AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬಕೆಟ್‌ ಹಿಡಿಯೋದಂದ್ರೆ ಏನ್‌ ಗೊತ್ತಾ? ವಿವರಣೆ ನೀಡಿದ ಧರ್ಮೇಂದ್ರ ಕುಮಾರ್‌ ಅರೇನಹಳ್ಳಿ

ಈ ಬಕೆಟ್‌ ಹಿಡಿಯೋದಕ್ಕೆ ಸಂಬಂಧಪಟ್ಟ ಟ್ರೋಲ್ಸ್‌, ಮೀಮ್ಸ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇನ್ನೂ ಈ ಬಕೆಟ್‌ ಸಂಸ್ಕೃತಿಯನ್ನು ಕಾಲೇಜು ಮತ್ತು ಕೆಲಸದ ಸ್ಥಳಗಳಲ್ಲೂ ನೀವು ನೋಡಿರುತ್ತೀರಿ ಅಲ್ವಾ. ಅಷ್ಟಕ್ಕೂ ಈ ಪದ ಏಕೆ ಬಂತು, ನಿಖರವಾಗಿ ಈ ಬಕೆಟ್‌ ಹಿಡಿಯೋದು ಅಂದ್ರೇನು? ಈ ಬಗ್ಗೆ ಇತಿಹಾಸಕಾರ ಧರ್ಮೇಂದ್ರ ಕುಮಾರ್‌ ಅರೇನಹಳ್ಳಿ ಸೋಷಿಯಲ್‌ ಮೀಡಿಯಾದಲ್ಲಿ ಒಂದೊಳ್ಳೆ ಮಾಹಿತಿಯನ್ನು ನೀಡಿದ್ದಾರೆ.

Viral: ಬಕೆಟ್‌ ಹಿಡಿಯೋದಂದ್ರೆ ಏನ್‌ ಗೊತ್ತಾ? ವಿವರಣೆ ನೀಡಿದ ಧರ್ಮೇಂದ್ರ ಕುಮಾರ್‌ ಅರೇನಹಳ್ಳಿ
Do You Know The Meaning Of The Word Bucket
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on:Jan 10, 2025 | 12:14 PM

Share

ಇವ್ರು ಆಫೀಸಿನಲ್ಲಿ ಮ್ಯಾನೇಜರ್‌ಗೆ ಬಕೆಟ್‌ ಹಿಡಿತಾರೇ, ಇವ್ನ್ಯಾರೋ ದೊಡ್ಡ ಬಕೆಟ್‌ ನನ್‌ ಮಗ, ಇವನಂತೂ ಸಿಕ್ಕಾಪಟ್ಟೆ ಬಕೆಟ್‌ ಹಿಡಿತಾನಪ್ಪಾ ಎಂಬ ಮಾತನ್ನು ಹೇಳುವುದನ್ನು ಹಾಗೂ ನಿನ್‌ ಕೆಲಸ ಆಗ್ಬೇಕಂದ್ರೆ ಬಕೆಟ್‌ ಹಿಡಿಯಪ್ಪಾ ಅನ್ನೋದನ್ನು ನೀವು ಕೇಳಿರುತ್ತೀರಿ ಅಲ್ವಾ. ಹಾಗೇನೇ ಈ ಬಕೆಟ್‌ ಸಂಸ್ಕೃತಿಯನ್ನು ಕಾಲೇಜು, ಕೆಲಸದ ಸ್ಥಳಗಳಲ್ಲಿ ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಸಾಮಾನ್ಯವಾಗಿ ತನ್ನ ಬೇಳೆ ಬೇಯಿಸಲು ಇತರರನ್ನು ನೈಸ್‌ ಮಾಡುವುದೇ ಬಕೆಟ್‌ ಹಿಡಿಯೋದು ಅಂತ ಹೇಳ್ತಾರೆ. ಆದ್ರೆ ನಿಖರವಾಗಿ ಈ ಬಕೆಟ್‌ ಹಿಡಿಯೋದು ಅಂದ್ರೇನು? ಈ ಪದದ ಅರ್ಥವೇನು ಗೊತ್ತಾ? ಈ ಬಗ್ಗೆ ಇತಿಹಾಸಕಾರ ಧರ್ಮೇಂದ್ರ ಕುಮಾರ್‌ ಅರೇನಹಳ್ಳಿ ಸೋಷಿಯಲ್‌ ಮೀಡಿಯಾದಲ್ಲಿ ಒಂದೊಳ್ಳೆ ಮಾಹಿತಿಯನ್ನು ನೀಡಿದ್ದಾರೆ.

ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಏನು ಶ್ರಮ ಪಡದೆ ಇನ್ನೊಬ್ಬರನ್ನು ನೈಸ್‌ ಮಾಡುವುದೇ ಬಕೆಟ್‌ ಹಿಡಿಯೋದು ಅಂತಾ. ಆದ್ರೆ ಇದಕ್ಕೆ ʼಬಕೆಟ್‌ ಹಿಡಿಯೋದುʼ ಅಂತಾನೇ ಯಾಕ್‌ ಅಂತಾರೇ, ಈ ಪದ ಹೇಗೆ ಬಂತು ಎಂಬುದನ್ನು ಇತಿಹಾಸಕಾರ ಧರ್ಮೇಂದ್ರ ಕುಮಾರ್‌ ಅರೇನಹಳ್ಳಿ ವಿವರಣೆಯನ್ನು ನೀಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

“ಬ್ರಿಟೀಷರ ಕಾಲದಲ್ಲಿ ಅವರುಗಳು ಮೀಟಿಂಗ್ಸ್‌ ಮಾಡುತ್ತಾ ಅಲ್ಲಿಲ್ಲಿ ಓಡುತ್ತಾ ಬರುತ್ತಿದ್ದರು. ಆ ಕಾಲದಲ್ಲಿ ಬೇರೆ ಶೌಚಾಲಯದ ಸೌಲಭ್ಯ ಕೂಡಾ ಇರ್ಲಿಲ್ಲ. ಆಗ ಅವರು ಮೂತ್ರ ವಿಸರ್ಜನೆ ಮಾಡ್ಬೇಕಂದ್ರೆ ತಮ್ಮ ಸಹಾಯಕ ಕೈಯಲ್ಲಿ ಹಿಡಿದಿರುವ ಬಕೆಟ್‌ಗೆ ಮೂತ್ರ ವಿಸರ್ಜನೆ ಮಾಡ್ತಿದ್ರು. ನಂತರ ಆ ಸಹಾಯಕನೇ ಅದನ್ನು ಚೆಲ್ಲಿ ಬರುತ್ತಿದ್ದನು. ಆ ಸಹಾಯಕ ಯಾವಾಗ್ಲೂ ಬಕೆಟ್‌ ಹಿಡಿದುಕೊಂಡೇ ಬ್ರಿಟೀಷರ ಹಿಂದೆ ಓಡಾಡ್ತಿದ್ದ. ಅವನಿಗೆ ವಿಶೇಷವಾದ ಸೌಲಭ್ಯಗಳು ಕೂಡಾ ಇರ್ತಿದ್ದವು. ಹಾಗಾಗಿ ಕೆಲಸ ಆಗ್ಬೇಕು ಅಂದ್ರೆ ಹೀಗೆಲ್ಲಾ ಬಕೆಟ್‌ ಹಿಡಿಯೋದಕ್ಕೂ ತಯಾರಿರೋನು ಅಂತ ಅರ್ಥ, ಅದಕ್ಕಾಗಿಯೇ ಈಗೆಲ್ಲಾ ಈ ಪದನಾ ಉಪಯೋಗಿಸ್ತಿದ್ದೇವೆ” ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ:ಮನುಷ್ಯರನ್ನು ನೀರಿಗಿಳಿಯುವಂತೆ ಮಾಡಲು ಸಾವಿನ ನಾಟಕವಾಡುವ ಖತರ್ನಾಕ್‌ ಮೊಸಳೆಗಳು; ವಿಡಿಯೋ ವೈರಲ್‌

dharmendra5294 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಬಕೆಟ್‌ ವಿಷಯ ಇವತ್ತು ಅರ್ಥವಾಯಿತು ಗುರುಗಳೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದರ ಹಿಂದೆ ಇಷ್ಟೊಂದು ಆಳವಾದ ಅರ್ಥವಿದೆ ಎಂಬುದುವು ಗೊತ್ತಿರಲಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಮ್‌ ಕಂಪೆನಿಯಲ್ಲಿ ಮ್ಯಾನೇಜರ್‌ಗೆ ತುಂಬಾ ಜನ ಬಕೆಟ್‌ ಹಿಡಿತಾರೆʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Fri, 10 January 25

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್