
ಪ್ರಾಣಿಗಳು ಕೆಲವೊಮ್ಮೆ ಎಷ್ಟು ವಿಚಿತ್ರವಾಗಿ ವರ್ತಿಸುತ್ತವೆ ಎಂದರೆ ಅದನ್ನು ನಂಬಲ ಸಾಧ್ಯವಾಗದಷ್ಟು. ಇಂತಹ ಪ್ರಾಣಿಗಳ ಕುರಿತ ಆಶ್ಚರ್ಯಯುತ ವೀಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಶ್ವಾನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಕಪ್ಪು ಬಣ್ಣದ ನಾಯಿಯೊಂದು ನಿರ್ಮಾಣ ಹಂತದಲ್ಲಿನ ಕಟ್ಟಡದ ಐದನೇ ಮಹಡಿಯಿಂದ ಕೆಳಜಿಗಿದು, ತನಗೆ ಏನು ಆಗಿಲ್ಲ ಎಂಬಂತೆ ಎದ್ದು ಸಾಮಾನ್ಯವಾಗಿ ನಡೆದುಕೊಂಡು ಹೋಗುತ್ತದೆ. ಸಾಮಾನ್ಯವಾಗಿ ಎತ್ತರದ ಕಟ್ಟಡದಿಂದ ಜಿಗಿದರೆ ಯಾರಾದರೂ ಬದುಕುವುದುಂಟೆ, ಎತ್ತರದ ಕಟ್ಟಡದಿಂದ ಸ್ಟೈಲಿಶ್ ಆಗಿ ಜಿಗಿಯುವ ಇಂತಹ ದೃಶ್ಯವನ್ನು ಸೂಪರ್ ಮ್ಯಾನ್ ಇತ್ಯಾದಿ ಫ್ಯಾಂಟಸಿ ಸಿನಿಮಾಗಳಲ್ಲಿ ನೋಡಬಹುದು. ಆದರೆ ಈ ಶ್ವಾನ ಇಂತಹ ಸಾಹಸವನ್ನು ಮಾಡಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಈ ವೈರಲ್ ವೀಡಿಯೋವನ್ನು ಕ್ರೇಜಿ ಕ್ಲಿಪ್ಸ್ (@crayclipsonly) ಎಂಬ ಪೇಜ್ ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದು, “ಐದನೇ ಮಹಡಿಯಿಂದ ಜಿಗಿದ ನಾಯಿ ಯಾವುದೇ ಗಾಯಗಳಾಗದೆ ಸಾಮಾನ್ಯವಾಗಿ ನಡೆದುಕೊಂಡು ಹೋಗುತ್ತಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.
ವಿಡಿಯೋ ಇಲ್ಲಿದೆ ನೋಡಿ
23 ಸೆಕೆಂಡುಗಳ ಈ ವಿಡಿಯೋದಲ್ಲಿ ಕಪ್ಪು ಬಣ್ಣದ ನಾಯಿಯೊಂದು ನಿರ್ಮಾಣ ಹಂತದಲ್ಲಿನ ಕಟ್ಟಡದ ಐದನೇ ಮಹಡಿಯಿಂದ ಕೆಳ ಜಿಗಿಯಲು ಪ್ರಯತ್ನಿಸುವುದನ್ನು ಕಾಣಬಹುದು. ಮೊದಲಿಗೆ ಅತ್ತಿಂದ ಇತ್ತ ಕಣ್ಣಾಯಿಸಿ, ಹೇಗೆ ಜಿಗಿಯಬೇಕೆಂದು ಯೋಚಿಸಿ ಐದನೇ ಮಹಡಿಯಿಂದ ಕೆಳಗೆ ಜಿಗಿದ ಶ್ವಾನ, ನಂತರ ತನಗೆ ಏನು ಆಗೇ ಇಲ್ಲವೆಂಬಂತೆ ಎದ್ದು ನಡೆದುಕೊಂಡು ಹೋಗಿದೆ. ಬಹುಶಃ ನಾಯಿಗೆ ಹೇಗೆ ಕೆಳಗಿಳಿಯುವುದು ಎಂದು ತಿಳಿಯದೆ ಮೇಲಿಂದ ಕೆಳಗೆ ಹಾರಲು ಪ್ರಯತ್ನಿಸಿದೆ. ಆದರೂ ವಿಡಿಯೋ ಹಲವರನ್ನು ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ಇದೆಂತಹಾ ವಿಚಿತ್ರ ಬೈಕ್, ಬಜಾಜ್ ಪಲ್ಸರ್ನ ಟೈರ್ ಹೀಗಿದೆ ನೋಡಿ
X ನಲ್ಲಿ ವೈರಲ್ ಆಗಿರುವ ಈ ವೀಡಿಯೋ 13.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಅನೇಕರು ಇದಕ್ಕೆ ಕಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು “ಶ್ವಾನದ ದಿಟ್ಟತನಕ್ಕೆ ಮೆಚ್ಚಲೇಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು “ನಾಯಿಗೆ ಯಾವುದೇ ಗಾಯಗಳಾಗಿಲ್ಲವೆಂದು ಕಂಡರೂ ಖಂಡಿತವಾಗಿಯೂ ಅದರ ಮೂಳೆಗಳಿಗೆ ಪೆಟ್ಟಾಗಿರುತ್ತೆ” ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವೀಡಿಯೋವನ್ನು ನೋಡಿ, ಇದು ನಂಬಲ ಸಾಧ್ಯವಾದ ಘಟನೆ ಎಂದು ಹೇಳಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ