ಈ ಸಮಾಜದಲ್ಲಿ ಹಿಂದಿನಿಂದಲೂ ಬಡವ-ಶ್ರೀಮಂತ ಎಂಬ ತಾರತಮ್ಯ ನಡೆದುಕೊಂಡು ಬರುತ್ತಲೇ ಇವೆ. ಮನುಷ್ಯರನ್ನು ಬಡವ ಶ್ರೀಮಂತ ಎಂದು ತಾರತಮ್ಯ ಮಾಡದೆ ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು ಎಂದು ಹೇಳಿದ್ರೂ ಕೂಡಾ ಇಂದಿಗೂ ಈ ತಾರತಮ್ಯ ನಡೆಯುತ್ತಲೇ ಇದೆ. ಕಾನೂನುಗಳಿಂದ ಹಿಡಿದು ಪ್ರತಿಯೊಂದು ವ್ಯವಸ್ಥೆಯಲ್ಲೂ ಈ ಬೇಧ-ಭಾವಗಳು ನಡೆಯುತ್ತಲೇ ಇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಗಣೇಶೋತ್ಸವದ ಸಂದರ್ಭದಲ್ಲಿ ದೇವರ ಮುಂದೆಯೇ ಬಡವ-ಶ್ರೀಮಂತ ಎಂಬ ಭೇದವನ್ನು ತೋರಿದ್ದಾರೆ. ಈ ಕುರಿತ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವಿ.ಐ.ಪಿಗಳು ದೇವರ ಮುಂದೆ ನಿಂತು ಫೋಟೋ ಕ್ಲಿಕ್ಕಿಸಬಹುದಂತೆ ಆದ್ರೆ ಸಾಮಾನ್ಯ ಜನರು ದೇವರ ಪಾದ ಮುಟ್ಟಿ ನೆಮ್ಮದಿಯಿಂದ ಕೈ ಮುಗಿಯುವಂತಿಲ್ಲ ಇದ್ಯಾವ ಸೀಮೆಯ ನ್ಯಾಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಈ ಘಟನೆ ಮುಂಬೈನಲ್ಲಿ ನಡೆದಿದ್ದು, ಗಣೇಶೋತ್ಸವದ ಸಂದರ್ಭದಲ್ಲಿ ದೇವರ ಮುಂದೆಯೇ ಸಾಮಾನ್ಯ ಜನರಿಗೊಂದು ನ್ಯಾಯ, ವಿಐಪಿಗಳಿಗೊಂದು ನ್ಯಾಯ ಎಂಬ ಭೇಧ-ಭಾವವನ್ನು ತೋರಲಾಗಿದೆ. ಇಲ್ಲಿನ ಲಾಲ್‌ಬೌಚಾ ಗಣೇಶೋತ್ಸವ ತುಂಬಾನೇ ಪ್ರಸಿದ್ಧವಾಗಿದ್ದು, ಗಣೇಶೋತ್ಸವದ ಸಂದರ್ಭದಲ್ಲಿ ಪಡೆಯಲು ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಇಲ್ಲಿ ಕೂರಿಸುವ ಗಣೇಶನ ದರ್ಶನ ಪಡೆಯಲು ಧಾವಿಸಿ ಬರುತ್ತಾರೆ. ಆದ್ರೆ ಇದೀಗ ಈ ದೇವರ ಸನ್ನಿಧಿಯಲ್ಲೂ ಭೇದ-ಭಾವನ್ನು ತೋರಿದ್ದು, ತುಂಬಿ ತುಳುಕುವ ಜನರ ಮಧ್ಯೆ ವಿಐಪಿಗಳು ದೇವರ ಮುಂದೆ ನಿಂತು ವಿಡಿಯೋ, ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಸುಮ್ಮನಿದ್ದ ಸೆಕ್ಯುರಿಟಿಗಳು, ಅಲ್ಲೇ ಪಕ್ಕದಲ್ಲಿ ಗಣೇಶನ ಪಾದಕ್ಕೆ ಅಡ್ಡ ಬಿದ್ದು ನಮಸ್ಕರಿಸುತ್ತಿದ್ದ ಜನಸಾಮಾನ್ಯರ ಕುತ್ತಿಗೆ ಪಟ್ಟಿ ಹಿಡಿದು ಬೇಗ ಬೇಗ ಹೋಗಿ ಎಂದು ಹೊರ ದಬ್ಬಿದ್ದಾರೆ.
Won’t be surprised if Lalbaugcha Raja Pandal is declared as VIP only in future. The treatment is so highly visible in a single frame.
High time Mumbai Police takes over the crowd management, otherwise, slowly will lose essence amongst the common public.
📹 Reddit pic.twitter.com/kV6clamdsl
— Karthik Nadar (@runkarthikrun) September 12, 2024
ಈ ಕುರಿತ ವಿಡಿಯೋವೊಂದನ್ನು ಕಾರ್ತಿಕ್ (Karthik Nadar) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ವೈರಲ್ ವಿಡಿಯೋದಲ್ಲಿ ಒಂದು ಕಡೆ ವಿಐಪಿಗಳು ಅರಾಮವಾಗಿ ನಿಂತು ದೇವರ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ನಿಂತರೆ ಇನ್ನೊಂದು ಕಡೆ ದೇವರ ಪಾದ ಮುಟ್ಟಿ ನಮಸ್ಕರಿಸುತ್ತಿದ್ದ ಸಾಮಾನ್ಯ ಭಕ್ತರನ್ನು ಸೆಕ್ಯುರಿಟಿಗಳು ನೆಮ್ಮದಿಯಿಂದ ದೇವರ ದರ್ಶನ ಪಡೆಯಲೂ ಟೈಂ ಕೊಡದೆ ಆಚೆ ತಳ್ಳುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕಾರು-ಬಸ್ ನಡುವೆ ಭೀಕರ ಅಪಘಾತ; ಕ್ಯಾಮೆರಾದಲ್ಲಿ ಸೆರೆಯಾಯ್ತು ರಣ ಭೀಕರ ದೃಶ್ಯ
ಸೆಪ್ಟೆಂಬರ್ 12 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಭಾರತದಲ್ಲಿ ಯಾವಾಗಲೂ ಬಡವ ಶ್ರೀಮಂತ ಎನ್ನುವ ಭೇದ-ಭಾವ ಇದ್ದೇ ಇದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜಕ್ಕೂ ಇದು ತುಂಬಾ ದುಃಖಕರ ಸಂಗತಿಯಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Fri, 13 September 24