Viral Video : ಹಡಗಿನೊಳಗಿನ ಅಡುಗೆಮನೆಯಲ್ಲಿ ನಡೆದ ಈ ಮ್ಯಾಜಿಕ್!

Navy : ತಿಂಗಳುಗಟ್ಟಲೆ ಸಮುದ್ರದ ಮೇಲೆಯೇ ಮೈಯೆಲ್ಲ ಕಣ್ಣಾಗಿ ಜೀವಿಸಬೇಕಾದ ಅನಿವಾರ್ಯತೆ ನಾವಿಕರದ್ದು. ಅಪರೂಪಕ್ಕೆ ಹೀಗೆ ಮಜಾ ಮಾಡಲು ಅವಕಾಶ ಸೃಷ್ಟಿಸಿಕೊಳ್ಳಬೇಕಾದದ್ದೂ ಅವರೇ! ಹೇಗೆ? ಈ ವಿಡಿಯೋ ನೋಡಿ.

Viral Video : ಹಡಗಿನೊಳಗಿನ ಅಡುಗೆಮನೆಯಲ್ಲಿ ನಡೆದ ಈ ಮ್ಯಾಜಿಕ್!
ಸಮುದ್ರದಲೆಗಳ ಈ ಜಾದೂ!
Updated By: ಶ್ರೀದೇವಿ ಕಳಸದ

Updated on: Aug 30, 2022 | 3:30 PM

Viral Video : ಹಡಗಿನಲ್ಲಿ ತಿಂಗಳುಗಟ್ಟಲೆ ವಾಸಿಸುವುದು ಪ್ರತಿಯೊಬ್ಬ ನಾವಿಕನಿಗೂ ಸವಾಲೇ. ನಿತ್ಯವೂ ವಿವಿಧ ಸವಾಲುಗಳನ್ನು ಆತ ಎದುರಿಸಬೇಕಾಗುತ್ತದೆ. ಆದಾಗ್ಯೂ, ಈ ವ್ಯಾಪಾರಿ ನೌಕಾಪಡೆಯ ನಾವಿಕರು Instagram ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿ ಸಣ್ಣಗೆ ಮಜಾ ಮಾಡಿ ಮನಸ್ಸನ್ನು ರಂಜಿಸಿಕೊಂಡಿದ್ದಾರೆ. ಚಲಿಸುತ್ತಿರುವ ಹಡಗಿನಲ್ಲಿ ನಾವಿಕ ಅಡುಗೆ ಮಾಡುತ್ತಿರುವ ವಿಡಿಯೋ ಇದಾಗಿದೆ. ಸಮುದ್ರದ ತೆರೆಯ ಏರಿಳಿತಕ್ಕೆ ತಕ್ಕಂತೆ ಅಡುಗೆಮನೆಯ ಸಾಮಾನುಗಳು ಚಲಿಸಲಾರಂಭಿಸುತ್ತವೆ. ಆಗ ಹಾಡೊಂದನ್ನು ಗುನಗುತ್ತಲೇ ಈ ಸಮಯವನ್ನು ಆಹ್ಲಾದಕರವಾಗಿಸಿಕೊಂಡಿದ್ದಾರೆ ಇಲ್ಲಿರುವ ಈ ನಾವಿಕರು.

ವ್ಯಾಪಾರಿ ಹಡಗಿನ ನಾವಿಕ ಶೇಖರ್ ಕಂಡ್‌ಪಾಲ್ ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ‘ಹಡಗಿನಲ್ಲಿ ಉಚಿತ ಮನರಂಜನಾ ಸ್ಥಳ’ ಎಂಬ ಕ್ಲಿಪ್​ನೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. ಕ್ರೇಟು, ಕುರ್ಚಿಯಂಥ ಹಗೂರ ವಸ್ತುಗಳು ಅಲೆಯ ಏರಿಳಿತಕ್ಕೆ ತಕ್ಕಂತೆ ಹಡಗಿನ ಅಡುಗೆಮನೆಯೊಳಗೆ ಚಲಿಸುತ್ತವೆ. ಆಗಸ್ಟ್​ 1ರಂದು ಪೋಸ್ಟ್ ಮಾಡಲಾದ ಈ ವಿಡಿಯೋ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 74,000 ಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ.

ನೆಟ್ಟಿಗರಲ್ಲಿ ಒಬ್ಬರು, ‘ಅಡುಗೆ ಮಾಡುವಾಗ ಸಾಮಾನುಗಳನ್ನು ತರಲು ನೀವು ಓಡಾಡುವ ಅಗತ್ಯವಿಲ್ಲ’ ಎಂದಿದ್ದಾರೆ. ಮತ್ತೊಬ್ಬರು, ‘ಕೋಯಿ ಮಿಲ್ ಗಯಾ’ ಚಿತ್ರದ ಜನಪ್ರಿಯ ಹಿಂದಿ ಹಾಡಿನ ಸಾಹಿತ್ಯವನ್ನು ನೆನಪಿಸಿಕೊಂಡು, ‘ಇದರ್ ಚಲಾ ಮೈ ಉದರ್ ಚಲಾ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:24 pm, Tue, 30 August 22