ವೇಗ ಯಾವತ್ತಿದ್ದರೂ ಅಪಾಯಕ್ಕೆ ಆಹ್ವಾನ ನೀಡಿದಂತೆ ಸರಿ. ಇತ್ತೀಚಿನ ದಿನಗಳಲ್ಲಂತೂ ಅವಸರದ ವಾಹನ ಚಾಲನೆಯಿಂದ ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ. ರಸ್ತೆ ಅಪಘಾತ (Road Accident) ಗಳು ಕೆಲವೊಮ್ಮೆ ಜೀವವನ್ನೇ ತೆಗೆಯುತ್ತದೆ. ಇನ್ನೂ ಕೆಲವರದ್ದು ಅದೃಷ್ಟ ಒಳ್ಳೆಯದಿದ್ದರೆ ಬಚಾವ್ ಆಗುತ್ತಾರೆ. ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಮಳೆಯ ಮಧ್ಯೆ ರಸ್ತೆಯಲ್ಲಿ ಬಿದ್ದ ಬೈಕ್ ಸವಾರ (Motorcyclist) ನೊಬ್ಬ ಟ್ರಕ್ ನಡಿ ಸಿಲುಕಿವುದರಿಂದ ಕೂದಲೆಳೆ ಅಂತರದಲ್ಲಿ ಪಾರಾದ ವಿಡಿಯೋ ವೈರಲ್ ಆಗಿದೆ. ಯುಟ್ಯೂಬ್ನಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ರಸ್ತೆಬದಿಯಿದ್ದ ಕಾರು ಚಾಲಕನೊಬ್ಬ ಈ ಅಪಘಾತದ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಮಲೇಷಿಯಾದ ಹೈವೇನಲ್ಲಿ ಈ ಘಟನೆ ನಡೆದಿದೆ.
ಈ ಕುರಿತು ಎನ್ಡಿಟಿವಿ ಸುದ್ದಿಸಂಸ್ಥೆ ವರದಿ ಮಾಡಿದೆ. ವಿಡಿಯೋದಲ್ಲಿ ಬೈಕ್ ಸವಾರನೋರ್ವ ಸ್ಪೀಡ್ ಆಗಿ ಬಂದು ರಸ್ತೆಯ ಮಧ್ಯೆ ಬೀಳುವುದನ್ನು ಕಾಣಬಹುದು. ವೇಗವಾಗಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಬಿದ್ದಿದ್ದಾನೆ. ತಕ್ಷಣ ಆತ ಬಿದ್ದ ಜಾಗದಿಂದ ಏಳುವಷ್ಟರಲ್ಲಿ ಟ್ರಕ್ವೊಂದು ಅದೇ ರಸ್ತೆಯಲ್ಲಿ ಬರುತ್ತಿರುವುದನ್ನು ಕಾಣಬಹುದು. ತಕ್ಷಣ ಎಚ್ಚೆತ್ತುಕೊಂಡ ಬೈಕ್ ಸವಾರ ಎದ್ದು ಮುಂದಕ್ಕೆ ಜಿಗಿದ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಅಪಘಾತದ ವೇಳೆ ಮಳೆಯೂ ಬರುತ್ತಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ವಿಡಿಯೋವನ್ನು ಜ.28ರಂದು ಹಂಚಿಕೊಳ್ಳಲಾಗಿದೆ. ಯುಟ್ಯೂಬ್ನಲ್ಲಿ ಬ್ಲಿಂಕ್ ಎನ್ನುವ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ.
ಒಂದು ವರದಿಯ ಪ್ರಕಾರ ಪ್ರತೀ ವರ್ಷ ಜಗತ್ತಿನಲ್ಲಿ 1.35 ಮಿಲಿಯನ್ಗೂ ಹೆಚ್ಚು ಜನ ಅಪಘಾತಗಳಿಂದ ಸಾವನ್ನಪ್ಪುತ್ತಾರೆ. ಯುಎಸ್ ಒಂದರಲ್ಲೆ ಪ್ರತಿ ವರ್ಷ 6 ಮಿಲಿಯನ್ ಅಪಘಾತಗಳು ಸಂಭವಿಸುತ್ತವೆ. ಭಾರತದಲ್ಲಿ ಪ್ರತೀ ವರ್ಷ 2 ಮಿಲಿಯನ್ ಅಪಘಾತಗಳು ಸಂಭವಿಸುತ್ತವೆ.
ಇದನ್ನೂ ಓದಿ:
ವರ್ಕ್ ಫ್ರಮ್ ಹೋಮ್ ಸಂಕಷ್ಟ; ಮದುವೆಯ ದಿನವೂ ಲ್ಯಾಪ್ ಟಾಪ್, ಫೋನ್ ಹಿಡಿದು ಕುಳಿತ ವಧು
Published On - 3:57 pm, Fri, 28 January 22