Viral Video: ಮಟನ್ ಕೈಮಾ ಬಳಸಿ ಕೇಕ್ ತಯಾರಿಸಿದ ಮಹಿಳೆ; ವೈರಲ್ ಆಯ್ತು ವಿಡಿಯೋ
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಮಟನ್ ಕೈಮಾ ತಯಾರಿಸಿ ಅದನ್ನು ಕೇಕ್ ಕ್ರೀಮ್ ನಡುವೆ ಸುರಿದು ಕೇಕ್ ತಯಾರಿಸುತ್ತಿರುವುದನ್ನು ಕಾಣಬಹುದು. ಈ ರೀತಿಯ ಸಂಯೋಜನೆಗಳನ್ನು ಆಹಾರದಲ್ಲಿ ಎಂದಿಗೂ ಪ್ರಯತ್ನಿಸಬೇಡಿ ಎಂದು ಸಾಕಷ್ಟು ಜನರು ಕಾಮೆಂಟ್ ಮೂಲಕ ಸಲಹೆ ನೀಡಿದ್ದಾರೆ.
ತಮಿಳುನಾಡಿನ ಮಧುರೈನ ಮಹಿಳೆಯೊಬ್ಬರು ‘ಮಟನ್ ಕೈಮಾ ಕೇಕ್’ ತಯಾರಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಹುಟ್ಟು ಹಬ್ಬದ ಕೇಕ್ ತಯಾರಿಸುವ ವೇಳೆ ಅದಕ್ಕೆ ಮಟನ್ ಬಳಸುತ್ತಿರುವುದನ್ನು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿಧು ಸಿಂಗ್ ಎಂಬ ಮಹಿಳೆ ತನ್ನ ಇನ್ಸ್ಟಾಗ್ರಾಮ್ ಖಾತೆ(vidhus.kitchen)ಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ಒಂದು ವಾರದಲ್ಲಿ 3.6 ಮಿಲಿಯನ್ ಅಂದರೆ 30ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಸಿರಪ್ ಬಾಟಲಿ ನುಂಗಿ ಸಂಕಷ್ಟಕ್ಕೆ ಸಿಲುಕಿದ ನಾಗಪ್ಪ; ರಕ್ಷಣೆಗೆ ಧಾವಿಸಿದ ಸ್ನೇಕ್ ಹೆಲ್ಪ್‌ಲೈನ್
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಮಟನ್ ಕೈಮಾ ತಯಾರಿಸಿ ಅದನ್ನು ಕೇಕ್ ಕ್ರೀಮ್ ನಡುವೆ ಸುರಿದು ಕೇಕ್ ತಯಾರಿಸುತ್ತಿರುವುದನ್ನು ಕಾಣಬಹುದು. ಇದುವರೆಗೂ ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿ ವಿವಿಧ ಕಾಮೆಂಟ್‌ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸಂಯೋಜನೆಗಳ ಆಹಾರದಲ್ಲಿ ಎಂದಿಗೂ ಪ್ರಯತ್ನಿಸಬಾರದು ಎಂದು ಸಾಕಷ್ಟು ಜನರು ಕಾಮೆಂಟ್ ಮೂಲಕ ಸಲಹೆ ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ