Viral Video: ಕೆಲಸ ಖಾಲೀ ಇದೆ; ಅರ್ಹತೆಯ ಬಗ್ಗೆ ಈ ವಿಡಿಯೋ ನೋಡಿ ತಿಳಿದುಕೊಳ್ಳಿ

|

Updated on: Jul 18, 2023 | 1:59 PM

Job Alert : ಈ ಕೆಲಸಕ್ಕೆ ಒಂದೇ ಒಂದು ಮುಖ್ಯ ಅರ್ಹತೆಯ ಅವಶ್ಯಕತೆ ಇದೆ. ಸಾಕಷ್ಟು ಜನರು ಅರ್ಜಿ ಸಲ್ಲಿಸುತ್ತಿದ್ದಾರೇನೋ ನಿಜ, ಆದರೆ ಸೂಕ್ತ ವ್ಯಕ್ತಿಗಾಗಿ ನಾವು ಇನ್ನೂ ಕಾಯುತ್ತೇವೆ ಎಂದು ಈ ಕಂಪೆನಿಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Viral Video: ಕೆಲಸ ಖಾಲೀ ಇದೆ; ಅರ್ಹತೆಯ ಬಗ್ಗೆ ಈ ವಿಡಿಯೋ ನೋಡಿ ತಿಳಿದುಕೊಳ್ಳಿ
ಹೆಂಚುಗಳನ್ನು ಬೀಳಿಸಿ ಒಡೆಯುತ್ತಿರುವ ಕೆಲಸದಲ್ಲಿ ನಿರತರಾಗಿರುವ ಬಾಲಣ್ಣನವರು
Follow us on

Monkey : ಕತ್ತೆಯೂ ಒಂದೇ, ಕುದುರೆಯೂ ಒಂದೇ ಎಂಬಂಥ ಪರಿಸ್ಥಿತಿ ನಿಚ್ಚಳವಾಗುತ್ತಿದೆಯೇ? ಮಾಡಿದ ಕೆಲಸವನ್ನೇ ಮಾಡಿ ಮಾಡಿ ಬೇಸರವಾಗಿದೆಯೇ, ಎಷ್ಟು ಕೆಲಸ ಮಾಡಿದರೂ ನಿಮ್ಮ ಮ್ಯಾನೇಜರ್ ಸಿಡಿಮಿಡಿಗೊಳ್ಳುವುದು ಮುಂದುವರೆದೇ ಇದೆಯೇ,  ಅಂದುಕೊಂಡಿದ್ದೇ ಒಂದು ಮಾಡುತ್ತಿರುವ ಕೆಲಸವೇ ಇನ್ನೊಂದು ಎಂದು ಬೇಸರವಾಗುತ್ತಿದೆಯೇ, ರಾತ್ರಿಯಾದರೂ ಕೆಲಸ ಮುಗಿಯುವುದೇ ಇಲ್ಲವೇ, ವರ್ಕ್​ ಫ್ರಂ ಹೋಂ (Work From Home) ಇಲ್ಲವೇ, ರಜೆ ಮಂಜೂರಾಗುತ್ತಿಲ್ಲವೇ, ಸಂಬಳದಲ್ಲಿ ಏರಿಕೆಯಾಗಿಲ್ಲವೆ, ಪ್ರೊಮೋಷನ್ ಆಗಿಲ್ಲವೇ? ಈ ಎಲ್ಲಾ ಇಲ್ಲಗಳ ಮಧ್ಯೆಯೇ ಎಲ್ಲಾ ಬಲ್ಲವರಂತೆ ಮತ್ತು ಘನಗಂಭೀರವಾಗಿ ಕುಳಿತು ಮಾಡುವ ಕೆಲಸವೊಂದು ನಿಮಗಾಗಿ ಕಾಯುತ್ತಿದೆ. ಈ ಕೆಲಸದ ಪ್ರಾತ್ಯಕ್ಷಿಕೆಯನ್ನು ಒಮ್ಮೆ ನೋಡಿ.

ಯಾರು ಏನೇ ಅನ್ನಲಿ, ಊರಿಗೆ ಊರೇ ಮುಳುಗಿ ಹೋಗಲಿ ನಾ ಮಾತ್ರ ನನ್ನ ಕೆಲಸದಲ್ಲಿ ಮಗ್ನವಾಗಿರುವೆ- ಇದು ಮೊದಲನೇ ಅರ್ಹತೆ. ನನ್ನ ಬಗ್ಗೆ ಯಾರು ಏನೇ ಅಂದುಕೊಳ್ಳಲಿ ನನ್ನ ಕಾಲುಗಳು ಮಾತ್ರ ನೆಲಕ್ಕಂಟುವುದಿಲ್ಲ- ಇದು ಎರಡನೇ ಅರ್ಹತೆ. ಯಾರು ಎಷ್ಟೇ ಹೂಡಿಕೆ ಮಾಡಿರಲಿ ನಾನು ಮಾತ್ರ ನನ್ನಿಚ್ಛೆಯಂತೆಯೇ ಕೆಲಸ ಮಾಡುವೆ- ಇದು ಮೂರನೇ ಅರ್ಹತೆ. ನನಗೆ ನನ್ನ ಖುಷಿ, ಸಮಾಧಾನ ಮುಖ್ಯ, ಲಾಭವನ್ನು ಎಂದೂ ನಿರೀಕ್ಷಿಸಲಾರೆ- ಇದು ನಾಲ್ಕನೇ ಅರ್ಹತೆ.

ಇದನ್ನೂ ಓದಿ : Viral: ಮೈಲ್ಯಾಂಗ್​ ಆಡಿಯೋ ಸ್ಟೋರಿ ಚಾಲೇಂಜ್​ನಲ್ಲಿ ಪಾಲ್ಗೊಳ್ಳಿ ರೂ.10000 ಬಹುಮಾನ ಗೆಲ್ಲಿ

ಈ ಹೊಸ ಕೆಲಸದ ಪ್ರಾತ್ಯಕ್ಷಿಕೆಯನ್ನು ಈತನಕ 6.5 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. ಕೊಂಡಾಡುವವರಿಗಂತೂ ಲೆಕ್ಕವೇ ಇಲ್ಲ. 10ಮಿಲಿಯನ್​ಗಿಂತಲೂ ಹೆಚ್ಚು ಜನ ಇವರನ್ನು ನೋಡಿ ಪ್ರಭಾವಿತರಾಗಿದ್ದಾರೆ. ಇದು ತೃಪ್ತಿಗೆ ಸಂಬಂಧಿಸಿದ್ದು, ನನಗೂ ಇಂಥ ಕೆಲಸ ಬೇಕು ಎಂದು ಲಕ್ಷಾಂತರ ಜನರು ನೆಲದ ಮೇಲೆ ನಿಂತು ಕೈಚಾಚುತ್ತಿದ್ದಾರೆ. ಆದರೆ ಇದೆಲ್ಲ ಅಷ್ಟು ಸುಲಭವೇ? ಒಂದೇ ಒಂದು ಮುಖ್ಯ ಅರ್ಹತೆಯನ್ನು ಈ ಕಂಪೆನಿಯ ಮುಖ್ಯಸ್ಥರು ನಿರೀಕ್ಷಿಸುತ್ತಿದ್ದಾರೆ; ಕೆಲಸಕ್ಕೆ ಅರ್ಜಿ ಸಲ್ಲಿಸಲು ಬಯಸುವವರು ಬಾಲವನ್ನು ಹೊಂದಿರುವುದು ಕಡ್ಡಾಯ! 

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:53 pm, Tue, 18 July 23