ನೂಡಲ್ಸ್, ಬರ್ಗರ್ ಬದಲು ಈ ಚೈನೀಸ್ ಮಹಿಳೆಗೆ ಹಂದಿಯ ಆಹಾರವೇ ಫೇವರಿಟ್!

|

Updated on: Nov 07, 2024 | 8:47 PM

ಚೀನೀಯರು ಏನು ಬೇಕಾದರೂ ತಿನ್ನುತ್ತಾರೆ. ಜನರ ಫೇವರಿಟ್ ಚೈನೀಸ್ ತಿಂಡಿಗಳಾದ ನೂಡಲ್ಸ್, ಬರ್ಗರ್ ಮತ್ತು ಇನ್ನೂ ಅನೇಕ ರುಚಿಕರವಾದ ಭಕ್ಷ್ಯಗಳ ಬದಲು ಚೈನೀಸ್ ಮಹಿಳೆಯೊಬ್ಬರು ಹಂದಿಗಳು ತಿನ್ನುವ ಆಹಾರವನ್ನು ಮಾತ್ರ ತಿನ್ನುತ್ತಾರೆ. ಆಕೆಗೆ ಹಂದಿಯ ಆಹಾರವೇ ಫೇವರೆಟ್ ಅಂತೆ!

ನೂಡಲ್ಸ್, ಬರ್ಗರ್ ಬದಲು ಈ ಚೈನೀಸ್ ಮಹಿಳೆಗೆ ಹಂದಿಯ ಆಹಾರವೇ ಫೇವರಿಟ್!
ಹಂದಿಗಳ ಆಹಾರ
Follow us on

ಬೀಜಿಂಗ್: ಚೀನಾದ ಮಹಿಳೆಯೊಬ್ಬರು ಪ್ರತಿದಿನ ಹಂದಿಯ ಆಹಾರವನ್ನು ಸೇವಿಸುತ್ತಾಳೆ ಎಂಬ ಶಾಕಿಂಗ್ ವಿಚಾರ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಫಿಟ್ ಆಗಿರಲು ಅಥವಾ ನಿಮ್ಮ ರುಚಿ ಮೊಗ್ಗುಗಳಿಗೆ ಚಿಕಿತ್ಸೆ ನೀಡಲು ನೀವು ಹಲವಾರು ಡಯೆಟ್ ಪ್ಲಾನ್ ಮಾಡಿರಬಹುದು. ಆದರೆ, ನೂಡಲ್ಸ್, ಪಿಜ್ಜಾ, ಬರ್ಗರ್ ಮತ್ತು ಇನ್ನೂ ಅನೇಕ ರುಚಿಕರವಾದ ಭಕ್ಷ್ಯಗಳ ಬದಲು ಹಂದಿಗಳು ಏನು ತಿನ್ನುತ್ತವೆಯೋ ಅದೇ ಆಹಾರವನ್ನು ಆಕೆ ತಿನ್ನುತ್ತಾರಂತೆ.

ಡೌಯಿನ್‌ನಲ್ಲಿ “ಕಿಂಗ್ ಕಾಂಗ್ ಲಿಯುಕ್” ಎಂಬ ಇನ್​ಫ್ಲುಯೆನ್ಸರ್ ಇತ್ತೀಚೆಗೆ ಹಣವನ್ನು ಉಳಿಸಲು ಪ್ರತಿದಿನ ಹಂದಿಯ ಆಹಾರವನ್ನು ಸೇವಿಸುತ್ತಾಳೆ ಎಂಬುದು ಬಹಿರಂಗಗೊಂಡಿದೆ. ಚೀನಾದ ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ ಮಹಿಳೆಯೊಬ್ಬರು ತಾನು ಸಾಮಾನ್ಯ ಆಹಾರವನ್ನು ತಿನ್ನುವುದನ್ನೇ ಬಿಟ್ಟಿದ್ದೇನೆ. ಹಂದಿಗಳು ಏನು ತಿನ್ನುತ್ತವೆಯೋ ಅದನ್ನೇ ತಿನ್ನುವುದನ್ನು ರೂಢಿಸಿಕೊಂಡಿದ್ದೇನೆ. ಅವು ಸಾಕಷ್ಟು ಆರೋಗ್ಯಕರ ಮತ್ತು ಪೌಷ್ಟಿಕವಾಗಿದೆ ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಕೋಲಿನಿಂದ ಕೋತಿಗೆ ಮನಬಂದಂತೆ ಥಳಿಸಿದ ಯುವಕ; ಶಾಕಿಂಗ್ ವಿಡಿಯೋ ವೈರಲ್

ಹಂದಿಯ ಆಹಾರ ತಿನ್ನಲು ಶುರು ಮಾಡಿದ ನಂತರ ತನಗೆ ದಿನಕ್ಕೆ ಕೇವಲ 3 ಯುವಾನ್ (ರೂ 35) ಬೇಕಾಗುತ್ತದೆ ಎಂದು ಕಾಂಗ್ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಹಂದಿಯ ಆಹಾರದ ಚೀಲವು ಸುಮಾರು 100 ಯುವಾನ್ (ರೂ. 1,176) ಆಗಿದೆ. ಮಾನವನ ಬಳಕೆಗೆ ಸೂಕ್ತವಲ್ಲದ ಹಂದಿಗಳ ಆಹಾರವು ಸೋಯಾಬೀನ್, ಕಡಲೆಕಾಯಿ, ಎಳ್ಳು, ಕಾರ್ನ್ ಮತ್ತು ವಿಟಮಿನ್‌ಗಳಂತಹ ಪದಾರ್ಥಗಳಿಂದ ತುಂಬಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:38 pm, Thu, 7 November 24