Video Viral: ತನ್ನ ಮುದ್ದಿನ ನಾಯಿಗೆ 2.5ಲಕ್ಷ ರೂ. ಬೆಲೆಯ ಚಿನ್ನದ ಸರ ಖರೀದಿಸಿದ ಮಹಿಳೆ; ವಿಡಿಯೋ ವೈರಲ್

|

Updated on: Jul 06, 2024 | 9:42 AM

ವೈರಲ್​​ ಆಗಿರುವ ವಿಡಿಯೋದಲ್ಲಿ ಮಹಿಳೆ ತನ್ನ ಶ್ವಾನಕ್ಕೆ ದುಬಾರಿ ಬೆಲೆಯ ಚಿನ್ನದ ಸರ ಖರೀದಿಸಿ ತೊಡಿಸುತ್ತಿರುವುದನ್ನು ಕಾಣಬಹುದು. ಮೂಕ ಪ್ರಾಣಿಯ ಮೇಲಿನ ಮಹಿಳೆಯ ಪರಿಶುದ್ಧವಾದ ಪ್ರೀತಿಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Video Viral: ತನ್ನ ಮುದ್ದಿನ ನಾಯಿಗೆ 2.5ಲಕ್ಷ ರೂ. ಬೆಲೆಯ ಚಿನ್ನದ ಸರ ಖರೀದಿಸಿದ ಮಹಿಳೆ; ವಿಡಿಯೋ ವೈರಲ್
Follow us on

ಮಹಾರಾಷ್ಟ್ರ: ಸಾಕು ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿರುತ್ತವೆ. ಇದೀಗ ಅಂತದ್ದೇ ವಿಡಿಯೋವೊಂದು ಲಕ್ಷಾಂತರ ನೆಟ್ಟಿಗರ ಮನಗೆದ್ದಿದೆ. ತನ್ನ ಮುದ್ದಿನ ಶ್ವಾನಕ್ಕೆ ಮಹಿಳೆಯೊಬ್ಬಳು ಚಿನ್ನದ ಸರ ಖರೀದಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬರೋಬ್ಬರಿ 2ಲಕ್ಷ ರೂಪಾಯಿ ಖರ್ಚು ಮಾಡಿ ತನ್ನ ಮುದ್ದಿನ ಶ್ವಾನಕ್ಕೆ ವಿಶೇಷ ಉಡುಗೊರೆ ನೀಡಿದ್ದಾಳೆ.

ಮಹಾರಾಷ್ಟ್ರದ ಅನಿಲ್​​ ಜುವೆಲ್ಲರಿಸ್​​​ ಅವರು ತಮ್ಮ ಇನ್ಸ್ಟಾಗ್ರಾಮ್​​​(aniljewellersofficial) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಜೂನ್​​ 16ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವಿಶ್ವಕಪ್​​​ ಕಲಿಗಳನ್ನು ನೋಡಲು ಮರವೇರಿ ಕುಳಿತ ಕ್ರಿಕೆಟ್‌ ಪ್ರೇಮಿ; ಫೋಟೋ ವೈರಲ್‌

ವೈರಲ್​​ ಆಗಿರುವ ವಿಡಿಯೋದಲ್ಲಿ ಮಹಿಳೆ ತನ್ನ ಶ್ವಾನದೊಂದಿಗೆ ಚಿನ್ನದ ಅಂಗಡಿಗೆ ಬಂದಿರುವುದನ್ನು ಕಾಣಬಹುದು. ಬಳಿಕ ದುಬಾರಿ ಬೆಲೆಯ ಸರ ಖರೀದಿಸಿ ಶ್ವಾನದ ಕುತ್ತಿಗೆಗೆ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮೂಕ ಪ್ರಾಣಿಯ ಮೇಲಿನ ಮಹಿಳೆ ಪರಿಶುದ್ಧವಾದ ಪ್ರೀತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:20 am, Sat, 6 July 24