AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಹಿಮಕರಡಿಯನ್ನು ಹುಡುಕಿ

ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುವಂತಹ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ಬಿಡಿಸುವುದೆಂದರೆ ಎಲ್ಲರಿಗೂ ಇಷ್ಟನೇ. ಆದರೆ ಕೆಲವರಿಗೆ ಇಂತಹ ಒಗಟುಗಳನ್ನು ಬಿಡಿಸುವುದು ಕಷ್ಟವೆನಿಸುವುದು ಸಹಜ. ಈ ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಹುಡುಕಬೇಕು. ಈ ಸವಾಲನ್ನು ಸ್ವೀಕರಿಸಿ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.

Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಹಿಮಕರಡಿಯನ್ನು ಹುಡುಕಿ
ಆಪ್ಟಿಕಲ್‌ ಇಲ್ಯೂಷನ್‌ Image Credit source: Social Media
ಸಾಯಿನಂದಾ
|

Updated on: Nov 26, 2025 | 10:31 AM

Share

ಟ್ರಿಕ್ಕಿಯಾಗಿರುವ ಒಗಟುಗಳನ್ನು ಬಿಡಿಸುತ್ತಿದ್ದರೆ ನಿಮಿಷಗಳು ಸೆಕೆಂಡುಗಳಂತೆ ಕಾಣುತ್ತದೆ. ಕೆಲವರು ಬುದ್ಧಿ ಖರ್ಚು ಮಾಡಿ ಒಗಟು ಬಿಡಿಸಲು ಮುಂದಾಗುತ್ತಾರೆ. ಈ ಚಿತ್ರವನ್ನು ನೋಡಿದ ಕೂಡಲೇ ನಿಮಗೆ ಉತ್ತರ ಕಂಡುಕೊಳ್ಳಲು ಕಷ್ಟವಾಗಬಹುದು. ಇದೀಗ ಅಂತಹದ್ದೇ ಟ್ರಿಕ್ಕಿಯಾಗಿರುವ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರ ವೈರಲ್ ಆಗಿದ್ದು, ಹಿಮದಿಂದ ಆವೃತ್ತವಾದ ಪ್ರದೇಶದಲ್ಲಿ ಹಿಮಕರಡಿಯೊಂದು ಅಡಗಿ ಕುಳಿತಿದೆ. ಕೇವಲ 20 ಸೆಕೆಂಡುಗಳಲ್ಲಿ ಆ ಕರಡಿಯನ್ನು ಪತ್ತೆ ಹಚ್ಚುವ ಸವಾಲು ಇಲ್ಲಿದೆ. ಈ ಟ್ರಿಕ್ಕಿ ಒಗಟು ಬಿಡಿಸಿ ನಿಮ್ಮ ಬುದ್ದಿವಂತಿಕೆಯನ್ನು ಪರೀಕ್ಷಿಸಿಕೊಳ್ಳಿ.

ಈ ಚಿತ್ರದಲ್ಲಿ ಏನಿದೆ ಎಂದು ನೋಡಿ

Optical Illusion Photo

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಹಿಮದಿಂದ ಆವೃತ್ತವಾದ ಪ್ರದೇಶವನ್ನು ನೀವು ಕಾಣಬಹುದು. ಈ ಹಿಮಭರಿತ ಪ್ರದೇಶದಲ್ಲಿ ಹಿಮ ಕರಡಿಯೊಂದು ಅಡಗಿ ಕುಳಿತಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ, ಆ ಪ್ರಾಣಿ ಎಲ್ಲಿದೆ ಎಂದು 20 ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ಈ ಕಠಿಣ ಸವಾಲನ್ನು ಸ್ವೀಕರಿಸಿ ಒಗಟು ಬಿಡಿಸಿ.

ಇದನ್ನೂ ಓದಿ: ಬೆಟ್ಟದ ಮೇಲೆ ಅವಿತು ಕುಳಿತಿರುವ ಚಿರತೆಯನ್ನು ಕಂಡುಹಿಡಿಯುವಿರಾ

ಹಿಮಕರಡಿಯನ್ನು ಗುರುತಿಸಲು ನಿಮಗೆ ಸಾಧ್ಯವಾಯಿತೇ?

ಇಂತಹ ಕೆಲವು ಒಗಟನ್ನು ಬಿಡಿಸುವಾಗ ಹೆಚ್ಚು ಗಮನ ಹರಿಸುವುದು  ಬಹಳ ಮುಖ್ಯ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಹಿಮಕರಡಿಯನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವಾಗಿಲ್ಲವೇ, ಹಾಗಾದ್ರೆ ನೀವು ಹೆಚ್ಚು ಚಿಂತಿಸಬೇಡಿ. ಈ ಪ್ರದೇಶದಲ್ಲಿ ಹಿಮಕರಡಿ ಎಲ್ಲಿದೆ ಎಂದು ನಾವು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ.

Optical Illusion Answer

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ