್ಷನ್ ವೈರಲ್; ತಮಾಷೆ ಮಾಡಿ ನಕ್ಕರು ನೆಟ್ಟಿಗರು

Viral Video: ಈತನಿಗೆ ಇಂಜೆಕ್ಷನ್ ನೋಡಿದರೆ ಭಯ ಅನಿಸುತ್ತೆ! ಲಸಿಕೆ ಹಾಕಿಸಲು ಕೇಂದ್ರದ ಬಾಗಿಲವರೆಗೆ ಕರೆದುಕೊಂಡು ಬಂದರೂ, ಒಳಗೆ ಹೋಗಲ್ಲ ಅಂತ ಕಿರುಚಾಡ್ತಾ ಇದ್ದಾನೆ ಈ ವ್ಯಕ್ತಿ. ಈತನ ರಿಯಾಕ್ಷನ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಲಸಿಕೆ ಪಡೆಯಲ್ಲ ಅಂತ ಚಿಕ್ಕ ಮಕ್ಕಳಂತೆ ನೆಲಕ್ಕೆಲ್ಲಾ ಉರುಳಾಡಿದ ವ್ಯಕ್ತಿಯ ರಿಯಾಕ್ಷನ್ ವೈರಲ್; ತಮಾಷೆ ಮಾಡಿ ನಕ್ಕರು ನೆಟ್ಟಿಗರು
ಲಸಿಕೆ ಪಡೆಯಲ್ಲ ಅಂತ ಚಿಕ್ಕ ಮಕ್ಕಳಂತೆ ನೆಲಕ್ಕೆಲ್ಲಾ ಉರುಳಾಡಿದ ವ್ಯಕ್ತಿಯ ರಿಯಾಕ್ಷನ್ ವೈರಲ್; ತಮಾಷೆ ಮಾಡಿ ನಕ್ಕರು ನೆಟ್ಟಿಗರು
Edited By:

Updated on: Sep 22, 2021 | 1:53 PM

ಕೊವಿಡ್ 19 ಸಾಂಕ್ರಾಮಿಕ ತಡೆಗಟ್ಟಲು ಕಂಡು ಹಿಡಿದ ಲಸಿಕೆ ಹಾಕಿಸಲು ಪ್ರಯತ್ನಿಸುತ್ತಿರುವ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇಂಜೆಕ್ಷನ್ ಅಂದ್ರೆ ಭಯ ಪಡುವವರೆಲ್ಲ ಲಸಿಕೆ ಕಂಡರೆ ಸಾಕು ಕಿತ್ತಾ ಪಾಲಾಗಿ ಓಡಿದ ವಿಡಿಯೋಗಳು ವೈರಲ್​ ಆಗಿದ್ದವು. ಇಲ್ಲೋರ್ವ ವ್ಯಕ್ತಿ ಕೂಡಾ ಹಾಗೆ, ಈತನಿಗೆ ಇಂಜೆಕ್ಷನ್ ನೋಡಿದರೆ ಭಯ ಅನಿಸುತ್ತೆ! ಲಸಿಕೆ ಹಾಕಿಸಲು ಕೇಂದ್ರದ ಬಾಗಿಲವರೆಗೆ ಕರೆದುಕೊಂಡು ಬಂದರೂ, ಒಳಗೆ ಹೋಗಲ್ಲ ಅಂತ ಕಿರುಚಾಡ್ತಾ ಇದ್ದಾನೆ ಈ ವ್ಯಕ್ತಿ. ಈತನ ರಿಯಾಕ್ಷನ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ವೈರಲ್ ಆದ ವಿಡಿಯೋ ಕ್ಲಿಪ್​ನಲ್ಲಿ ಗಮನಿಸುವಂತೆ, ವ್ಯಕ್ತಿಯ ಸ್ನೇಹಿತನೊಬ್ಬ ಲಸಿಕೆ ಪಡೆಯುವಂತೆ ಮನವೊಲಿಸಿದ್ದಾನೆ. ಅಂತೂ ಇಂತೂ ಪ್ರಯತ್ನಪಟ್ಟು ಲಸಿಕೆ ಕೇಂದ್ರದವರೆಗೆ ಕರೆದುಕೊಂಡು ಬಂದಿದ್ದಾನೆ. ಒಳಗಡೆಯಿದ್ದ ನರ್ಸ್ ನೋಡುತ್ತಿದ್ದಂತೆಯೇ ವ್ಯಕ್ತಿಗೆ ಭಯವಾಗಿ ಲಸಿಕೆ ಪಡೆಯಲ್ಲ ಅಂತ ಹಠ ಮಾಡುತ್ತಿದ್ದಾನೆ.

ವ್ಯಕ್ತಿ ಓಡಿ ಹೋಗದಂತೆ ಇಬ್ಬರು ಗಟ್ಟಿಯಾಗಿ ಹಿಡಿದು ನಿಂತಿದ್ದಾರೆ. ಆದರೂ ಸಹ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಲಸಿಕೆ ಕೇಂದ್ರದ ಬಾಗಿಲಲ್ಲಿಯೇ ಮಣ್ಣಿನಲ್ಲಿ ಬಿದ್ದು ಉರುಳಾಡಿದ್ದಾನೆ. ಕೊನೆಗೂ ವ್ಯಕ್ತಿಗೆ ಲಸಿಕೆ ಹಾಕುವಲ್ಲಿ ಸ್ನೇಹಿತರು ಯಶಸ್ವಿಯಾಗಿದ್ದಾರೆ.

ಘಟನೆ ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದರ ಕುರಿತಾಗಿ ಸ್ಪಷ್ಟವಾದ ಮಾಹಿತಿ ತಿಳಿದು ಬಂದಿಲ್ಲ. ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಟ್ವೀಟ್ ಪ್ರಕಾರ ಮಧ್ಯಪ್ರದೇಶದಲ್ಲಿ ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಈ ವಿಡಿಯೋ ಸಕತ್ ವೈರಲ್ ಆಗಿದೆ. ಈ ತಮಾಷೆಯ ದೃಶ್ಯ ನೋಡಿದ ನೆಟ್ಟಿಗರು ತಮಾಷೆಯ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಮಹಿಳೆಯೊಬ್ಬಳು ಲಸಿಕೆ ಪಡೆಯುವಾಗಿನ ರಿಯಾಕ್ಷನ್ ಫುಲ್ ವೈರಲ್ ಆಗಿತ್ತು.

ಇದನ್ನೂ ಓದಿ:

Viral Video : 2 ನಿಮಿಷಗಳ ವಿಡಿಯೋದಲ್ಲಿ ಕೋಲ್ಕತ್ತಾದ ಬೀದಿಗಳಲ್ಲಿ ವ್ಯಕ್ತಿಯೊಬ್ಬ ಪಿಟೀಲು ನುಡಿಸುವ ವಿಡಿಯೋ ವೈರಲ್ ಆಗುತ್ತಿದೆ!

Viral Video: ಜೇಡರಹುಳದಂತ ಹುಡುಗಿ ಇವಳು; ಗೋಡೆ ಹತ್ತುವ ವಿಚಿತ್ರ ಭಂಗಿಗೆ ನೆಟ್ಟಿಗರು ಫಿದಾ

(Man’s reaction getting vaccine video goes viral in social media)

Published On - 1:53 pm, Wed, 22 September 21