
ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಮೆದುಳಿಗೆ ಕೆಲಸ ನೀಡುವ ಒಗಟಿನ ಚಿತ್ರಗಳು ಟ್ರಿಕ್ಕಿಯಾಗಿರುತ್ತದೆ. ಆದರೆ ಕೆಲವರು ನೀರು ಕುಡಿದಷ್ಟೇ ಸಲೀಸಾಗಿ ಈ ಒಗಟಿನ ಚಿತ್ರಗಳನ್ನು ಬಿಡಿಸಿ ಬುದ್ಧಿವಂತರು ಎನಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ. ಇದೀಗ ವೈರಲ್ ಆಗಿರುವ ಈ ದಟ್ಟ ಕಾಡಿನ ಚಿತ್ರದಲ್ಲಿ ಮರೆ ಮಾಡಲಾಗಿರುವ ಕಳ್ಳ ಬೆಕ್ಕನ್ನು (cat) ಕಂಡು ಹಿಡಿಯಲು ಸಾಧ್ಯವೇ ಎಂದು ಒಮ್ಮೆ ನೋಡಿ. ಆದರೆ ನಿರ್ದಿಷ್ಟ ಸಮಯದೊಳಗೆ ಈ ಬೆಕ್ಕನ್ನು ಗುರುತಿಸಿದರೆ ನಿಮ್ಮ ಜಾಣತನ ಎಷ್ಟಿದೆ ಎಂದು ತಿಳಿಯುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಜನರನ್ನು ಸುಲಭವಾಗಿ ನಿಮ್ಮನ್ನು ಮೋಸಗೊಳಿಸುತ್ತವೆ. r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಇಲ್ಯೂಷನ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಚಿತ್ರವು ಬೆಕ್ಕನ್ನು ಹುಡುಕಿ ಎಂಬ ಶೀರ್ಷಿಕೆಯನ್ನು ಹೊಂದಿದೆ. ಮೊದಲ ನೋಟದಲ್ಲಿ ನೀವು ಮರದ ಕಾಂಡಗಳು, ಹರಡಿ ಕೊಂಡಿರುವ ಕೊಂಬೆಗಳು ಹಾಗೂ ವಸಂತಕಾಲದ ಆರಂಭದ ಹಸಿರಿನಿಂದ ತುಂಬಿದ ಶಾಂತ ಕಾಡಿನಂತೆ ಕಾಣುತ್ತದೆ. ಆದರೆ ಇದರಲ್ಲಿ ಅವಿತು ಕುಳಿತಿರುವ ಬೆಕ್ಕನ್ನು ನಿಮ್ಮ ವೀಕ್ಷಣಾ ಸಾಮರ್ಥ್ಯವನ್ನು ಬಳಸಿ ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ನಿಮಗಿರುವ ಸಮಯಾವಕಾಶ ಹತ್ತು ಸೆಕೆಂಡುಗಳು ಮಾತ್ರ.
ಇದನ್ನೂಓದಿ: ಈ ಚಿತ್ರದಲ್ಲಿ ಅಡಗಿರುವ ಎರಡು ಸಂಖ್ಯೆಗಳನ್ನು ನಿಮ್ಮಿಂದ ಹುಡುಕಲು ಸಾಧ್ಯನಾ?
ಭ್ರಮೆಯನ್ನುಂಟು ಮಾಡುವ ಈ ಚಿತ್ರಗಳಲ್ಲಿನ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಕಾಡಿನಲ್ಲಿ ಬೆಕ್ಕು ಎಲ್ಲಿದೆ ಎಂದು ನಾವು ಸುಳಿವು ನೀಡುತ್ತೇವೆ. ಬೆಕ್ಕು ಮರದ ಬುಡದಲ್ಲಿ, ಸ್ವಲ್ಪ ಬಲಭಾಗಕ್ಕೆ ವೇಷ ಮರೆಸಿ ಕುಳಿತಿದೆ. ಈ ಬೆಕ್ಕಿನ ದೇಹವು ನೆಲದ ಬಳಿಯಿರುವ ತೊಗಟೆ, ಎಲೆಗಳು ಮತ್ತು ನೆರಳುಗಳೊಂದಿಗೆ ಬಹುತೇಕ ಬೆರೆತು ಹೋಗಿದೆ. ಈ ಸುಳಿವನ್ನು ಆಧರಿಸಿ ನೀವು ಬೆಕ್ಕನ್ನು ಗುರುತಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ