
ಆಪ್ಟಿಕಲ್ ಇಲ್ಯೂಷನ್ (optical illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಖುಷಿನೇ ಬೇರೆ. ಆದರೆ ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಇಲ್ಲೊಂದು ಕಠಿಣ ಸವಾಲು ಇದೆ. ಬಂಡೆಗಳೇ ತುಂಬಿ ಕೊಂಡಿರುವ ಈ ಬೆಟ್ಟದ ಮೇಲೆ ಕುರಿಯೊಂದು ಅಡಗಿ ಕುಳಿತಿದೆ. ನೀವು ಒಗಟು ಬಿಡಿಸೋದ್ರಲ್ಲಿ ಪಂಟಾರಾಗಿದ್ರೆ ಕೇವಲ ಹತ್ತರಿಂದ ಮೂವತ್ತು ಸೆಕೆಂಡುಗಳ ಒಳಗೆ ಈ ಪ್ರಾಣಿಯನ್ನು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.
ಫೈಂಡ್ ದಿ ಸ್ನೈಪರ್ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ತುಂಬಾನೇ ಟ್ರಿಕ್ಕಿಯಾಗಿದೆ. ಈ ಚಿತ್ರದಲ್ಲಿ ದೊಡ್ಡದಾದ ಕಲ್ಲು ಬಂಡೆಗಳಿಂದ ಆವೃತ್ತವಾದ ಬೆಟ್ಟದ ಇಳಿಜಾರನ್ನು ನೋಡಬಹುದು. ಆದರೆ ಈ ಬೆಟ್ಟದಲ್ಲಿ ದೊಡ್ಡ ಕೊಂಬಿನ ಕುರಿಯೊಂದು ಅಡಗಿದೆ. ಅದನ್ನು ಗುರುತಿಸುವ ಸವಾಲು ಇದೆ ನಿಮ್ಮ ಮುಂದಿದೆ. 10 ರಿಂದ 30 ಸೆಕೆಂಡುಗಳಲ್ಲಿ ನೀವು ಕುರಿಯನ್ನು ಗುರುತಿಸಿದರೆ ನಿಮ್ಮ ಮೆದುಳು ಚುರುಕಾಗಿದೆ ಎಂದರ್ಥ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಬಲ್ಲಿರಾ
ಬಂಡೆ ಕಲ್ಲಿನಿಂದ ಆವೃತ್ತವಾದ ಈ ಭೂಪ್ರದೇಶದಲ್ಲಿ ಜಾಣತನದಿಂದ ಅಡಗಿರುವ ದೊಡ್ಡ ಕೊಂಬಿನ ಕುರಿಯನ್ನು ಗುರುತಿಸುವುದು ಕಷ್ಟಕರ. ಈ ಕುರಿಯ ಮೈ ಬಣ್ಣವು ಈ ಪ್ರದೇಶದಲ್ಲಿ ಬೆರೆತು ಹೋಗಿದೆ. ಕಣ್ಣು ಅಗಲಿಸಿ ಎಷ್ಟೇ ಹುಡುಕಿದರೂ ಕುರಿ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಅಡಗಿರುವ ಕುರಿಯನ್ನು ನಾವು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿ ನಿಮಗೆ ಈ ಪ್ರಾಣಿ ಕಾಣುವಂತೆ ಮಾಡಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ