ಈ ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ವೀವ್ಸ್ ಗಳಿಸಲು, ರಾತ್ರೋರಾತ್ರಿ ಫೇಮಸ್ ಆಗಲು ಜನ ಹುಚ್ಚು ಸಾಹಸಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ಟ್ರೈನ್, ಮೆಟ್ರೋ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೊಂದರೆ ಕೊಡುತ್ತಾ, ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಇನ್ನೂ ಕೆಲವರಂತೂ ಅತಿರೇಕವಿನಿಸುವಂತೆ ವರ್ತಿಸಿ ಇತರರಿಗೂ ಮುಜುಗರವನ್ನುಂಟುಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಕೂಡಾ ಅಹಸ್ಯಕರ ವರ್ತನೆಯನ್ನು ತೋರಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಹೌದು ತುಂಡುಡುಗೆ ತೊಟ್ಟು ರೈಲಿನೊಳಗೆ ಎಂಟ್ರಿ ಕೊಟ್ಟ ಆಕೆ ಸಹ ಪ್ರಯಾಣಿಕರ ಎದುರಲ್ಲಿಯೇ ಬೋಲ್ಡ್ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮುಂಬೈನ ಲೋಕಲ್ ಟ್ರೈನ್ ಒಂದರಲ್ಲಿ ನಡೆದ ಘಟನೆ ಇದಾಗಿದ್ದು, ಯುವತಿಯೊಬ್ಬಳು ತುಂಡುಡುಗೆ ತೊಟ್ಟು ರೈಲಿನೊಳಗೆ ಎಂಟ್ರಿ ಕೊಟ್ಟ ಯುವತಿಯೊಬ್ಬಳು ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ್ದಾಳೆ. ಈಕೆಯ ಅಶ್ಲೀಲ ವರ್ತನೆಯನ್ನು ಸಹ ಪ್ರಯಾಣಿಕರಿಗೆ ಮುಜುಗರವನ್ನು ಉಂಟು ಮಾಡಿದ್ದು, ಅದರಲ್ಲೂ ಆಕೆಯ ಪಕ್ಕದಲ್ಲಿದ್ದ ವಯಸ್ಸಾದ ವ್ಯಕ್ತಿಯೊಬ್ಬರು ಆಕೆಯ ಅವತಾರವನ್ನು ಕಂಡು ಅಲ್ಲಿಂದ ಎದ್ದು ಹೋಗಿದ್ದಾರೆ.
Thank You Indian Railways for having pole dancing in Train for entertainment of passenger 🙏
Even Americans cannot afford this facility pic.twitter.com/9hNtT7BIEq
— Woke Eminent (@WokePandemic) January 8, 2025
ಈ ಕುರಿತ ವಿಡಿಯೋವನ್ನು WokePandemic ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪ್ರಯಾಣಿಕರ ಮನರಂಜನೆಗಾಗಿ ರೈಲಿನಲ್ಲಿ ಪೋಲ್ ಡ್ಯಾನ್ಸ್ ಮಾಡಿಸಿದ್ದಕ್ಕಾಗಿ ಭಾರತೀಯ ರೈಲ್ವೆ ಇಲಾಖೆಗೆ ಧನ್ಯವಾದಗಳು; ಅಮೇರಿಕನ್ನರು ಕೂಡಾ ಇಂತಹ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮುಂಬೈ ಲೋಕಲ್ ಟ್ರೈನ್‌ನಲ್ಲಿ ತುಂಡುಡುಗೆ ತೊಟ್ಟು ಯುವತಿಯೊಬ್ಬಳು ಬೋಲ್ಡ್ ಪೋಸ್ ಕೊಟ್ಟುಕೊಂಡು ಡ್ಯಾನ್ಸ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಮತ್ತಷ್ಟು ಓದಿ:ಮನುಷ್ಯರನ್ನು ನೀರಿಗಿಳಿಯುವಂತೆ ಮಾಡಲು ಸಾವಿನ ನಾಟಕವಾಡುವ ಖತರ್ನಾಕ್ ಮೊಸಳೆಗಳು; ವಿಡಿಯೋ ವೈರಲ್
ಜನವರಿ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅದೇ ಪುರುಷರು ಈ ರೀತಿ ವರ್ತಿಸಿದ್ದರೆ ದೊಡ್ಡ ರಂಪಾಟವನ್ನೇ ಮಾಡ್ತಿದ್ರುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ