ಡಬಲ್​ ಮಾಸ್ಕ್​ ಧರಿಸುವುದರ ಮಹತ್ವದ ಕುರಿತು ಪೋಸ್ಟ್​ ಹಂಚಿಕೊಂಡ ಮುಂಬೈ ಪೊಲೀಸರು

| Updated By: guruganesh bhat

Updated on: May 06, 2021 | 5:49 PM

Double Mask: ಎರಡು ಮುಖಗವಸನ್ನು ಧರಿಸುವುದರ ಮಹತ್ವಕ್ಕೆ ಒತ್ತು ನೀಡಲು ಟ್ವೀಟ್​ನಲ್ಲಿ ಪರಿಣಾಮಕಾರಿಯಾದ ಪೋಸ್ಟ್​ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಡಬಲ್​ ಮಾಸ್ಕ್​ ಧರಿಸುವುದರ ಮಹತ್ವದ ಕುರಿತು ಪೋಸ್ಟ್​ ಹಂಚಿಕೊಂಡ ಮುಂಬೈ ಪೊಲೀಸರು
ಡಬಲ್​ ಮಾಸ್ಕ್​ ಧರಿಸುವುದರ ಮಹತ್ವದ ಕುರಿತು ಪೋಸ್ಟ್​ ಹಂಚಿಕೊಂಡ ಮುಂಬೈ ಪೊಲೀಸರು
Follow us on

ಕೊವಿಡ್​ 19 ಎರಡನೇ ಅಲೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ವೈದ್ಯಕೀಯ ತಜ್ಞರು ಮತ್ತು ಅಧಿಕಾರಿಗಳು ಎರಡು ಮುಖಗವಸನ್ನು (ಡಬಲ್​ ಮಾಸ್ಕ್​) ಬಳಸುವುದು ಮತ್ತು ಅದರ ಮಹತ್ವದ ಕುರಿತಾಗಿ ಜನರಿಗೆ ಸಲಹೆ ನೀಡುತ್ತಿದ್ದಾರೆ.

ಈ ಕುರಿತಂತೆ ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿರುವುದು ವೈರಲ್​ ಆಗುತ್ತಿದೆ. ಎರಡು ಮುಖಗವಸನ್ನು ಧರಿಸುವುದರ ಮಹತ್ವಕ್ಕೆ ಒತ್ತು ನೀಡಲು ಟ್ವೀಟ್​ನಲ್ಲಿ ಪರಿಣಾಮಕಾರಿಯಾದ ಪೋಸ್ಟ್​ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

1975ರಲ್ಲಿ ಬಿಡುಗಡೆಗೊಂಡ ‘ಶೋಲೆ’ ಚಲನಚಿತ್ರದಲ್ಲಿನ ಅಮಿತಾಬ್​ ಬಚ್ಚನ್​​ ಮತ್ತು ಧರ್ಮೇಂದ್ರ (ಜೈ ಮತ್ತು ವೀರು) ಅವರ ಸಂಭಾಷಣೆಯೊಂದನ್ನು ಟ್ವಿಟ್​ರ್​ ಪೋಸ್ಟ್​ನಲ್ಲಿ ಹಂಚಿಕೊಳ್ಳಲಾಗಿದೆ. ಶೋಲೆ ಚಿತ್ರದಲ್ಲಿನ ಪಾತ್ರಧಾರಿಗಳಾದ ಜೈ ಮತ್ತು ವೀರು ಅವರ ಸಂಭಾಷಣೆಯನ್ನು ಉಲ್ಲೇಖಿಸಲಾಗಿದೆ. ಚಿತ್ರದಲ್ಲಿನ ‘ಡೆನಿಮ್ ಆನ್ ಡೆನಿಮ್’ ಎಂಬ ಸಂಭಾಷಣೆಯನ್ನು ಪ್ರಸ್ತುತಕ್ಕೆ ಹೋಲಿಸಿ ಎರಡು ಮುಖಗವಸು ಧರಿಸಿ ವ್ಯಕ್ತಿಗೆ ‘ಮಾಸ್ಕ್​ ಆನ್​ ಮಾಸ್ಕ್​’ ಎಂದು ಬರೆದು ಟ್ವಿಟರ್​ನಲ್ಲಿ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಜೊತೆಗೆ ‘ಕಿತ್ನೆ ಮಾಸ್ಕ್​ ಸೇಫ್​ ಹೈ’ ಎಂದು ಪೋಸ್ಟ್​ನಲ್ಲಿ ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ: ಮದುವೆಯಲ್ಲಿ ಹೂಮಾಲೆ ಬದಲಾಯಿಸಲು ಬಿದಿರಿನ ಕೋಲು ಬಳಸಿದ ದಂಪತಿ; ವೈರಲ್​ ಆಯ್ತು ವಿಡಿಯೋ

ಪ್ರಾರ್ಥನೆ ಮಾಡಿದ ಬಳಿಕವೇ ಆಹಾರ ಸೇವಿಸುವ ನಾಯಿಮರಿಗಳು; ವಿಡಿಯೋ ವೈರಲ್​