ಭಾರತದ ಮೇಲೆ ದಾಳಿ ಮಾಡಲಿದೆ ಚೀನಾ, ಪಾಕ್: ಅಚ್ಚರಿ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ನಾಸ್ಟ್ರಾಡಾಮಸ್

ಪ್ರಖ್ಯಾತ ಜ್ಯೋತಿಷಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಗಳು ಇತಿಹಾಸದಲ್ಲಿ ನಿಜವಾಗಿವೆ. ಇದೀಗ 2025ರ ಅಂತ್ಯದ ವೇಳೆಗೆ ಭಾರತ ಪ್ರಬಲ ರಾಷ್ಟ್ರವಾಗಲಿದೆ. ಚೀನಾ-ಪಾಕಿಸ್ತಾನದೊಂದಿಗೆ ಯುದ್ಧ, ಗಂಗಾ ನದಿ ತೀರದಲ್ಲಿ ಮೂರನೇ ಮಹಾಯುದ್ಧದ ಮುನ್ಸೂಚನೆ, ಮತ್ತೊಂದು ಭೀಕರ ಸಾಂಕ್ರಾಮಿಕ ರೋಗ, ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸುವ ಬಗ್ಗೆ ಪ್ರಮುಖ ಭವಿಷ್ಯ ನುಡಿದಿದ್ದಾರೆ.

ಭಾರತದ ಮೇಲೆ ದಾಳಿ ಮಾಡಲಿದೆ ಚೀನಾ, ಪಾಕ್: ಅಚ್ಚರಿ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ನಾಸ್ಟ್ರಾಡಾಮಸ್
ನಾಸ್ಟ್ರಾಡಾಮಸ್ ಭವಿಷ್ಯ

Updated on: Nov 25, 2025 | 5:42 PM

ಕೆಲವರು ಹೇಳುವ ಭವಿಷ್ಯ ನಿಜವಾದ ಅದೆಷ್ಟೋ ನಿದರ್ಶನ ಇವೆ. ಅದರಲ್ಲೂ ಬಾಬಾ ವಂಗಾ, ನಾಸ್ಟ್ರಾಡಾಮಸ್ (Nostradamus Predictions 2025) ಸೇರಿದಂತೆ ಹಲವು ತತ್ವಜ್ಞಾನಿಗಳು ನೀಡಿದ ಭವಿಷ್ಯ ನಿಜವಾಗಿದೆ. ಇದೀಗ ಪ್ರಸಿದ್ಧ ಫ್ರೆಂಚ್ ತತ್ವಜ್ಞಾನಿ ಮತ್ತು ಜ್ಯೋತಿಷಿ ನಾಸ್ಟ್ರಾಡಾಮಸ್ ಅವರು ಮಹತ್ವದ ಭವಿಷ್ಯವನ್ನು ಹೇಳಿದ್ದಾರೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ದೇಶಗಳ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. 1555ರಲ್ಲಿ ಹೇಳಿರುವಂತೆ, ಭವಿಷ್ಯದಲ್ಲಿ ಏನಾಗಲಿದೆ ಎಂಬುದರ ಕುರಿತು ಅವರು 945 ಪುಟಗಳ ಭವಿಷ್ಯ ಪ್ರತಿಯಲ್ಲಿ ತಿಳಿಸಿದ್ದಾರೆ. ಈ ಭವಿಷ್ಯವಾಣಿಗಳ ಪ್ರಕಾರ, ಈ ಹಿಂದೆ ಭಾರತ ಸೇರಿದಂತೆ ಇತರ ದೇಶದಲ್ಲಿ ನಡೆಯುವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಪರಮಾಣು ದಾಳಿಗಳು, ಸೆಪ್ಟೆಂಬರ್ 11 ರ ಭಯೋತ್ಪಾದಕ ದಾಳಿಗಳು, ರಾಜಕುಮಾರಿ ಡಯಾನಾ, ಹಿಟ್ಲರ್, ರಾಜೀವ್ ಗಾಂಧಿ ಮತ್ತು ಕೋವಿಡ್ -19 ನಂತಹ ಘಟನೆಗಳು ನಡೆಯಲಿದೆ ಎಂದು ಹೇಳಿದ್ದರು. ಅದೆಲ್ಲವೂ ನಿಜವಾಗಿದೆ. ನಾಸ್ಟ್ರಾಡಾಮಸ್ ಅವರು ನುಡಿದ ಎಲ್ಲ ಭವಿಷ್ಯವು ನಿಜವಾಗಿದೆ. ಇದೀಗ ಮತ್ತೆ ಅವರು ಭವಿಷ್ಯ ನುಡಿದ್ದಾರೆ. ಅದರಲ್ಲೂ ಭಾರತದಲ್ಲಿ ನಡೆಯಲಿರುವ ಘಟನೆಗಳು ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

ಭಾರತದ ಬಗ್ಗೆ ಏನು ಭವಿಷ್ಯ?

ಭಾರತ ಒಂದು ಪ್ರಬಲ ರಾಷ್ಟ್ರವಾಗಲಿದೆ. ಭಾರತದ ರಾಜಕೀಯವು ಪ್ರಪಂಚದ ಮೇಲೆ ಬೀರುವ ಪ್ರಭಾವದಿಂದ ಹಲವು ಬದಲಾವಣೆಗಳು ಆಗಲಿದೆ. ಚೀನಾ ಮತ್ತು ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಬಹುದು ಮತ್ತು ಚೀನಾ ಈ ಯುದ್ಧವನ್ನು ಪ್ರಾರಂಭಿಸುತ್ತದೆ. ಗಂಗಾ ನದಿಯ ಮುಖಭಾಗದಲ್ಲಿ ಒಂದು ದೊಡ್ಡ ಯುದ್ಧ ನಡೆಯುತ್ತದೆ. ಈ ಯುದ್ಧ ಮೂರನೇ ಮಹಾಯುದ್ಧಕ್ಕೆ ಮುನ್ನಡಿ ಬರೆಯಲಿದೆ. ಇದಲ್ಲದೆ, 2025 ರ ಅಂತ್ಯದ ವೇಳೆಗೆ ಮತ್ತೊಂದು ಸಾಂಕ್ರಾಮಿಕ ರೋಗವು ಸಹ ಸಂಭವಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಂತ್ಯಸಂಸ್ಕಾರದ ವೇಳೆ ಶವ ಪೆಟ್ಟಿಗೆಯಿಂದ ಕೇಳಿ ಬಂತು ವಿಚಿತ್ರಬ್ಧ: ಮುಂದೇನಾಯ್ತು?

ಬ್ರಿಟಾನಿಕಾ ಪ್ರಕಾರ, ನಾಸ್ಟ್ರಾಡಾಮಸ್ ಇಂಗ್ಲೆಂಡ್‌ನಲ್ಲಿ ಸಂಘರ್ಷದ ಆರಂಭ ಮತ್ತು ಭೂಮಿಯ ಮೇಲೆ ಕ್ಷುದ್ರಗ್ರಹದ ಪ್ರಭಾವದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದೀರ್ಘ ಯುದ್ಧದ ಅಂತ್ಯದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ದೀರ್ಘ ಯುದ್ಧದಿಂದ ಇಡೀ ಸೈನ್ಯವು ದಣಿದಿರುತ್ತದೆ. ಸೈನಿಕರ ಬಳಿ ಹಣದ ಕೊರತೆ ಉಂಟಾಗುತ್ತದೆ. ಚಿನ್ನ ಮತ್ತು ಬೆಳ್ಳಿಯ ಬದಲಿಗೆ ತಾಮ್ರ ಮತ್ತು ಚರ್ಮದ ನಾಣ್ಯಗಳು ಚಲಾವಣೆಗೆ ಬರುತ್ತವೆ. ಇದರ ಜತೆಗೆ ಒಂದು ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ