
ಕಳೆದ ಡಿಸೆಂಬರ್ನಲ್ಲಿ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಪುಷ್ಪ (Pushpa) ಚಿತ್ರ ಬಿಡುಗಡೆಯಾಗಿ ಸಖತ್ ಸದ್ದು ಮಾಡಿದೆ. ಪುಷ್ಟ ಚಿತ್ರದ ಹಾಡುಗಳಂತೂ ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲು ಅರ್ಜುನ ಅವರ ಸಿಗ್ನೇಚರ್ ಸ್ಟೆಪ್ ಎಲ್ಲರ ಗಮನ ಸೆಳೆದಿದೆ. ಇದೀಗ ಮುಂಬೈ ಪೊಲೀಸರು ಬ್ಯಾಂಡ್ನಲ್ಲಿ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡನ್ನು ನುಡಿಸಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋವನ್ನು ಯುಟ್ಯೂಬ್ನಲ್ಲಿ ಶೇರ್ ಮಾಡಲಾಗಿದೆ. ಮುಂಬೈ ಪೊಲೀಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋದ ಲಿಂಕ್ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪೊಲೀಸರು ತಮ್ಮ ಬ್ಯಾಂಡ್ ನಲ್ಲಿ ಶ್ರೀವಲ್ಲಿಯ ಹಾಡು ನುಡಿಸಿದ್ದಾರೆ. ವಿಡಿಯೋದಲ್ಲಿ ಬ್ಯಾಂಡ್ ಸದಸ್ಯರು ಕ್ಲಾರಿನೆಟ್, ಸ್ಯಾಕ್ಸೋಫೋನ್, ಟ್ರಂಪೆಟ್ ಮತ್ತು ಕೊಳಲು ಸೇರಿದಂತೆ ಹಲವಾರು ಸಂಗೀತ ವಾದ್ಯಗಳನ್ನು ನುಡಿಸುವುದನ್ನು ಕಾಣಬಹುದು.
ಈ ಹಿಂದೆ ಕೂಡ ಶ್ರೀವಲ್ಲಿ ಹಾಡು ಹಲವು ಕ್ಷೇತ್ರಗಳಲ್ಲಿ ವೈರಲ್ ಆಗಿತ್ತು. ಉದಾಹರಣೆಗೆ ಯಕ್ಷಗಾನದಲ್ಲಿಯೂ ಶ್ರೀವಲ್ಲಿ ಹಾಡನ್ನು ಹಾಕಿ ಹೆಜ್ಜೆಹಾಕಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಅದಕ್ಕೂ ಮೊದಲು ಡೆವೊಡೆ್ ವಾರ್ನರ್ ಸೇರಿದಂತೆ ಹಲವು ತಾರೆಯರೂ ಕೂಡ ಅಲ್ಲು ಅರ್ಜುನ್ ಸಿಗ್ನೇಚರ್ ಸ್ಟೆಪ್ ಮೂಲಕ ಸುದ್ದಿಯಾಗಿದ್ದರು.
ಇದನ್ನೂ ಓದಿ:
ಒಂದು ವಡಾ ಪಾವ್ಗೆ 250 ರೂ: ಚರ್ಚೆಗೆ ಕಾರಣವಾದ ವಿಮಾನದ ದುಬಾರಿ ಫುಡ್