Optical Illusion: ನಿಮಗೊಂದು ಸವಾಲ್; ಬಾತುಕೋಳಿಗಳ ನಡುವೆ ಅಡಗಿರುವ ಮೀನುಗಳನ್ನು ಪತ್ತೆ ಹಚ್ಚಿ

ಇಲ್ಯೂಷನ್ ಚಿತ್ರಗಳೇ ಹಾಗೆ, ನಮ್ಮ ಕಣ್ಣಿಗೆ ಕಾಣಿಸುವುದು ಒಂದು. ಅದರಲ್ಲಿ ಅಡಗಿರುವುದು ಇನ್ನೊಂದು ಆಗಿರುತ್ತದೆ. ಇದೀಗ ಅಂತಹದ್ದೇ ಭ್ರಮೆ ಉಂಟು ಮಾಡುವ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಬಾತುಕೋಳಿಗಳ ನಡುವೆ ಮೀನುಗಳು ಅಡಗಿವೆ. ಆ ಮೀನುಗಳನ್ನು ಕಂಡು ಹಿಡಿಯುವ ಸವಾಲು ಈ ಒಗಟು ಬಿಡಿಸುವವರ ಮುಂದಿದೆ. ಈ ಟ್ರಿಕ್ಕಿ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ನೋಡಿ.

Optical Illusion: ನಿಮಗೊಂದು ಸವಾಲ್; ಬಾತುಕೋಳಿಗಳ ನಡುವೆ ಅಡಗಿರುವ ಮೀನುಗಳನ್ನು ಪತ್ತೆ ಹಚ್ಚಿ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Jan 13, 2026 | 10:14 AM

ಒಗಟಿನ ಚಿತ್ರಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ಕಷ್ಟ. ಹೀಗಾಗಿ ಹೆಚ್ಚಿನವರು ಇಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಬಿಡಿಸುವತ್ತ ಆಸಕ್ತಿ ತೋರಿಸುತ್ತಾರೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರವು ಆಪ್ಟಿಕಲ್ ಇಲ್ಯೂಷನ್‌ಗೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ. ಇದು ನಿಮ್ಮ ಮೆದುಳಿಗೆ ನೂರಕ್ಕೆ ನೂರರಷ್ಟು ಕೆಲಸ ನೀಡುತ್ತವೆ. ಇದೀಗ ಕಷ್ಟಕರವಾದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾತುಕೋಳಿಗಳ ನಡುವೆ ಅಡಗಿರುವ ಹತ್ತು ಮೀನುಗಳನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ. ಈ ಒಗಟಿನ ಚಿತ್ರ ಬಿಡಿಸಲು ಇರುವ ಕಾಲವಕಾಶ 10 ಸೆಕೆಂಡುಗಳು ಮಾತ್ರ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.

ಇಲ್ಯೂಷನ್ ಚಿತ್ರದಲ್ಲಿ ಏನು ಕಾಣಿಸಿತು?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಚಿತ್ರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಉತ್ತರವನ್ನು ನಿಗದಿತ ಸಮಯದೊಳಗೆ ಕಂಡುಹಿಡಿಯುವುದು ಕಷ್ಟವಾಗಬಹುದು. ಇದೀಗ ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಸರೋವರದಲ್ಲಿರುವ ಬಾತುಕೋಳಿಗಳು ಕಾಣಿಸುತ್ತವೆ. ಆದರೆ ಈ ಬಾತುಕೋಳಿಗಳ ನಡುವೆ 10 ಮೀನುಗಳು ಇವೆ. ಆ ಮೀನುಗಳನ್ನು ನೀವು ಪತ್ತೆ ಹಚ್ಚಬೇಕು. ಕಣ್ಣು ಅಗಲಿಸಿ ಚಿತ್ರ ನೋಡಿ ಮೀನುಗಳನ್ನು ಗುರುತಿಸಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಮೀನನ್ನು7 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ

ಮೀನುಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತೇ?

ನಿಮಗೆ ಕೊಟ್ಟಿರುವ ಹತ್ತು ಸೆಕೆಂಡುಗಳೊಳಗೆ ಮೀನುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಹೆಚ್ಚು ಚಿಂತಿಸಬೇಡಿ. ಹೆಚ್ಚಿನವರಿಗೆ ಈ ಒಗಟು ಬಿಡಿಸಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಒಂದೆರಡು ಮೀನುಗಳು ಮಾತ್ರ ಕಾಣಿಸಿರಬಹುದು. ಈ ಕೆಳಗಿನ ಚಿತ್ರದಲ್ಲಿ ಮೀನುಗಳು ಎಲ್ಲಿವೆ ಎಂದು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ