ಸಾಕಷ್ಟು ಪುರಾತನ ಹಾಗೂ ಐತಿಹಾಸಿಕ ವಸ್ತುಗಳು ಹರಾಜಿನಲ್ಲಿ ಕೋಟಿ ಕೋಟಿ ಬೆಲೆಗೆ ಮಾರಾಟವಾಗಿರುವುದನ್ನು ನೋಡಿರುತ್ತೀರಿ. ಆದರೆ ಎಂದಾದರೂ ವಿಶ್ವದ ಅತ್ಯಂತ ದುಬಾರಿ ಮಾನವ ಹಲ್ಲಿನ ಬಗ್ಗೆ ಕೇಳಿದ್ದೀರಾ? ಇದೀಗ ಬರೋಬ್ಬರೀ 30 ಲಕ್ಷ ರೂ. ಬೆಲೆಗೆ ಹಲ್ಲೊಂದು ಮಾರಾಟವಾಗಿದ್ದು, ಸದ್ಯ ಇದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡಿದೆ.
ಈ ಜಗತ್ತಿನ ಶ್ರೇಷ್ಠ ವಿಜ್ಞಾನಿ ಯಾರು ಎಂಬ ಪ್ರಶ್ನೆ ಕೇಳಿದರೆ ಮುಖ್ಯವಾಗಿ ನೆನಪಿಗೆ ಬರುವ ಹೆಸರು ಸರ್ ಐಸಾಕ್ ನ್ಯೂಟನ್. ಇವರ ಆ ಸೇಬಿನ ಕಥೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನ್ಯೂಟನ್ ಅವರು 1726 ರಲ್ಲಿ ನಿಧನರಾದರು. 1816 ರಲ್ಲಿ, ಸರ್ ಐಸಾಕ್ ನ್ಯೂಟನ್ ಅವರ ಹಲ್ಲುಗಳಲ್ಲಿ ಒಂದನ್ನು ಲಂಡನ್‌ನಲ್ಲಿ USD 3,633 ಗೆ ಮಾರಾಟ ಮಾಡಲಾಯಿತು, ಇದು ಇಂದು USD 35,700 (ಅಂದಾಜು 30 ಲಕ್ಷ ರೂ.) ಗೆ ಸಮನಾಗಿರುತ್ತದೆ.
ಇದನ್ನೂ ಓದಿ: ಸರ್ಕಾರದಿಂದ ಸನ್ನಿ ಲಿಯೋನ್ ಹೆಸರಿನ ಖಾತೆಗೆ ಪ್ರತಿ ತಿಂಗಳು 1 ಸಾವಿರ ರೂ. ಜಮಾ!
ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಹಲ್ಲು ಎಂದು ಗಿನ್ನೆಸ್ ವಿಶ್ವ ದಾಖಲೆಗಳಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿದೆ. ಈ ಹಲ್ಲನ್ನು ಉಂಗುರದ ಮೇಲೆ ಮುತ್ತಿನಂತೆ ಇರಿಸಲಾಗಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Tue, 24 December 24