ಇರಾನಿನ ಮಾಜಿದ್ರೆಜಾ ರಹನಾವಾರ್ಡ್ (Majidreza Rahanavard,) ಗಲ್ಲಿಗೇರುವ ಮೊದಲು ಆಡಿದ ಕೊನೆಯ ಮಾತುಗಳು ಇಂಟರ್ನೆಟ್ ವ್ಯಾಪಕವಾಗಿ ಹರಿದಾಡುತ್ತಿವೆ. 23-ವರ್ಷ-ವಯಸ್ಸಿನವನಾಗಿದ್ದ ಮೊಹ್ಸೆನ್ ಶೆಕಾರಿಯನ್ನು (Mohsen Shekari) ಭದ್ರತಾ ಸಿಬ್ಬಂದಿಯ ಸದಸ್ಯನೊಬ್ಬನನ್ನು ಗಾಯಗೊಳಿಸಿದ ಆರೋಪದಲ್ಲಿ ನೇಣಿಗೆ ಹಾಕಿದ (hanged) 4 ದಿನಗಳ ನಂತರ ಮಾಜಿದ್ರೆಜಾನ್ನು ಗಲ್ಲಿಗೇರಿಸಲಾಗಿತ್ತು. ಸರ್ಕಾರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಕ್ಕೆ ಮಾಜಿದ್ರೆಜಾನನ್ನು ಸೋಮವಾರ ಅಂದರೆ ಡಿಸೆಂಬರ್ 12, 2022 ರಂದು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.
ಇರಾನಿ ವ್ಯಕ್ತಿಯನ್ನು ಗಲ್ಲಿಗೇರಿಸುವ ಮೊದಲು; ಸಾಯುವ ಮುಂಚೆ ಏನು ಹೇಳಲು ಬಯಸುವೆ ಅಂತ ಕೇಳಿದಾಗ ಅವನು ಹೇಳಿದ್ದನ್ನು ಕನ್ನಡಕ್ಕೆ ತರ್ಜುಮೆ ಮಾಡಿದರೆ ಅದರ ಸಾರಾಂಶ ಹೀಗಿರುತ್ತದೆ: ‘ಯಾರೊಬ್ಬರೂ ನನ್ನ ಗೋರಿಯ ಬಳಿ ಬಂದು ಶೋಕ ವ್ಯಕ್ತಪಡಿಸುವುದು ನನಗಿಷ್ಟವಿಲ್ಲ. ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನನಗೆ ಬೇಕಿಲ್ಲ.’ ನಂತರ ಕೊನೆಯದಾಗಿ ಮಾಜಿದ್ರೆಜಾ, ‘ನನ್ನ ಸಾವನ್ನು ನೀವೆಲ್ಲ ಸಂಭ್ರಮಿಸಬೇಕು, ಮ್ಯೂಸಿಕ್ ಹಾಕಿಕೊಂಡು ಕುಣಿಯಬೇಕು,’ ಅಂತ ಹೇಳಿದ್ದಾನೆ.
Just before he’s hanged on Dec.12 by Iran’s regime, they interrogate #MajidrezaRahnavard
His last words: I don’t want Quran to be read or prayed on my grave, just celebrate
Sharia law is the reason he’s gone
His verdict: War with AllahOnly because he demonstrated for his rights pic.twitter.com/1uQpYhpGIq
— Darya Safai MP (@SafaiDarya) December 15, 2022
ಬೆಲ್ಜಿಯಂನ ಸಂಸತ್ ಸದಸ್ಯರಾಗಿರುವ ದರಿಯಾ ಸಫಾಯಿ ಈ ವಿಡಿಯೋ ಫುಟೇಜನ್ನು ಟ್ಚಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮಾಜಿದ್ರೆಜಾನ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿರುವುದನ್ನು ಮತ್ತು ಅವನ ಎಡಬಲದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸದಸ್ಯರು ಇರುವುದನ್ನು ನೋಡಬಹುದು.
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ