ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಕಾಣುವ ಹಿಮಾಲಯ ಪರ್ವತ ಶ್ರೇಣಿಯನ್ನು ನೀವೂ ಕಣ್ತುಂಬಿಸಿಕೊಳ್ಳಿ
ಚಿತ್ರದಲ್ಲಿ ಹಿಮಾಲಯ ಪರ್ವತ ಶ್ರೇಣಿಯನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದು. ಸೂರ್ಯರಶ್ಮಿ ಪರ್ವತ ಶ್ರೇಣಿಯ ಮೇಲೆ ಎಳೆ ಎಳೆಯಾಗಿ ಬೀಳುತ್ತಿದ್ದು, ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಈ ದೃಶ್ಯವನ್ನು ನೋಡುವ ಖುಷಿಯೇ ಬೇರೆ ಎಂದು ಅವರು ತಿಳಿಸಿದ್ದಾರೆ.
ನಾಸಾ ಸಂಸ್ಥೆಯ ಗಗನಯಾತ್ರಿ ಮಾರ್ಕ್ ವಂಡೇ ಹೀ ಜೂನ್ 2ರಂದು ಸೆರೆಹಿಡಿಯಲಾದ ಹಿಮಾಲಯ ಪರ್ವತ ಶ್ರೇಣಿಯ ಅಮೋಘ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ತಾವು ಈ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾಗಿ ಹೇಳಿಕೊಂಡಿರುವ ಅವರು, ಈ ಚಿತ್ರ ನನ್ನನ್ನು ಮಂತ್ರಮುಗ್ಧನನ್ನಾಗಿಸಿದೆ ಎಂದು ತಿಳಿಸಿದ್ದಾರೆ.
ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಹಿಮಾಲಯ ಪರ್ವತ ಶ್ರೇಣಿಯನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದು. ಸೂರ್ಯರಶ್ಮಿ ಪರ್ವತ ಶ್ರೇಣಿಯ ಮೇಲೆ ಎಳೆ ಎಳೆಯಾಗಿ ಬೀಳುತ್ತಿದ್ದು, ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಈ ದೃಶ್ಯವನ್ನು ನೋಡುವ ಖುಷಿಯೇ ಬೇರೆ ಎಂದು ಅವರು ತಿಳಿಸಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಸೋಲಾರ್ ಫಲಕವನ್ನು ಸಹ ಈ ಚಿತ್ರದಲ್ಲಿ ಕಾಣಬಹುದು.
Somewhere on a clear, bright day in the Himalayas. I can’t get enough views like this. pic.twitter.com/1QNylAIqAF
— Mark T. Vande Hei (@Astro_Sabot) June 2, 2021
Why is the picture so clear and appear so much closer that the live HD ISS feed? I can never can get an answer to that. And the image during the night, of the live feed, show nothing but a black screen. Can you please clarify that for me?
— Gleisiel (@gleistweet) June 2, 2021
— LiSaCha (@lisachaaa) June 2, 2021
For indian’s, its a Lord Shiva Home.
— Naveen (@Naveen23341723) June 4, 2021
ಕೆಲವರಿಗೆ ಈ ಹಿಮಾಲಯ ಪರ್ವತ ಶ್ರೇಣಿಯ ಚಿತ್ರ ನೋಡಿ ಶಿವನ ನೆನಪೂ ಬಂದಿದೆ. ಶಿವನ ವಾಸಸ್ಥಾನ ಹಿಮಾಲಯ..ಓಂ ನಮಃ ಶಿವಾಹ ಎಂದೂ ಕೆಲವು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರಿಗೆ ಐಸ್ಕ್ರೀಂನ ನೆನಪು ಬಂದಿದ್ದು, ತಮಗೆ ಈಗಲೇ ಐಸ್ಕ್ರೀಂ ತಿನ್ನಬೇಕು ಅನಿಸುತ್ತಿದೆ ಎಂದು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ
(Nasa astronaut shares Himalayan mountain pictures from International Space Station)