Viral Video: ಭಾರತೀಯ ಉಡುಗೆ ತೊಟ್ಟು “ಹೈ ಮೇರಾ ದಿಲ್” ಗೆ ಲಿಪ್ ಸಿಂಕ್ ಮಾಡಿದ ನೀಮಾ, ಕಿಲಿ ಪೌಲ್

ಕಿಲಿ ಪೌಲ್ ಮತ್ತು ನೀಮಾ ಪೌಲ್ ಭಾರತೀಯ ಉಡುಗೆಯಲ್ಲಿ ಕಾಣಿಸಿಕೊಂಡಿರುವ ವೈರಲ್ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ.

Viral Video: ಭಾರತೀಯ ಉಡುಗೆ ತೊಟ್ಟು ಹೈ ಮೇರಾ ದಿಲ್ ಗೆ ಲಿಪ್ ಸಿಂಕ್ ಮಾಡಿದ ನೀಮಾ, ಕಿಲಿ ಪೌಲ್
ವೈರಲ್​​ ವೀಡಿಯೊ
Edited By:

Updated on: May 20, 2023 | 1:42 PM

ಈ ಹಿಂದೆ ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ಮಾಡಿರುವ ವಿಡಿಯೋಗಳನ್ನು ನೀವು ನೋಡಿರಬಹುದು. ಈಗ ಅದೇ ರೀತಿಯಲ್ಲಿ ಮಾಡಿದ ವಿಡಿಯೋ ಒಂದು ಹತ್ತು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ನೀವು ಆಶ್ಚರ್ಯ ಪಡಬಹುದು? ವೀಕ್ಷಕರನ್ನು ನಿಜವಾಗಿಯೂ ಆಕರ್ಷಿಸಿದ್ದು ಯಾವುದು? ಎಂದು. ಅದಕ್ಕೆ ಉತ್ತರ, ಈ ಭಾರಿ ಅವರ ನೃತ್ಯದ ಜೊತೆಗೆ ಭಾರತೀಯ ಉಡುಪು ಧರಿಸಿರುವುದು ಇನ್ನಷ್ಟು ಮೆರುಗು ನೀಡಿ ಜನರ ಮನ ಗೆದ್ದಿದೆ.

ಕಿಲಿ ಪೌಲ್ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡು “ನೀಮಾ ಎಂಟ್ರಿ. ಕ್ಯಾ ಬಾತ್ ಹೈ” ಎಂದು ಮುದ್ದಾದ ಶೀರ್ಷಿಕೆಯನ್ನು ನೀಡಿದ್ದಾರೆ. ಕುರ್ತಾ ಮತ್ತು ಪೈಜಾಮಾ ಧರಿಸಿದ ಕಿಲಿ ಪೌಲ್, ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಹೈ ಮೇರಾ ದಿಲ್ ಅನ್ನು ಲಿಪ್ ಸಿಂಕ್ ಮಾಡುತ್ತಿದ್ದು ವೀಡಿಯೊ ಮುಂದುವರಿಯುತ್ತಿದ್ದಂತೆ, ಅವನ ಸಹೋದರಿ ನೀಮಾ ಅವನೊಂದಿಗೆ ಸೇರಿಕೊಂಡು ಆ ಹಾಡಿಗೆ ಜೊತೆಯಾಗುತ್ತಾಳೆ. ಅವಳು ಧರಿಸಿದ ಲಿಲಾಕ್ ಲೆಹೆಂಗಾ ಚೋಲಿ ಅವಳ ನೃತ್ಯಕ್ಕೆ ಮೆರಗು ನೀಡಿದೆ ಎಂಬುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ:Viral News: ಪೊಲೀಸ್​​​ ಜೀಪ್​​​ ಬಳಸಿ ರೀಲ್ಸ್​​​​ ಮಾಡಿದ ಯುವಕರು; ವಿಡಿಯೋ ವೈರಲ್​​

ಈ ವಿಡಿಯೋವನ್ನು ಐದು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಇಲ್ಲಿಯವರೆಗೆ ಹತ್ತು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಈ ವಿಡಿಯೋ ಹಲವಾರು ಕಾಮೆಂಟ್ ಗಳನ್ನು ಸಹ ಪಡೆದಿದ್ದು, ಭಾರತಿಯರ ಪ್ರೀತಿ” ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬರು “ಮನಸ್ಸಿಗೆ ಮುದ ನೀಡುತ್ತದೆ.” ಎಂದು ಬರೆದು ಕೊಂಡಿದ್ದಾರೆ, ಮತ್ತೊಬ್ಬರು “@neemapaul155 ಶೋ ಸಂಪೂರ್ಣವಾಗಿ ಅದ್ಭುತವಾಗಿದೆ!” ಎಂದಿದ್ದಾರೆ. “ನೀವಿಬ್ಬರೂ ಅದ್ಭುತವಾಗಿದ್ದೀರಿ. ಜೊತೆಗೆ ಸುಂದರವಾಗಿ ಕಾಣುತ್ತಿದ್ದೀರಿ” ಎಂದು ಹಲವರು ತಮ್ಮ ಅನಿಸಿಕೆ ಹಂಚಿ ಕೊಂಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ