
Whatsapp Outage : ಅದೆಷ್ಟೋ ಜನ ವಾಟ್ಸಪ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಮ್ಮ ಇಂಟರ್ನೆಟ್ ಸರ್ವೀಸ್ ಚೆಕ್ ಮಾಡಿದರೋ ಅಥವಾ ದೂರು ಸಲ್ಲಿಸಿದರೋ, ಮೊಬೈಲ್ ಸೆಟಿಂಗ್ಸ್ ಚೆಕ್ ಮಾಡಿದರೋ, ರೀಬೂಟ್ ಮಾಡಿದರೋ, ಪರಸ್ಪರ ಈ ಬಗ್ಗೆ ಫೋನ್ ಮಾಡಿ ವಿಚಾರಿಸಿಕೊಂಡರೋ ಗೊತ್ತಿಲ್ಲ. ವಾಟ್ಸಪ್ ನಲ್ಲೇ ಬದುಕುತ್ತಿರುವ ಅನೇಕರಿಗೆ ಈ ಸಂದರ್ಭದಲ್ಲಿ ಇಂಟರ್ನೆಟ್ ಇದೆಯೋ ಇಲ್ಲವೋ ಎಂದು ಬೇರೆ ಅಪ್ಲಿಕೇಷನ್ ಅಥವಾ ವೆಬ್ ಮೂಲಕ ಚೆಕ್ ಮಾಡಬೇಕು ಎನ್ನುವುದೂ ಹೊಳೆಯದೇ ಇರದ ಸಾಧ್ಯತೆಯೂ ಉಂಟಾಗಿತ್ತು. ಹಾಗಿದೆ ವಾಟ್ಸಪ್ಪನ ಮಹಿಮೆ!
ಈವತ್ತು ದೊಡ್ಡ ದೊಡ್ಡ ಕಂಪೆನಿಗಳಿಂದ ಹಿಡಿದು ಕೂಲಿ ಕೆಲಸ ಮಾಡುವವರೂ ವಾಟ್ಸ್ಪ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ವ್ಯವಹಾರ ಮಾಡುತ್ತಿದ್ದಾರೆ. ಅದೊಂದು ನಿತ್ಯಜೀವನದ ಸುಲಭ ಸಂವಹನ ವಿಧಾನವೆಂಬಂತೆ ಜನಜನಿತ. ಆದರೆ ಹೀಗೆ ಇದ್ದಕ್ಕಿದ್ದಂತೆ ಮಧ್ಯಾಹ್ನ 12.30ರ ಸುಮಾರಿಗೆ ವಾಟ್ಸಪ್ ತನ್ನ ಕಾರ್ಯ ಸ್ಥಗಿತಗೊಳಿಸಿದಾಗ ಕೆಲವರು ಕಂಗಾಲಾದರೆ ಇನ್ನೂ ಕೆಲವರು ಮೆದುಳಿಗೆ ಕೆಲಸ ನೀಡಿದರು.
ಝ್ಯೂಕರ್ ಬರ್ಗ್ನಿಗೆ ಸಾಕಷ್ಟು ವೇಷಗಳನ್ನು ತೊಡಿಸಿ ನೆಟ್ಟಿಗರು ಸಾಕಷ್ಟು ಮೀಮ್ಗಳನ್ನು ಸೃಷ್ಟಿಸಿದರು. ಅನೇಕ ಚಿತ್ರನಟರ ಫೋಟೋ ಹಾಕಿ ಮೀಮ್ಸ್ ಸೃಷ್ಟಿಸಿದರು. ವಾಟ್ಸಪ್ ಯೂನಿವರ್ಸಿಟಿಗಳ ಕಥೆ ಎಂತೋ ಏನೋ ತಮಾಷೆ ಮಾಡಿಕೊಂಡರು. ಅಂತೂ ವಾಟ್ಸಪ್ನ ಟಿಕ್ ಮಾರ್ಕ್ ಬಂದ ನಂತರ ಸಾಕಷ್ಟು ಜನರು ನಿರಾಳ ಉಸಿರಾಟ ನಡೆಸಿದ್ದಂತೂ ನಿಜ.
life is about opportunities ???#WhatsApp #whatsappdown #meme #girl #fire #rt pic.twitter.com/gFExGKtVx8
ಅಂತೂ ದೀಪಾವಳಿ ಸಮಯದಲ್ಲಿ ವಾಟ್ಸಪ್ ಹೀಗೆಲ್ಲಾ ಇಂಟರ್ನೆಟ್ ತುಂಬಾ ನಗೆಪಟಾಕಿ ಹೊಡೆದಿದೆ. ನಿಮ್ಮ ಮೊಬೈಲ್ನಲ್ಲಿಯೂ ಈಗ ರಾಶಿ ಮೀಮ್ಗಳು ತುಂಬಿ ತುಳುಕುತ್ತಿರಬಹುದು. ಒಟ್ಟಿನಲ್ಲಿ ಯಾವುದೂ ನಿಲ್ಲುವುದಿಲ್ಲ ಜಗತ್ತಿನಲ್ಲಿ ಇಂಟರ್ನೆಟ್ ಇರುವತನಕ! ಒಂದು ಸ್ಥಗಿತಗೊಂಡರೆ ಇನ್ನೊಂದು ವೇಗ ಪಡೆದುಕೊಳ್ಳುತ್ತದೆ ಮತ್ತೊಂದು ಬಾಗಿಲಿನಿಂದ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:19 pm, Tue, 25 October 22