ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ವಾಕಿಂಗ್ ಸ್ಟಿಕ್​​ನೊಂದಿಗೆ ಹೋರಾಡಿದ ಮಹಿಳೆ; ಭಯಾನಕ ದೃಶ್ಯವಿದು

| Updated By: shruti hegde

Updated on: Sep 30, 2021 | 1:02 PM

Viral Video: ಚಿರತೆಯಿಂದ ಪ್ರಾಣ ಉಳಿಸಿಕೊಳ್ಳಲು ಮಹಿಳೆ ವಾಕಿಂಗ್ ಸ್ಟಿಕ್ ಉಪಯೋಗಿಸಿ ಹೋರಾಡಿದ್ದಾರೆ. ಚಿರತೆಯನ್ನು ಕೋಲಿನಿಂದ ತಳ್ಳಿ ನಂತರ ಆ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ವಾಕಿಂಗ್ ಸ್ಟಿಕ್​​ನೊಂದಿಗೆ ಹೋರಾಡಿದ ಮಹಿಳೆ; ಭಯಾನಕ ದೃಶ್ಯವಿದು
ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ವಾಕಿಂಗ್ ಸ್ಟಿಕ್​ನೊಂದಿಗೆ ಹೋರಾಡಿದ ಮಹಿಳೆ
Follow us on

ಮುಂಬೈ: ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ತನ್ನ ವಾಕಿಂಗ್ ಸ್ಟಿಕ್​ನೊಂದಿಗೆ ಹೋರಾಡಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಭಯಾನಕ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 55 ವರ್ಷದ ಮಹಿಳೆ ಧೃತಿಗೆಡದೇ ಚಿರತೆಯೊಂದಿಗೆ ಹೋರಾಡಿದ್ದಾರೆ. ಕಷ್ಟಪಟ್ಟು ಚಿರತೆಯ ದಾಳಿಯಿಂದ ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಮುಂಬೈನ ಆರೆ ಕಾಲೊನಿಯಲ್ಲಿ ಘಟನೆ ನಡೆದಿದೆ. ಕಳೆದ ಬುಧವಾರ ಸಂಜೆಯ ವೇಳೆಯಲ್ಲಿ ಘಟನೆ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಮಹಿಳೆಯನ್ನು 55 ವರ್ಷದ ನಿರ್ಮಲಾ ದೇವಿ ಸಿಂಗ್ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಚಿರತೆ ದಾಳಿ ನಡೆಸುತ್ತಿರುವ ಮೂರನೇ ಘಟನೆಯಿದು.

ವಿಡಿಯೋದಲ್ಲಿ ಗಮನಿಸುವಂತೆ ಸಂಜೆಯ ವೇಳೆಯಲ್ಲಿ ಕಟ್ಟೆಯ ಮೇಲೆ ಮಧ್ಯವಯಸ್ಸಿನ ಮಹಿಳೆಯೋರ್ವರು ಕುಳಿತಿದ್ದರು. ಆ ವೇಳೆ ಚಿರತೆ ಅವರ ಮೆಲೆ ದಾಳಿ ನಡೆಸಿದೆ. ದೂರದಿಂದ ಯಾವುದೋ ಪ್ರಾಣಿ ನಿಂತಂತೆ ಕಂಡಿದ್ದರಿಂದ ಮಹಿಳೆ ತನ್ನ ವಾಕಿಂಗ್ ಸ್ಟಿಕ್ ಹಿಡಿದು ಮನೆಗೆ ತೆರಳಲು ಮುಂದಾಗಿದ್ದಾರೆ. ಆ ವೇಳೆಯಲ್ಲಿ ಮಹಿಳೆಯ ಮೈಮೇಲೆ ಚಿರತೆ ದಾಳಿ ನಡೆಸಿದೆ.

ಚಿರತೆಯಿಂದ ಪ್ರಾಣ ಉಳಿಸಿಕೊಳ್ಳಲು ಮಹಿಳೆ ವಾಕಿಂಗ್ ಸ್ಟಿಕ್ ಉಪಯೋಗಿಸಿ ಹೋರಾಡಿದ್ದಾರೆ. ಚಿರತೆಯನ್ನು ಕೋಲಿನಿಂದ ತಳ್ಳಿ ನಂತರ ಆ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ಮಹಿಳೆ ಕಿರುಚಾಡುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಮನೆಯ ಹೊರಗೆ ಆಟವಾಡುತ್ತಿದ್ದ 4 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಸುದ್ದಿ ಬೆಳಕಿಗೆ ಬಂದಿತ್ತು. ಅದೃಷ್ಟವಶಾತ್ ತಕ್ಷಣ ಸ್ಥಳೀಯರು ಧಾವಿಸಿ ಮಗುವನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದರು. ಇದೀಗ ಇಂತಹುದೇ ಮತ್ತೊಂದು ಘಟನೆ ನಡೆದಿರುವ ವಿಷಯ ತಿಳಿದು ಬಂದಿದೆ.

ಇದನ್ನೂ ಓದಿ:

Viral Video: ಆರ್ಡರ್ ಫುಡ್ ಹೊತ್ತೊಯ್ಯುತ್ತಿದ್ದ ಡ್ರೋನ್ ಮತ್ತು ಕಾಗೆ ನಡುವೆ ಜಗಳ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

Viral Video: ಸ್ಟೈಲ್ ಆಗಿ ಡಾನ್ಸ್ ಮಾಡೋದಕ್ಕೆ ಹೋಗಿ ವೇದಿಕೆ ಮೇಲೆ ಪಲ್ಟಿಯಾಗಿ ಬಿದ್ದ ಯುವಕನ ವಿಡಿಯೋ ವೈರಲ್

Published On - 11:55 am, Thu, 30 September 21