Viral Video: ವಧುವಿನಂತೆ ರೆಡಿಯಾಗಿ ಕುಳಿತಿದ್ದ ತನ್ನ ತಾಯಿಯನ್ನು ನೋಡಿದ ಪುಟ್ಟ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ

| Updated By: shruti hegde

Updated on: Oct 29, 2021 | 11:45 AM

ಲೆಹೆಂಗಾ ಧರಿಸಿ ಆಭರಣಗಳನ್ನು ತೊಟ್ಟು ವಧುವಿನಂತೆ ರೆಡಿಯಾಗಿದ್ದ ತನ್ನ ತಾಯಿಯನ್ನು ನೋಡಿದ ಪುಟ್ಟ ಮಗುವಿನ ರಿಯಾಕ್ಷನ್​ ಹೇಗಿತ್ತು ನೋಡಿ.

Viral Video: ವಧುವಿನಂತೆ ರೆಡಿಯಾಗಿ ಕುಳಿತಿದ್ದ ತನ್ನ ತಾಯಿಯನ್ನು ನೋಡಿದ ಪುಟ್ಟ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ
ಪುಟ್ಟ ಮಗುವಿನ ರಿಯಾಕ್ಷನ್ ನೋಡಿ
Follow us on

ವಧುವಿನಂತೆ ರೆಡಿಯಾಗಿದ್ದ ತನ್ನ ತಾಯಿಯನ್ನು ನೋಡಿದ ಪುಟ್ಟ ಮಗುವಿನ ರಿಯಾಕ್ಷನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊ ನೆಟ್ಟಿಗರ ಮನ ಗೆದ್ದಿದ್ದು ವಿಡಿಯೊ ಮೆಚ್ಚಿಕೊಂಡಿರುವ ಎಮೋಜಿಗಳನ್ನು ಕಳುಹಿಸುವ ಮೂಲಕ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮೇಕಪ್ ಆರ್ಟಿಸ್ಟ್ ಗುನೀತ್ ಅವರು ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮೇಕಪ್ ಕಲಾವಿದೆ ಅಂಜಲಿ ಅವರ ಮದುವೆಯ ದಿನದಂದು ಈ ವಿಡಿಯೊ ಸೆರೆಹಿಡಿಯಲಾಗಿದೆ.

ವಿಡಿಯೊದಲ್ಲಿ ಗಮನಿಸುವಂತೆ ಅಂಜಲಿ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿ ಮತ್ತು ಆಭರಣಗಳನ್ನು ತೊಟ್ಟು ಕುಳಿತಿರುವುದು ಕಂಡು ಬರುತ್ತದೆ. ಅವಳ ಮಗಳು ಕೋಣೆಗೆ ಪ್ರವೇಶಿಸುತ್ತಿದ್ದಂತೆಯೇ ತನ್ನ ತಾಯಿಯನ್ನು ನೋಡಿ ವಾವ್ ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದು ಪ್ರತಿಕ್ರಿಯೆ ನೀಡಿದ್ದಾಳೆ.

ತಾಯಿಯನ್ನು ಸುಂದರವಾಗಿ ರೆಡಿ ಮಾಡಿದ್ದಕ್ಕಾಗಿ ಮೇಕಪ್ ಆರ್ಟಿಸ್ಟ್ ಬಳಿ ಪುಟ್ಟ ಮಗು ಧನ್ಯವಾದ ತಿಳಿಸಿದ್ದಾಳೆ. ಸುಂದರವಾಗಿ ಕಾಣಿಸುತ್ತಿದ್ದ ತನ್ನ ತಾಯಿಯನ್ನು ಅಪ್ಪಿಕೊಂಡು ಮುತ್ತಿಟ್ಟಿದ್ದಾಳೆ. ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ. 3.9 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 30,000 ಕ್ಕೂ ಹೆಚ್ಚು ಲೈಕ್ಸ್​ಗಳು ಲಭ್ಯವಾಗಿವೆ.

ಪುಟ್ಟ ಮಗು ತುಂಬಾ ಕ್ಯೂಟ್ ಆಗಿದ್ದಾಳೆ. ಅವರ ಹೊಸ ಜೀವನಕ್ಕೆ ಶುಭಾಶಯಗಳು ಎಂದು ಓರ್ವರು ಶುಭ ಹಾರೈಸಿದ್ದಾರೆ. ವಿಡಿಯೊ ತುಂಬಾ ಅದ್ಭುತವಾಗಿದೆ ಎಂದು ಓರ್ವರು ಹೇಳಿದ್ದಾರೆ. ಮನಸ್ಸಿಗೆ ಇಷ್ಟವಾದ ವಿಡಿಯೊ ಇದು ಎಂದು ಹಲವರು ಕಾಮೆಂಟ್ ವಿಭಾಗದಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಸುಮಾರು 10 ಅಡಿ ಆಳದ ಬಾವಿಯಲ್ಲಿ ಬಿದ್ದ ಚಿರತೆ ರಕ್ಷಣೆ; ವಿಡಿಯೊ ನೋಡಿ

Viral Video: ಓರ್ವನಿಗಾಗಿ ಇಬ್ಬರು ಯುವತಿಯರ ಫೈಟಿಂಗ್​; ರಸ್ತೆಯಲ್ಲೇ ಜಗಳವಾಡಿದ ವಿಡಿಯೋ ವೈರಲ್