
ಪ್ರಾಣಿಗಳ ತುಂಟಾದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ. ನಕ್ಕು ನಕ್ಕು ಸಾಕಾಯ್ತಪ್ಪಾ.. ಅನ್ನುವಷ್ಟರ ಮಟ್ಟಿಗೆ ವಿಡಿಯೋ ಕಾಡುತ್ತದೆ. ಮನಸ್ಸಿಗೆ ಖುಷಿ ನೀಡುವ ಪ್ರಾಣಿಗಳ ತುಂಟಾಟದ ವಿಡಿಯೋವನ್ನು ನೋಡಲು ನೆಟ್ಟಿಗರು ಹೆಚ್ಚು ಇಷ್ಪಡುತ್ತಾರೆ. ಅಂಥಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗ ಅಲುಗಾಡುತ್ತಿರುವ ಸೇತುವೆಯ ಹಗ್ಗದ ಮೇಲೆ ಫ್ಯಾಶನ್ ಶೋ ಮಾಡುತ್ತಿದೆ. ಸ್ಟೈಲ್ ಆಗಿ ನಡೆದು ಸಾಗುತ್ತಿರುವ ಮಂಗನನ್ನು ನೋಡಿದ ನೆಟ್ಟಿಗರು ಭೇಷ್! ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಮಂಗ, ಮನುಷ್ಯನಂತೆಯೇ ನಡೆಯಲು ಪ್ರಯತ್ನಿಸುತ್ತಿದೆ. ಸಹಜ ಅಂದುಕೊಂಡು ಬಿಡಬೇಡಿ.. ಬರಿ ನೆಲದ ಮೇಲಲ್ಲ.. ಅಲುಗಾಡುತ್ತಿರುವ ಸೇತುವೆಯ ಮೇಲೆ. ಎರಡೇ ಕಾಲಿನಲ್ಲಿ ಸ್ಟಂಟ್ ಮಾಡುತ್ತಾ ಸ್ಟೈಲ್ ಆಗಿ ನಡೆದುಕೊಂಡು ಸಾಗುತ್ತಿದೆ. ಎರಡೇ ಕಾಲಿನಲ್ಲಿ ಬ್ಯಾಲೆನ್ಸ್ ತಪ್ಪದೇ ಎಚ್ಚರಿಕೆಯಿಂದ ಸಾಗುತ್ತಿದೆ. ಮಂಗನ ಈ ಸಾಹಸ ನೋಡಿದನೆಟ್ಟಿಗರು ಬಹಳ ಇಷ್ಟ ಪಟ್ಟಿದ್ದಾರೆ.
ತರಬೇತಿ ಪಡೆದಿರುವಂತೆ ಪೋಸ್ ಕೊಡುತ್ತಾ, ಸರಾಗವಾಗಿ ಹಗ್ಗದ ಮೇಲೆ ಸಾಗುತ್ತಿದೆ ಈ ಮಂಗ. ಎರಡೇ ಕಾಲುಗಳಿಂದ ಬ್ಯಾಲೆನ್ಸ್ ತಪ್ಪದೇ ಎಚ್ಚರಿಕೆಯಿಂದ ಹಗ್ಗ ದಾಟುತ್ತಿದೆ. ಹರಸಾಹಸ ಪಟ್ಟು ಹಗ್ಗದ ಕೊನೆಯವರೆಗೂ ಹೋಗಿ ತಲುಪಿದೆ. ಸ್ಟೈಲ್ ಆಗಿ ನಡೆದು ಸಾಗುತ್ತಿರುವ ಮಂಗನನ್ನು ವಿಡಿಯೋದಲ್ಲಿ ನೋಡಿ ನೀವೂ ಮೆಚ್ಚಿಕೊಳ್ಳುತ್ತೀರಾ.
ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಹಂಚಿಕೊಂಡ ವಿಡಿಯೋ ಇದು. ಸುಮಾರು 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ. ಮಂಗನ ಸರ್ಕಸ್ ನೋಡಿದ ಕೆಲವರು, ಭೇಷ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಆಶ್ಚರ್ಯವಾಗುತ್ತಿದೆ! ಎಂದು ಹುಬ್ಬೇರಿಸಿದ್ದಾರೆ.
ಇದನ್ನೂ ಓದಿ:
Viral Video: ಭರ್ಜರಿ ಭೋಜನ ಸವಿಯುತ್ತಿರುವ ಯುವತಿ! ಕ್ಯಾಮರಾ ಬಂದ ತಕ್ಷಣ ರಿಯಾಕ್ಷನ್ ಹೇಗಿದೆ ನೋಡಿ
Viral Video : ಅಜ್ಜಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆದ್ರು, ಮೊಮ್ಮಕ್ಕಳು ಹೆಜ್ಜೆ ಹಾಕಿದ್ರು
Published On - 2:22 pm, Thu, 17 June 21