Viral: ಹೋಟೆಲ್‌ಗಳಲ್ಲಿ ನಂ.13ರ ರೂಮ್ ಇರೋದಿಲ್ಲ ಯಾಕೆ? ಇದರ ಹಿಂದಿರುವ ಕಾರಣ ಏನ್ ಗೊತ್ತಾ?
Hotel Room 13: ಈ ಪ್ರಪಂಚದ ಹೆಚ್ಚಿನ ಹೋಟೆಲ್‌ಗಳಲ್ಲಿ ಅಥವಾ ಬಹು ಮಹಡಿ ಕಟ್ಟಡಗಳಲ್ಲಿ 13 ನೇ ಫ್ಲೋರ್ ಆಗಲಿ ಅಥವಾ 13ನೇ ನಂಬರ್‌ನ ಕೊಠಡಿಯಾಗಲಿ ಕಾಣಸಿಗುವುದಿಲ್ಲ. ಹೋಟೆಲ್ ರೂಮ್‌ಗಳಿಗೆ ಭೇಟಿ ನೀಡಿದಾಗ ನೀವು ಕೂಡಾ ಈ ಒಂದು ಅಂಶವನ್ನು ಗಮನಿಸಿರಬಹುದಲ್ವಾ. ಅಷ್ಟಕ್ಕೂ ಸಂಖ್ಯೆ 13 ರ ಕೊಠಡಿಯಾಗಲಿ ಅಥವಾ ಮಹಡಿಯಾಗಲಿ ಯಾಕಿರುವುದಿಲ್ಲ ಎಂಬ ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಬಹುಶಃ ನೀವು ಕೂಡಾ ಹೋಟೆಲ್ ರೂಮ್‌ಗಳಿಗೆ ಭೇಟಿ ನೀಡಿದಾಗ ಅಲ್ಲಿ ವಿಶೇಷವಾಗಿ ಸಂಖ್ಯೆ 13 ರ ಫ್ಲೋರ್ ಅಥವಾ ರೂಮ್ ನಂಬರ್ 13 ಇಲ್ಲದಿರುವುದು ನಿಮ್ಮ ಗಮನಕ್ಕೂ ಬಂದಿರಬಹುದಲ್ವಾ. ಅಲ್ಲಾ ಈ ಹೋಟೆಲ್‌ರೂಮ್‌ಗಳ ಸಂಖ್ಯೆಯನ್ನು 12 ರ ನಂತರ ಏಕೆ ನೇರವಾಗಿ 14 ಎಂದು ಹೆಸರಿಸಲಾಗುತ್ತದೆ, ಇದರ ಹಿಂದೆ ಏನಾದ್ರೂ ವಿಶೇಷ ಕಾರಣ ಇದೆಯಾ ಎಂಬ ಯೋಚನೆ ನಿಮಗೂ ಬಂದಿದ್ಯಾ. ಹಾಗಿದ್ರೆ ಸಂಖ್ಯೆ 13 ರ ಕೊಠಡಿಯಾಗಲಿ ಅಥವಾ ಮಹಡಿಯಾಗಲಿ ಯಾಕಿರುವುದಿಲ್ಲ ಎಂಬ ಇಂಟೆರೆಸ್ಟಿಂಗ್ ಮಾಹಿತಿಯನ್ನು ತಿಳಿಯಿರಿ.
ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸಂಖ್ಯೆ 13 ರನ್ನು ಅಶುಭವೆಂದು ಪರಿಗಣಿಸಲಾಗುತ್ತದೆ:
ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳ ಹೆಚ್ಚಿನ ಬಹು ಮಹಡಿಯ ಕಟ್ಟಡಗಳಲ್ಲಿ ಮತ್ತು ಹೋಟೆಲ್ ರೂಮ್‌ಗಳಲ್ಲಿ 13 ನೇ ಸಂಖ್ಯೆಯ ಕೊಠಡಿ ಅಥವಾ ಫ್ಲೋರ್ ಇರುವುದಿಲ್ಲ, ಲಿಫ್ಟ್‌ಗಳಲ್ಲಿಯೂ 12 ನೇ ಸಂಖ್ಯೆಯ ನಂತರ ನಂಬರ್ 14 ಇರುತ್ತದೆ. ಅನೇಕ ಬಹು ಮಹಡಿ ಕಟ್ಟಡಗಳಲ್ಲಿ ಫ್ಲೋರ್‌ಗಳನ್ನು 12 ರ ನಂತರ 12A ಅಥವಾ 14A ಎಂದು ಹೆಸರಿಸಲಾಗಿರುತ್ತದೆ. ಮತ್ತು 13 ಸಂಖ್ಯೆಯನ್ನು ಎಲ್ಲೂ ಬಳಸೋದಿಲ್ಲ. ಏಕೆಂದರೆ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸಂಖ್ಯೆ 13 ಅಶುಭದ ಸಂಖ್ಯೆಯಾಗಿದೆ. ಅನೇಕರು ಈ ಸಂಖ್ಯೆ ದೆವ್ವ, ಆತ್ಮಗಳೊಂದಿಗೆ ಸಂಬಂಧ ಹೊಂದಿದೆ ಎಂದೂ ನಂಬಿದ್ದಾರೆ. ಸಂಖ್ಯೆ 13 ಅನ್ನು ಅಪಾಯಕಾರಿ ಎಂದು ಪರಿಗಣಿಸುವ ಪಾಶ್ಚಿಮಾತ್ಯರು 13 ನೇ ತಾರಿಕಿನಂದು ಯಾವುದೇ ಹೊಸ ವ್ಯವಹಾರಗಳನ್ನು ಪ್ರಾರಂಭಿಸುವುದಿಲ್ಲ. ಜೊತೆಗೆ ಯಾವುದೇ ಶುಭ ಸಮಾರಂಭ, ಮದುವೆ ಇನ್ನಿತರ ಕಾರ್ಯಕ್ರಮಗಳನ್ನು ಈ ದಿನ ಏರ್ಪಡಿಸುವುದಿಲ್ಲ. ಜೊತೆಜೊತೆಗೆ ಹೋಟೆಲ್ ರೂಮ್ ಮತ್ತು ಬಹುಮಹಡಿಯ ಕಟ್ಟಡಗಳ ಫ್ಲೋರ್‌ಗಳಲಿಗೂ ಈ ನಂಬರ್ ಅನ್ನು ಹೆಸರಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ಭಾರತದ ಅನೇಕ ಹೋಟೆಲ್‌ಗಳಲ್ಲಿಯೂ ಕಂಡು ಬರುತ್ತಿದೆ.
ಇದನ್ನೂ ಓದಿ: ಇಂಗ್ಲೀಷ್ ವರ್ಣಮಾಲೆಯಲ್ಲಿ 26 ಅಲ್ಲ 27 ಅಕ್ಷರಗಳಿವೆ, ಆ ಇಪ್ಪತ್ತೇಳನೇ ಅಕ್ಷರ ಯಾವುದು?
ಇನ್ನೊಂದು ಕಾರಣವೆಂದರೆ ಇದೊಂದು ರೀತಿಯ ಫೋಬಿಯಾ. ಹೌದು 13 ನೇ ಸಂಖ್ಯೆಯ ಬಗ್ಗೆ ಒಂದು ರೀತಿಯ ಭಯ ವಿಶ್ವಾದ್ಯಂತ ಹರಡಿದೆ. ಇದು ಒಂದು ರೀತಿಯ ಫೋಬಿಯಾ ಆಗಿದ್ದು, ಸಂಖ್ಯೆ 13 ರ ಈ ಭಯವನ್ನು ಟ್ರೆಸ್ಕೈಡೆಕಾಫೋಬಿಯಾ (Triskaidekaphobia) ಎಂದು ಕರೆಯಲಾಗುತ್ತದೆ. ಈ ಫೋಬಿಯಾದಿಂದ ಬಳಲುತ್ತಿರುವವರು ಸಂಖ್ಯೆ 13 ರನ್ನು ನೋಡಿದಾಗ ಭಯ ಪಡುತ್ತಾರೆ. ಮತ್ತು ಅವರ ಹೃದಯದ ಬಡಿತ ಹೆಚ್ಚಾಗಿ ಬೆವರಲು ಪ್ರಾರಂಭಿಸುತ್ತಾರೆ. ಇದೇ ಕಾರಣಕ್ಕೆ ಈ ಫೋಬಿಯಾದವರು ಹೋಟೆಲ್‌ಗೆ ಬಂದಾಗ ಅವರಿಗೆ ಭಯವಾಗಬಾರದೆಂದು ಬಹುಮಹಡಿ ಕಟ್ಟಡಗಳ ಫ್ಲೋರ್, ಕೊಠಡಿ ಸಂಖ್ಯೆ ಮತ್ತು ಲಿಫ್ಟ್‌ಗಳಲ್ಲಿ ಸಂಖ್ಯೆ 13 ಇರುವುದಿಲ್ಲ.
ಈ ಇಂಟರೆಸ್ಟಿಂಗ್ ಸ್ಟೋರಿಗೆ ಸಂಬಂಧಿಸಿದ ವಿಡಿಯೋವನ್ನು @nammanewsmedia.in ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ