ವಿದ್ಯುತ್​ ಸಂಪರ್ಕವೇ ಇಲ್ಲದ ಮನೆಗೆ 1.80 ಲಕ್ಷ ರೂ. ಕರೆಂಟ್ ಬಿಲ್

|

Updated on: Sep 11, 2024 | 11:48 AM

ವಿದ್ಯುತ್ ಸಂಪರ್ಕವೇ ಇಲ್ಲದ ಮನೆಗೆ ಬರೋಬ್ಬರಿ 1.80 ಲಕ್ಷ ಕರೆಂಟ್​ ಬಿಲ್​ ಬಂದಿದ್ದು, ಅಚ್ಚರಿ ಮೂಡಿಸಿದೆ. ಮನೆ ಮಾಲೀಕ ದಿವ್ಯಾಂಗರಾಗಿದ್ದು, ಈಗ ದೂರು ನೀಡಲು ಕಚೇರಿಯಿಂದ ಕಚೇರಿಗೆ ಅಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್​ ಸಂಪರ್ಕವೇ ಇಲ್ಲದ ಮನೆಗೆ 1.80 ಲಕ್ಷ ರೂ. ಕರೆಂಟ್ ಬಿಲ್
ಎಳಕು
Image Credit source: Paytm
Follow us on

ವಿದ್ಯುತ್ ಸಂಪರ್ಕವೇ ಇಲ್ಲದ ಮನೆಗೆ ಬರೋಬ್ಬರಿ 1.80 ಲಕ್ಷ ಕರೆಂಟ್​ ಬಿಲ್​ ಬಂದಿದ್ದು, ಅಚ್ಚರಿ ಮೂಡಿಸಿದೆ.
ಮನೆ ಮಾಲೀಕ ದಿವ್ಯಾಂಗರಾಗಿದ್ದು, ಈಗ ದೂರು ನೀಡಲು ಕಚೇರಿಯಿಂದ ಕಚೇರಿಗೆ ಅಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಪ್ರದೇಶದ  ಬಸ್ತಿಯಲ್ಲಿರುವ ರಾಂಫರ್ ಗ್ರಾಮದಲ್ಲಿರುವ ಸಿಸಾಯಿ ಬಾಬು ಎಂಬುವವರಿಗೆ 1.80 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ. ಬಿಲ್​ ನೋಡಿ ಅವರು ಬೆಚ್ಚಿಬಿದ್ದಿದ್ದಾರೆ. ಇಲ್ಲಿಯವರೆಗೆ ಮನೆಗೆ ವಿದ್ಯುತ್ ಸಂಪರ್ಕವಿಲ್ಲ, ಮನೆಯಲ್ಲಿ ಒಂದು ಬಲ್ಬ್​ ಕೂಡ ಇಲ್ಲ ಆದರೂ ನನ್ನ ಹೆಸರಿಗೆ ಹೇಗೆ ವಿದ್ಯುತ್ ಬಿಲ್ ಬಂದಿದೆ ಎಂದು ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ಇಲಾಖೆಯು ಹಸ್ನರ್ಜಾ ಎಂಬ ವ್ಯಕ್ತಿಗೆ 82 ಸಾವಿರ ರೂ. ಬಿಲ್ ಅನ್ನು ನೀಡಿದ್ದು, ನಂತರ ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ. ಮೂರು ತಿಂಗಳ ಹಿಂದೆ ಗ್ರಾಹಕರು ಮೀಟರ್ ರೀಡರ್ ಜೊತೆ ವಾಗ್ವಾದಕ್ಕಿಳಿದಿದ್ದರು, ಆಗ 799 ರೂ.ಬಾಕಿ ಇತ್ತು, ಏಪ್ರಿಲ್ ತಿಂಗಳಲ್ಲಿ ಬಿಲ್ ಜಮೆಯಾಗಿದೆ.

ಮತ್ತಷ್ಟು ಓದಿ: Shocking News: ತಿಂಗಳಿಗೆ 52 ಲಕ್ಷ ರೂ. ಕರೆಂಟ್ ಬಿಲ್; ಶಾಕ್ ಆದ ಮಾಲೀಕ

ನಂತರ ವಿದ್ಯುತ್ ಬಿಲ್ 00 ಆಯಿತು. ಮೀಟರ್ ರೀಡರ್ ಜತೆ ವಾಗ್ವಾದಕ್ಕಿಳಿದ ಬಳಿಕ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಗ್ರಾಹಕರ ವಿದ್ಯುತ್ ಬಿಲ್ 82 ಸಾವಿರ ರೂ.ಗೆ ಏರಿಕೆಯಾಗಿದೆ. ಸಂತ್ರಸ್ತೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಮುಖ್ಯ ಎಂಜಿನಿಯರ್ ಹೇಳಿದ್ದೇನು?
ಮೊದಲ ಪ್ರಕರಣದಲ್ಲಿ ಸಿಸಾಯಿ ಅವರ ಮನೆಗೆ 1994ರಲ್ಲೇ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ದಾಖಲೆಯಲ್ಲಿದೆ. 2016ರಲ್ಲಿ 75 ಸಾವಿರ ಬಿಲ್​ ಬಾಕಿ ಇದ್ದು, 1.80 ಲಕ್ಷಕ್ಕೆ ಅದು ಏರಿಕೆಯಾಗಿದೆ ಎಂದು ಹೇಳಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ