Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಾಲ್ಕನೇ ಬೆಕ್ಕನ್ನು ಹುಡುಕಬಲ್ಲಿರಾ
ಒಗಟಿನ ಆಟಗಳನ್ನು ಬಿಡಿಸುವುದು ಮೆದುಳಿಗೆ ಕೆಲಸ ಕೊಟ್ಟಂತೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಚಿತ್ರದಳ್ಳಿ ಮೂರು ಬೆಕ್ಕುಗಳಿಗೆ. ನಾಲ್ಕನೇ ಬೆಕ್ಕು ಎಲ್ಲಿದೆ ಎಂದು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ.

ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಟ್ರಿಕ್ಕಿ ಒಗಟಿನ ಚಿತ್ರಗಳು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಆದರೆ ಈ ಚಿತ್ರಗಳನ್ನು ಬಿಡಿಸುವಾಗ ಹೆಚ್ಚಿನವರು ಹೆಚ್ಚು ಸಮಯ ತೆಗೆದು ಕೊಳ್ಳುತ್ತಾರೆ. ಕೆಲವರಿಗೆ ಉತ್ತರ ಕಂಡುಕೊಳ್ಳುವುದು ಕಷ್ಟವಾಗಲ್ಲ. ಇದೀಗ ನಿಮ್ಮ ಮೆದುಳಿಗೆ ಕೆಲಸ ನೀಡುವ ಹಾಗೂ ದೃಷ್ಟಿ ಸಾಮರ್ಥ್ಯ ಪರೀಕ್ಷಿಸುವ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಮೂರು ಬೆಕ್ಕುಗಳ ನಡುವೆ ನಾಲ್ಕನೇ ಬೆಕ್ಕು ಎಲ್ಲಿದೆ ಎನ್ನುವ ಸವಾಲು ಇಲ್ಲಿದೆ. ಈ ಒಗಟು ಬಿಡಿಸಲು ನಿಮಗಿರುವ ಕಾಲಾವಕಾಶ 7 ಸೆಕೆಂಡುಗಳು ಮಾತ್ರ ಎನ್ನುವುದು ನೆನಪಿರಲಿ.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸುತ್ತದೆ?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಗೊಂದಲಕ್ಕೀಡು ಮಾಡುವುದು ಸಹಜ. ಈ ಚಿತ್ರವು ಅದೇ ರೀತಿಯಿದ್ದು, ನಿಮಗೆ ಇಲ್ಲಿ ಮೂರು ಬೆಕ್ಕು ಕಾಣಿಸುತ್ತದೆ. ಆದರೆ ಈ ಚಿತ್ರದಲ್ಲಿ ನಾಲ್ಕು ಬೆಕ್ಕುಗಳಿವೆ. ಆ ನಾಲ್ಕನೇ ಬೆಕ್ಕನ್ನು ನೀವು ಕಂಡು ಹಿಡಿಯಬೇಕು. ನೀವು ಇದಕ್ಕೆ ಏಳು ಸೆಕೆಂಡುಗಳೊಳಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ನಿಮ್ಮ ವೀಕ್ಷಣಾ ಕೌಶಲ್ಯ ಅತ್ಯುತ್ತಮವಾಗಿದೆ ಎಂದರ್ಥ.
ಇದನ್ನೂ ಓದಿ:ರಾಮಗಿಳಿಗಳ ನಡುವೆ ಅಡಗಿರುವ ಊಸರವಳ್ಳಿಯನ್ನು ಗುರುತಿಸಿ
ನಾಲ್ಕನೇ ಬೆಕ್ಕು ನಿಮ್ಮ ಕಣ್ಣಿಗೆ ಬಿದ್ದಿತೇ?
ಈ ಚಿತ್ರವನ್ನು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ ನಾಲ್ಕನೇ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲವೇ. ಏಳು ಸೆಕೆಂಡುಗಳಲ್ಲಿ ಬೆಕ್ಕನ್ನು ಹುಡುಕುವುದು ಕಷ್ಟವಾಗಬಹುದು. ಕೆಲವರಿಗೆ ಮಾತ್ರ ಈ ಒಗಟು ಬಿಡಿಸಲು ಸಾಧ್ಯ. ನೀವು ಈ ಆಟದಲ್ಲಿ ವಿಫಲರಾಗಿದ್ದೀರಿ ಎಂದಾದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನಾಲ್ಕನೇ ಬೆಕ್ಕು ಎಲ್ಲಿದೆ ಎಂದು ನಾವೇ ಹೇಳುತ್ತೇವೆ. ಈ ಕೆಳಗಿನ ಚಿತ್ರವನ್ನೊಮ್ಮೆ ನೋಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
