Video: 750 ಮೀಟರ್ ಪ್ರಯಾಣಕ್ಕೆ 21 ನಿಮಿಷ ತೆಗೆದುಕೊಂಡೆ; ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಿಚ್ಚಿಟ್ಟ ಮಹಿಳೆ
ಚೆನ್ನೈ, ಮುಂಬೈ, ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯವಾಗಿರುತ್ತದೆ. ಹೀಗಾಗಿ ಕೆಲವರು ಟ್ರಾಫಿಕ್ ನಲ್ಲಿ ಸಿಲುಕಿ ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುತ್ತಾರೆ. ಇಲ್ಲೊಬ್ಬ ಮಹಿಳೆಗೂ ಹಾಗೆಯೇ ಆಗಿದೆ. ಹೌದು, ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿರುವ ಬೆಂಗಳೂರಿನ ಮಹಿಳೆಯೊಬ್ಬರು ಸ್ವಲ್ಪ ದೂರವನ್ನು ಕ್ರಮಿಸಲು ಹೆಚ್ಚು ಸಮಯ ತೆಗೆದುಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗಿದೆ.

ಬೆಂಗಳೂರು, ಜನವರಿ 04: ಟ್ರಾಫಿಕ್ ಎಂದರೆ ಕಣ್ಣ ಮುಂದೆ ಬರುವುದೇ ಮಾಯಾನಗರಿ ಬೆಂಗಳೂರು (Bengaluru).ಇಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ಪೀಕ್ ಟೈಮ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿರುತ್ತದೆ. ಬೆಂಗಳೂರಿನ ಟ್ರಾಫಿಕ್ ಸಿಲುಕಿದ ಮಹಿಳೆಯೂ 750 ಮೀಟರ್ ಪ್ರಯಾಣಕ್ಕೆ 21 ನಿಮಿಷ ತೆಗೆದುಕೊಂಡೆ ಎಂದು ಟ್ರಾಫಿಕ್ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗಿದ್ದು, ನಗರದಲ್ಲಿನ ದೈನಂದಿನ ಸಂಚಾರ ತೊಂದರೆಗಳನ್ನು ಎತ್ತಿ ತೋರಿಸಿದೆ.
ಅಂಜಲಿ (anjaleeee_suresh) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಕಾರಿನ ಒಳಗಿನಿಂದ ರೆಕಾರ್ಡ್ ಮಾಡಲಾಗಿದ್ದು, ವಾಹನದ ನ್ಯಾವಿಗೇಷನ್ ಪರದೆಯ ಮೇಲೆ ಕೇಂದ್ರೀಕರಿಸಿರುವುದನ್ನು ನೋಡಬಹುದು. ಕೇವಲ 750 ಮೀಟರ್ ಕ್ರಮಿಸಲು ಅಂದಾಜು 21 ನಿಮಿಷ ತೆಗೆದುಕೊಂಡಿರುವುದನ್ನು ಇಲ್ಲಿ ತೋರಿಸಲಾಗಿದೆ. ರಾಜಧಾನಿಯಲ್ಲಿ ಅನೇಕ ಪ್ರಯಾಣಿಕರು ದೈನಂದಿನ ಹೋರಾಟ ಎಂದು ವಿವರಿಸಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ:ಜೀವನದ ಕಠಿಣ ಕ್ಷಣ: ಚರ್ಚ್ ಸ್ಟ್ರೀಟ್ನಲ್ಲಿ ಕಂಡ ಅದ್ಭುತ ದೃಶ್ಯ, ಕಲಿಕೆಗಾಗಿ ಈ ಹುಡುಗಿಯ ಹೋರಾಟ ನೋಡಿ
ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಡೆದುಕೊಂಡು ಹೋಗುವುದು ಉತ್ತಮ ಎಂದು ಹೇಳಿದ್ದಾರೆ. ಮತ್ತೊಬ್ಬರು, ನನಗೂ ಇಂತಹ ಅನುಭವ ಆಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಗರದ ವಿವಿಧ ಭಾಗಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
