Viral: ಕನ್ನಡದಲ್ಲಿಯೇ ಪ್ರಿಸ್ಕ್ರಿಪ್ಷನ್ ಬರೆಯಲು ಆರಂಭಿಸಿದ ವೈದ್ಯರು; ಇಲ್ಲಿದೆ ವೈರಲ್ ಫೋಟೋಸ್
ವೈದ್ಯರು ಬರೆಯುವ ಪ್ರಿಸ್ಕ್ರಿಪ್ಷನ್ ಯಾರಿಗೆ ತಾನೇ ಅರ್ಥವಾಗುತ್ತೆ ಹೇಳಿ, ಇಂಗ್ಲೀಷಿನಲ್ಲಿ ಗೀಚುವ ಈ ಅಕ್ಷರಗಳು ಮೆಡಿಕಲ್ ಶಾಪ್ ಅವರಿಗೆ ಬಿಟ್ಟು ಬೇರೆ ಯಾರಿಗೂ ಅರ್ಥವಾಗದು. ಸಾಮಾನ್ಯವಾಗಿ ಎಲ್ಲಾ ಡಾಕ್ಟರ್‌ಗಳು ಕೂಡಾ ಇಂಗ್ಲೀಷಿನಲ್ಲಿಯೇ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ ಈ ಮಧ್ಯೆ ಇಲ್ಲೊಂದಷ್ಟು ಕನ್ನಡದ ವೈದ್ಯರು ಕನ್ನಡದ ಮೇಲಿನ ಪ್ರೀತಿಗಾಗಿ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭಿಸಿದ್ದಾರೆ. ಈ ಕುರಿತ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವೈದ್ಯರ ಕನ್ನಡ ಪ್ರೇಮ ನೆಟ್ಟಿಗರ ಮನ ಗೆದ್ದಿದೆ.
ಭಾಷೆ ಉಳಿಯಲು ಅಥವಾ ಅಳಿಯಲು ನಾವೇ ಕಾರಣರಾಗುತ್ತೇವೆ. ಹೌದು ಒಂದು ಭಾಷೆಯ ಮೇಲಿನ ಅಭಿಮಾನ, ಗೌರವ, ಭಾಷೆಯ ಬಳಕೆ ಆ ಭಾಷೆಯ ಉಳಿಯುವಿಕೆಗೆ ಕಾರಣವಾಗುತ್ತದೆ. ಹಲವರು ತಮ್ಮ ಭಾಷೆಯ ಮೇಲಿನ ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಲ್ಲೊಂದು ವೈದ್ಯರು ಇದೀಗ ತಮ್ಮ ಮಾತೃಭಾಷೆಯಾದ ಕನ್ನಡದ ಮೇಲಿನ ಪ್ರೀತಿಯಿಂದ ನಮ್ಮ ಕನ್ನಡದಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭಿಸಿದ್ದಾರೆ. ಈ ಮೂಲಕ ಕನ್ನಡಾಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕುರಿತ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವೈದ್ಯರ ಕನ್ನಡ ಪ್ರೇಮ ನೆಟ್ಟಿಗರ ಮನ ಗೆದ್ದಿದೆ.
ಚಿಕ್ಕನಾಯಕನಹಳ್ಳಿಯ ಮಹಿಮಾ ದಂತಚಿಕಿತ್ಸಾಲಯದ ವೈದ್ಯರಾದ ಡಾ. ಸಿ.ಜಿ ಮಲ್ಲಿಕಾರ್ಜುನ್ ಮತ್ತು ದೇವರಚಿಕ್ಕನಹಳ್ಳಿಯ ಕೆ.ವಿ ಡೆಂಟಲ್ ಕ್ಲಿನಿಕ್‌ನ ಡಾ. ಹರಿಪ್ರಸಾದ್ ಸಿ.ಎಸ್ ಕನ್ನಡದಲ್ಲಿಯೇ ರೋಗಿಗಳಿಗೆ ಔಷಧ ಚೀಟಿಯನ್ನು ಕೊಡುತ್ತಿದ್ದು, ಈ ಕುರಿತ ಒಂದಷ್ಟು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ಫೋಟೋ ಇಲ್ಲಿದೆ ನೋಡಿ:
In Karnataka, Doctors started writing their prescriptions in Kannada. Doctors have responded to the call by people & institutions like @kdabengaluru, to fulfill this basic need to write in people’s language.
Have a look. 👇👇 pic.twitter.com/Q4x8RteIoz
— ಉಮೇಶ್ ಶಿವರಾಜು |Umesh Shivaraju (@umesh_anush) September 9, 2024
ಈ ಕುರಿತ ಪೋಸ್ಟ್ ಒಂದನ್ನು ಉಮೇಶ್ ಶಿವರಾಜು (umesh_anush) ಎಂಬವರು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಔಷಧ ಚೀಟಿಗಳನ್ನು ಬರೆಯಲು ಆರಂಭಿಸಿದ ವೈದ್ಯರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗಿರುವ ಫೋಟೋದಲ್ಲಿ ವೈದ್ಯರು ರೋಗಿಗಳಿಗೆ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆದು ಕೊಟ್ಟಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಭೂಮಿಯತ್ತ ಧಾವಿಸುತ್ತಿದೆ ಬೃಹತ್ ಕ್ಷುದ್ರಗ್ರಹ, ಎಚ್ಚರಿಕೆ ನೀಡಿದ ಇಸ್ರೋ
ಸೆಪ್ಟೆಂಬರ್ 10 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ʼನಿಜಕ್ಕೂ ಇದು ತುಂಬಾ ಖುಷಿಯ ವಿಚಾರʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼವೈದ್ಯರ ಈ ನಡೆಗೆ ಸಂಪೂರ್ಣವಾಗಿ ನನ್ನ ಬೆಂಬಲ ಇದೆʼ ಎಂದು ಹೇಳಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ