
ತಾಯಿ ಪ್ರೀತಿನೇ (mother love) ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಪ್ರಾಣಿಗಳು ಹೊರತಾಗಗಿಲ್ಲ. ಹೌದು, ತಾಯಾನೆ (mother elephant) ತನ್ನ ಮರಿಯನ್ನು ಎಷ್ಟು ಕೇರ್ ಮಾಡುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಮರಿಯಾನೆಯೊಂದು ಓಡುತ್ತಿದ್ದು, ತಾಯಾನೆ ಅದರ ಹಿಂದೆಯೇ ಓಡುತ್ತಾ ಸೊಂಡಿಲಿನಿಂದ ಬೀಳದಂತೆ ತಡೆಯುವ ಹೃದಯಸ್ಪರ್ಶಿ ದೃಶ್ಯ ಇದಾಗಿದೆ. ಈ ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ಕಳೆದೇ ಹೋಗಿದ್ದಾರೆ.
rachellehaven5 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತಾಯಾನೆ ಮರಿಯಾನೆಯನ್ನು ಕಾಳಜಿ ವಹಿಸುವುದನ್ನು ನೋಡಬಹುದು. ಪುಟಾಣಿ ಆನೆಯೂ ತನ್ನ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಓಡುತ್ತಿದ್ದು, ಇತ್ತ ತಾಯಾನೆ ಅದರ ಜತೆಗೆ ಓಡುತ್ತಿದೆ. ಕೊನೆಗೆ, ತನ್ನ ಸೊಂಡಿಲಿನಿಂದ ಕಂದಮ್ಮನ ಕೊರಳಿಗೆ ಕಟ್ಟಿದ ಹಗ್ಗ ಹಿಡಿದು ಬೀಳದಂತೆ ತಡೆದಿದೆ.
ಇದನ್ನೂ ಓದಿ: ಮಾಲೀಕಳ ಜತೆಗೆ ಗಜರಾಜನ ಕಣ್ಣಾಮುಚ್ಚಾಲೆ ಆಟ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಇದುವರೆಗೆ ಎಂಭತ್ತೆಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಾನೆ ಹಾಗೂ ಮರಿಯಾನೆ ಇಬ್ಬರೂ ಎಲ್ಲಿಗೆ ಓಡಿ ಹೋಗ್ತಾ ಇದ್ದೀರಾ ಎಂದು ಕೇಳಿದ್ದಾರೆ. ಇನ್ನೊಬ್ಬರು, ಅಮ್ಮನ ಬಿಟ್ಟು ಎಲ್ಲಿಗೆ ಓಡ್ತಾ ಇದ್ಯಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಮುದ್ದಾದ ವಿಡಿಯೋ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Mon, 1 December 25