
ತಾಯಿ ಪ್ರೀತಿಯೇ (Mother love) ಹಾಗೇ, ಪರಿಶುದ್ಧವಾದದ್ದು. ಈ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳ ಸಂತೋಷದಲ್ಲೇ ತನ್ನ ಖುಷಿಯನ್ನು ಕಾಣುತ್ತಾಳೆ. ಕಾಳಜಿ ವಹಿಸುತ್ತಾ ಮಕ್ಕಳ ರಕ್ಷಣೆಗಾಗಿ ನಿಲ್ಲುತ್ತಾಳೆ. ಪ್ರಾಣಿಗಳು ಕೂಡ ಈ ವಿಚಾರದಲ್ಲಿ ಹೊರತಾಗಿಲ್ಲ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ನಾಯಿಮರಿಯೊಂದು ನೀರಿನಲ್ಲಿ ಆಟವಾಡುತ್ತಿದ್ದು ಅದರ ತಾಯಿ ಅದನ್ನು ನೀರಿನಿಂದ ಮೇಲಕ್ಕೆ ಬರುವಂತೆ ಹೇಳಿದೆ. ಆದರೆ ನಾಯಿಮರಿ ಮಾತು ಕೇಳದೇ ಇದ್ದಾಗ ಈ ತಾಯಿ ಶ್ವಾನ (dog) ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ಬಳಕೆದಾರರು ತಾಯಿ ಕಾಳಜಿಗೆ ಇದಕ್ಕಿಂತ ಉದಾಹರಣೆ ಬೇಕೇ ಎಂದಿದ್ದಾರೆ.
tv1indialive ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಶ್ವಾನವನ್ನು ತನ್ನ ಮರಿಯನ್ನು ಹೇಗೆ ರಕ್ಷಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ದೃಶ್ಯದಲ್ಲಿ ನೀರು ತುಂಬಿದ ಕೊಚ್ಚೆ ಗುಂಡಿಯಲ್ಲಿ ಪುಟ್ಟ ನಾಯಿಮರಿಯೊಂದು ಕುಣಿದು ಕುಪ್ಪಳಿಸುತ್ತಿರುವುದನ್ನು ನೋಡಬಹುದು. ಶ್ವಾನವು ಬೊಗಳುವ ಮೂಲಕ ತನ್ನ ಕಂದಮ್ಮ ನೀರಿನಲ್ಲಿ ಆಟ ಆಡುವುದನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಇದ್ಯಾವುದನ್ನು ಕಿವಿಗೆ ಹಾಕದೇ ಮರಿಯೂ ತನ್ನದೇ ಲೋಕದಲ್ಲಿ ಮುಳುಗಿದಾಗ ಶ್ವಾನವೊಂದು ಒಂದು ಹೆಜ್ಜೆ ಮುಂದೆ ಹೋಗಿ ಪ್ರೀತಿಯಿಂದ ತನ್ನ ಬಾಯಿಯಿಂದ ಅದರ ಬಾಲವನ್ನು ಹಿಡಿದು ನೀರಿನಿಂದ ಮೇಲಕ್ಕೆ ಎಳೆದು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗುವುದನ್ನು ನೋಡಬಹುದು.
ಇದನ್ನೂ ಓದಿ:Video: ಜೋಪಾನವಾಗಿ ಕಂದಮ್ಮನನ್ನು ರಸ್ತೆ ಹತ್ತಿಸಿದ ತಾಯಾನೆ, ಮುದ್ದಾದ ದೃಶ್ಯ ವೈರಲ್
ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮನುಷ್ಯನಾಗಿರಲಿ, ಪ್ರಾಣಿಯಾಗಿರಲಿ ತಾಯಿ ಪ್ರೀತಿ ಒಂದೇ ಎಂದು ಹೇಳಿದ್ದಾರೆ. ತಾಯಿ ಯಾವತ್ತಿದ್ರೂ ತಾಯಿಯೇ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಮಕ್ಕಳಿಗೆ ತೊಂದರೆಯಾಗದಂತೆ ಜತೆಗೆ ನಿಲ್ಲುವ ಜೀವ ಈ ತಾಯಿ, ಅವಳ ಸ್ಥಾನವನ್ನು ಯಾರು ತುಂಬಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Mon, 27 October 25