
ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಟ್ರಿಕ್ಕಿ ಒಗಟಿನ ಚಿತ್ರಗಳು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಆದರೆ ಈ ಚಿತ್ರಗಳನ್ನು ಬಿಡಿಸುವಾಗ ಹೆಚ್ಚಿನವರು ಹೆಚ್ಚು ಸಮಯ ತೆಗೆದು ಕೊಳ್ಳುತ್ತಾರೆ. ಕೆಲವರಿಗೆ ಉತ್ತರ ಕಂಡುಕೊಳ್ಳುವುದು ಕಷ್ಟವಾಗಲ್ಲ. ಇದೀಗ ನಿಮ್ಮ ಮೆದುಳಿಗೆ ಕೆಲಸ ನೀಡುವ ಹಾಗೂ ದೃಷ್ಟಿ ಸಾಮರ್ಥ್ಯ ಪರೀಕ್ಷಿಸುವ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಮೂರು ಬೆಕ್ಕುಗಳ ನಡುವೆ ನಾಲ್ಕನೇ ಬೆಕ್ಕು ಎಲ್ಲಿದೆ ಎನ್ನುವ ಸವಾಲು ಇಲ್ಲಿದೆ. ಈ ಒಗಟು ಬಿಡಿಸಲು ನಿಮಗಿರುವ ಕಾಲಾವಕಾಶ 7 ಸೆಕೆಂಡುಗಳು ಮಾತ್ರ ಎನ್ನುವುದು ನೆನಪಿರಲಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಗೊಂದಲಕ್ಕೀಡು ಮಾಡುವುದು ಸಹಜ. ಈ ಚಿತ್ರವು ಅದೇ ರೀತಿಯಿದ್ದು, ನಿಮಗೆ ಇಲ್ಲಿ ಮೂರು ಬೆಕ್ಕು ಕಾಣಿಸುತ್ತದೆ. ಆದರೆ ಈ ಚಿತ್ರದಲ್ಲಿ ನಾಲ್ಕು ಬೆಕ್ಕುಗಳಿವೆ. ಆ ನಾಲ್ಕನೇ ಬೆಕ್ಕನ್ನು ನೀವು ಕಂಡು ಹಿಡಿಯಬೇಕು. ನೀವು ಇದಕ್ಕೆ ಏಳು ಸೆಕೆಂಡುಗಳೊಳಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ನಿಮ್ಮ ವೀಕ್ಷಣಾ ಕೌಶಲ್ಯ ಅತ್ಯುತ್ತಮವಾಗಿದೆ ಎಂದರ್ಥ.
ಇದನ್ನೂ ಓದಿ:ರಾಮಗಿಳಿಗಳ ನಡುವೆ ಅಡಗಿರುವ ಊಸರವಳ್ಳಿಯನ್ನು ಗುರುತಿಸಿ
ಈ ಚಿತ್ರವನ್ನು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ ನಾಲ್ಕನೇ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲವೇ. ಏಳು ಸೆಕೆಂಡುಗಳಲ್ಲಿ ಬೆಕ್ಕನ್ನು ಹುಡುಕುವುದು ಕಷ್ಟವಾಗಬಹುದು. ಕೆಲವರಿಗೆ ಮಾತ್ರ ಈ ಒಗಟು ಬಿಡಿಸಲು ಸಾಧ್ಯ. ನೀವು ಈ ಆಟದಲ್ಲಿ ವಿಫಲರಾಗಿದ್ದೀರಿ ಎಂದಾದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನಾಲ್ಕನೇ ಬೆಕ್ಕು ಎಲ್ಲಿದೆ ಎಂದು ನಾವೇ ಹೇಳುತ್ತೇವೆ. ಈ ಕೆಳಗಿನ ಚಿತ್ರವನ್ನೊಮ್ಮೆ ನೋಡಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ