Viral: ನಾನ್ಯಾರಿಗೂ ಕಮ್ಮಿಯಿಲ್ಲ, ಹುಡುಗರೊಂದಿಗೆ ಫುಟ್‌ಬಾಲ್‌ ಆಡಲು ಬಂದ ಕಾಡನೆ

ಆನೆಗಳ ಆಟ ತುಂಟಾಟಗಳಿಗೆ ಸಂಬಂಧಿಸಿ ಮುದ್ದುಮುದ್ದಾದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಕಾಣಸಿಗುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದ್ದು, ಹುಡುಗರೆಲ್ಲ ಗ್ರೌಂಡ್‌ ಅಲ್ಲಿ ಫುಟ್‌ಬಾಲ್‌ ಆಡುವಾಗ ಎಂಟ್ರಿ ಕೊಟ್ಟ ಕಾಡಾನೆಯೊಂದು ತಾನು ಅವರೊಂದಿಗೆ ಸೇರಿ ಫುಟ್‌ಬಾಲ್‌ ಆಡಿದೆ. ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಕಾಡುಗಳ ವಿನಾಶದಿಂದಾಗಿ ಕಾಡುಪ್ರಾಣಿಗಳು ಆಹಾರವನ್ನರಸುತ್ತಾ ನಾಡಿಗೆ ಲಗ್ಗೆ ಇಡುವಂತಹದ್ದು ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ. ಚಿರತೆ, ಕಾಡನೆ ಜನವಸತಿ ಪ್ರದೇಶಗಳಿಗೆ ಬರುವಂತಹ, ಹೀಗೆ ಆಹಾರವನ್ನರಸುತ್ತಾ ಬಂದ ಕಾಡಾನೆಗಳು ಬೆಳೆ ನಾಶ ಮಾಡುವಂತಹ, ಜನರನ್ನು ಅಟ್ಟಾಡಿಸುಕೊಂಡು ಹೋಗುವಂತಹ ಸುದ್ದಿಗಳ ಬಗ್ಗೆ ಕೇಳಿರುತ್ತೇವೆ. ಆದ್ರೆ ಇಲ್ಲೊಂದು ಆಹಾರವನ್ನರಸುತ್ತಾ ನಾಡಿಗೆ ಬಂದಂತಹ ಕಾಡಾನೆಯೊಂದು ಯಾರಿಗೂ ತೊಂದರೆ ಕೊಡದೆ ಒಂದಷ್ಟು ಹುಡುಗರು ಫುಟ್‌ಬಾಲ್‌ ಆಡುವ ದೃಶ್ಯವನ್ನು ಕಂಡು ಅಲ್ಲಿಗೆ ಬಂದು ನಾನು ಕೂಡಾ ಸ್ವಲ್ಪ ಆಡ್ತಾನೆ ಎನ್ನುತ್ತಾ ಫುಟ್‌ಬಾಲ್‌ ಆಡಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ಕ್ಯೂಟ್‌ ದೃಶ್ಯ ಪ್ರಾಣಿಪ್ರಿಯರ ಮನ ಗೆದ್ದಿದೆ.

ಈ ಘಟನೆ ಒಡಿಶಾದ ಕಿಯೋಂಜಾರ್‌ನ ಪಾಟ್ನಾ ಅರಣ್ಯ ವ್ಯಾಪ್ತಿಯ ಧಬಾಪಿಟ್ನಾ ಮೈದಾನದಲ್ಲಿ ನಡೆದಿದ್ದು, ಆಹಾರವನ್ನರಸುತ್ತಾ ಕಾಡು ಪ್ರದೇಶದಿಂದ ಮೈದಾನಕ್ಕೆ ಬಂದಂತಹ ಕಾಡಾನೆಯೊಂದು ಅಲ್ಲಿ ಒಂದಷ್ಟು ಹುಡುಗರು ಫುಟ್‌ಬಾಲ್‌ ಆಡುತ್ತಿರುವ ದೃಶ್ಯವನ್ನು ಕಂಡು ತಾನು ಕಾಡು ಅವರ ಹತ್ತಿರ ಹೋಗಿ ಬಹಳ ಎಂಜಾಯ್‌ ಮಾಡ್ತಾ ಫುಟ್‌ಬಾಲ್‌ ಆಡಿದೆ.

ಈ ಕುರಿತ ವಿಡಿಯೋವನ್ನು manas_muduli ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಒಡಿಶಾದ ಕಿಯೋಂಜಾರ್‌ನಲ್ಲಿ ಹುಡುಗರೊಂದಿದೆ ಫುಟ್‌ಬಾಲ್‌ ಆಡಲು ಸೇರಿಕೊಂಡ ಕಾಡಾನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ವಿಡಿಯೋದಲ್ಲಿ ಕಾಡಾನೆಯೊಂದು ತನ್ನ ಕಾಲಿನಿಂದ ಸ್ಟೈಲ್‌ ಆಗಿ ಫುಟ್‌ಬಾಲ್‌ ಒದೆಯುವಂತಹ ದೃಶ್ಯವನ್ನು ಕಾಣಬಹುದು. ಆಹಾರವನ್ನರಸುತ್ತಾ ಬಂದ ಕಾಡಾನೆಯೊಂದು ಮೈದಾನದಲ್ಲಿ ಮಕ್ಕಳು ಆಟವಾಡುತ್ತಿರುವ ದೃಶ್ಯವನ್ನು ಕಂಡು ಬಹಳ ಖುಷಿಯಿಂದ ಅವರ ಬಳಿ ಬಂದು ತಾನು ಕೂಡಾ ಫುಟ್‌ಬಾಲ್‌ ಆಡಿದೆ.

ಇದನ್ನೂ ಓದಿ: ನನಗೆ ಕನ್ನಡ ಕಲಿಯುವ ಅವಶ್ಯಕತೆಯಿಲ್ಲ; 12 ವರ್ಷ ಬೆಂಗಳೂರಿನಲ್ಲಿದ್ದುಕೊಂಡೆ ದುರಹಂಕಾರದ ಮಾತುಗಳನ್ನಾಡಿದ ಪರಭಾಷಿಕ

ಅಕ್ಟೋಬರ್‌ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ… ಈ ದೃಶ್ಯವಂತೂ ತುಂಬಾನೇ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಲು ಅಪರೂಪದ ದೃಶ್ಯ; ನೋಡಲು ತುಂಬಾನೇ ಮುದ್ದಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ